ಯುವತಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನ ಬಂಧನ

Spread the love

ಯುವತಿಯರೊಂದಿಗೆ ಅಸಭ್ಯ ವರ್ತನೆ ತೋರಿದ ಯುವಕನ ಬಂಧನ

ಮಂಗಳೂರು: ಕಾಲೇಜು ಹುಡುಗಿಯರನ್ನು ಮತ್ತು ಮಹಿಳೆಯರನ್ನು ಚುಡಾಯಿಸುತ್ತಿದ್ದ ಯುವಕನೋರ್ವನನ್ನು ಸುರತ್ಕಲ್ ಪೋಲಿಸರು  ಬಂಧಿಸಿದ್ದಾರೆ. ಬಂಧಿತನನ್ನು ಶೋಧನ್ ಪೂಜಾರಿ (27) ಎಂದು ಗುರುತಿಸಲಾಗಿದೆ.

ಮಾಹಿತಿಗಳ ಪ್ರಕಾರ ಶೋಧನ್ ಪೂಜಾರಿ ಸದಾ ಕಾಲೇಜಿಗೆ ತೆರಳುವ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದು ಮಹಿಳೆಯರು ಮತ್ತು ಹುಡುಗಿಯರಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಮಹಿಳೆಯರು ವಿದ್ಯಾರ್ಥಿನಿಯರು ನಡೆದಾಡುವಾಗ ಅಡ್ಡಗಟ್ಟಿ ಅವರಿಗೆ ತೊಂದರೆ ನೀಡುತ್ತಾ ಅಸಭ್ಯವಾಗಿ ವರ್ತಿಸಿ ಅಲ್ಲಿಂದ ಪರಾರಿಯಾಗುತ್ತಿದ್ದನು.

ಶೋಧನ್ ಪೂಜಾರಿಯ ಉಪಟಳದಿಂದ ರೋಸಿ ಹೋಗಿದ್ದ ಪರಿಸರದ ಯುವಕರು ಆತನನ್ನು ಹಿಡಿಯುವ ಹೊಂಚು ಹಾಕಿದ್ದರು. ಅದರಂತೆ ಶನಿವಾರ ಆತ ಹುಡುಗಿಯರೊಂದಿಗೆ ಅಸಭ್ಯವಾಗಿ ವರ್ತಿಸುವ ವೇಳೆ ರೆಡ್ ಹ್ಯಾಂಡ್ ಆಗಿ ಆತನನ್ನು ಹಿಡಿದು ಪೋಲಿಸರಿಗೆ ಒಪ್ಪಿಸಿದ್ದಾರೆ.

ಸುರತ್ಕಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ಈತನನ್ನು ನ್ಯಾಯಾಲಯದ ಎದುರು ಹಾಜರು ಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


Spread the love

1 Comment

Comments are closed.