ಯಶಸ್ವಿಯಾಗಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ ಎಂದು  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ವಿಶೇಷ ಪ್ರಾರ್ಥನೆ

Spread the love

ಯಶಸ್ವಿಯಾಗಿ ಕುಮಾರಸ್ವಾಮಿ ಬಜೆಟ್ ಮಂಡಿಸಲಿ ಎಂದು  ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ವತಿಯಿಂದ ವಿಶೇಷ ಪ್ರಾರ್ಥನೆ

ನಾಳೆ ನಡೆಯಲಿರುವ ರಾಜ್ಯದ ಐತಿಹಾಸಿಕ ಬಜೆಟ್ ಮಂಡನೆಯೂ ಯಾವುದೇ ಆತಂಕ.ಅಡೆತಡೆ. ಸಮಸ್ಯೆ ಇಲ್ಲದೆ, ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ* ಅವರು ಯಶಸ್ವಿಯಾಗಿ ಮಂಡಿಸಲಿ ಎಂದು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ವತಿಯಿಂದ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಏಕರುದ್ರಾಭಿಷೇಕ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ಹಾಗೂ  ಜಿಲ್ಲೆಯ ನಾಯಕರ ಸಮ್ಮುಖದಲ್ಲಿ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ರಾಜ್ಯದ ಬಡವರ ರೈತರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ ಎಂದರೆ ಅದು ಎಚ್ ಡಿ ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿಸಿದರು.
ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ ಬಿ ಸದಾಶಿವ ಮಾತನಾಡಿ ಸರ್ವ ಜಾತಿ. ಸರ್ವ ಧರ್ಮದ. ಬಜೆಟ್ ಮಂಡನೆಯಾಗಲಿದ್ದು.ರೈತರ. ಬಡವರ. ಶೋಷಿತರ. ದಿನ ದಲಿತರ ನಾಯಕನಾಗಿ ಮುಖ್ಯಮಂತ್ರಿಗಳು ಯಾವುದೇ ಆತಂಕವಿಲ್ಲದೆ ಬಜೆಟ್ ಮಂಡಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ನಾಯಕರುಗಳಾದ ಜಿಲ್ಲಾ ಕಾರ್ಯಧ್ಯಕ್ಷ ರಾಮ್ ಗಣೇಶ್. ಜಿಲ್ಲಾ ವಕ್ತಾರ ಸುಶೀಲ್ ನೋರೋನ, ದಕ ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ ಗೋಪಾಲಕೃಷ್ಣ ಅತ್ತಾವರ.ಪುಷ್ಪರಾಜನ್. ಗಂಗಾಧರ್ ಉಳ್ಳಾಲ್. ದಿವಾಕರ್ ಶೆಟ್ಟಿ ತೋಡಾರ್, ಅಜೀಜ್ ಕುದ್ರೋಳಿ.ಮುನೀರು ಮುಕ್ಕಚೇರಿ. ವೀಣಾ ಶೆಟ್ಟಿ. ಮಧುಸೂದನ ಗೌಡ.  ಶಾಲಿನಿ. ಕವಿತಾ. ಶ್ರೀನಾಥ್ ರೈ ಇನ್ನು ಅನೇಕ ಜಿಲ್ಲಾ ನಾಯಕರುಗಳು ಭಾಗವಹಿಸಿದ್ದರು

Spread the love