ಯಶ್ಪಾಲ್ ಸುವರ್ಣ‌ ಶಾಸಕರಾಗಿ ವ್ಯಕ್ತಿಯೊಬ್ಬರ ಭಾವಚಿತ್ರಕ್ಕೆ ಉಗುಳುವ ಕೃತ್ಯ ಹೇಯವಾದುದು: ಸಿಪಿಐಎಂ

Spread the love

ಯಶ್ಪಾಲ್ ಸುವರ್ಣ‌ ಶಾಸಕರಾಗಿ ವ್ಯಕ್ತಿಯೊಬ್ಬರ ಭಾವಚಿತ್ರಕ್ಕೆ ಉಗುಳುವ ಕೃತ್ಯ ಹೇಯವಾದುದು: ಸಿಪಿಐಎಂ
 

ಉಡುಪಿ: ಉಡುಪಿ ಬಿಜೆಪಿ ಶಾಸಕ ಯಶ್ಪಾಲ್ ಸುವರ್ಣ ಸಾಮಾಜಿಕ ಕಾರ್ಯಕರ್ತರಾದ ಮಂಗಳೂರಿನ ಎಂ.ಜಿ. ಹೆಗಡೆಯವರ ಭಾವಚಿತ್ರಕ್ಕೆ ಉಗುಳುವ ಕೃತ್ಯ ಹೇಯವಾದುದು ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ಟೀಕಿಸಿದೆ.

ಪ್ರಜಾಪ್ರಭುತ್ವದಲ್ಲಿ ಅಭಿಪ್ರಾಯ ಭೇದಗಳು ಸಹಜ. ಯಾರೇ ತಪ್ಪು ಮಾಡಿದರೂ ಪ್ರತಿಭಟಿಸಬೇಕು ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಕ ಕಾನೂನು ಕ್ರಮ ಕೈಗೊಳ್ಳಬೇಕು.

ಬದಲಾಗಿ ಜನರನ್ನು ಪ್ರಚೋದಿಸುವ ಕೃತ್ಯಕ್ಕೆ ಮುಂದಾಗಬಾರದು. ಅದರಲ್ಲೂ ಶಾಸಕರಾದವರು ಬೆಲೆ ಏರಿಕೆ, ನಿರುದ್ಯೋಗ, ಆದಾಯ ಕುಸಿತ ಮೊದಲಾದ ಸಮಸ್ಯೆಗಳು ಜನರನ್ನು ಕಾಡುತ್ತಿರುವಾಗ ಪ್ರಚೋದನಾತ್ಮಕ ಕೃತ್ಯಗಳಿಗೆ ಒತ್ತು ನೀಡುತ್ತಿರುವುದು ಅಕ್ಷಮ್ಯ. ಶಾಸಕರ ಈ ಮನೋಭಾವ ಖಂಡನೀಯ ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love