ಯಾರಿಗೂ ಅವಮಾನಿಸಲು ಹೇಳಿಕೆ ನೀಡಿಲ್ಲ : ಖಾದರ್ ಸ್ಪಷ್ಟನೆ

Spread the love

ಯಾರಿಗೂ ಅವಮಾನಿಸಲು ಹೇಳಿಕೆ ನೀಡಿಲ್ಲ : ಖಾದರ್ ಸ್ಪಷ್ಟನೆ

ಮಂಗಳೂರು: ಕರಾವಳಿ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸಲು ಮಂಗಳೂರಿಗೆ ಆಗಮಿಸಿರುವ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರನ್ನು ವಿರೋಧೀಸುವ ಶಕ್ತಿಗಳು ಅವರ ಚಪ್ಪಲಿಗೂ ಸಮಾನರಲ್ಲ ಎಂಬ ಸಚಿವ ಯು ಟಿ ಖಾದರ್ ಹೇಳಿಕೆ ವಿವಾದಕ್ಕೆ ಕಾರಣವಾದ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು ಯಾರನ್ನೂ ನೋವುಂಟು ಮಾಡಲು ಅಥವಾ ಅವಮಾನಿಸಲು ಹೇಳಕೆ ನೀಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನಗರದ ಐಎಂಎ ಭವನದಲ್ಲಿ ದೈನಿಕವೊಂದರ ಕಾರ್ಯಕ್ರಮದಲ್ಲಿ ಸಂವಿಧಾನ ವಿರೋಧಿಗಳಿಗೆ ಚಪ್ಪಲಿ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ನನ್ನ ಹೇಳಿಕೆಯ ಹಿಂದೆ ಯಾರನ್ನೂ ಅವಮಾನಿಸುವ ಉದ್ದೇಶ ಹೊಂದಿಲ್ಲ. ಸಂವಿಧಾನ್ಮತಕವಾಗಿ, ಆಯ್ಕೆಗೊಂಡ ಅನ್ಯರಾಜ್ಯದ ಮುಖ್ಯಮಂತ್ರಿಯೊಬ್ಬರು ಮಂಗಳೂರಿಗೆ ಭೇಟಿ ನೀಡುವಾಗ ಅವರನ್ನು ಅತಿಥಿಗಳಂತೆ ಸತ್ಕರಿಸುವ ಮತ್ತು ಗೌರವಿಸುವ ಕೆಲಸ ಆಗಬೇಕು ಎಂದು ಹೇಳಿದ್ದೇನೆ ಎಂದಿದ್ದಾರೆ.


Spread the love

1 Comment

  1. One more congress leader from minority community providing ‘clarification’ on earlier comments!! Panic in local Congress? smiles…

Comments are closed.