ಯುವತಿಗೆ ಇರಿದು, ಕತ್ತು ಕುಯ್ದುಕೊಂಡ ಯುವಕ

ಯುವತಿಗೆ ಇರಿದು, ಕತ್ತು ಕುಯ್ದುಕೊಂಡ ಯುವಕ

ಉಳ್ಳಾಲ: ಪ್ರೀತಿಸಲು ಒಲ್ಲದ ಯುವತಿಗೆ ಯುವಕನೋರ್ವ ಇರಿದು ನಂತರ ತಾನೂ ಕತ್ತು ಕುಯ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬಗಂಬಿಲದಲ್ಲಿ ನಡೆದಿದೆ.

ಬಗಂಬಿಲ ನಿವಾಸಿ ದೀಕ್ಷ (20) ಇರಿತಕ್ಕೊಳಗಾದ ಯುವತಿ. ಸುಶಾಂತ್ (22) ಆತ್ಮಹತ್ಯೆಗೆ ಯತ್ನಿಸಿದ ಯುವಕ ಎಂದು ಗುರುತಿಸಲಾಗಿದೆ.

ಯುವಕನ ಏಕಮುಖ ಪ್ರೀತಿಯೇ ಘಟನೆಗೆ ಕಾರಣವೆಂದು ಹೇಳಲಾಗುತ್ತಿದ್ದು, ಇಬ್ಬರಿಗೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.