ಯುವ ಟೈಗರ್ಸ್ ವತಿಯಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸಿಂಚನ ಅವರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ವಿತರಣೆ

ಯುವ ಟೈಗರ್ಸ್ ವತಿಯಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸಿಂಚನ ಅವರ ವೈದ್ಯಕೀಯ ಚಿಕಿತ್ಸೆಗೆ ಸಹಾಯಧನ ವಿತರಣೆ

ಉಡುಪಿ: ಮಂಚಿ ದುಗ್ಲಿಪದವು ಯುವ ಟೈಗರ್ಸ್ ಹಾಗೂ ಯುವ ಸೇವಾ ಸಂಘದ ವತಿಯಿಂದ ನವರಾತ್ರಿ ಹಬ್ಬದ ಪ್ರಯುಕ್ತ ವೇಷಧರಿಸಿ ಸಂಗ್ರಹಿಸಿದ 2,01,780 ಲಕ್ಷ ರೂ. ಮೊತ್ತವನ್ನು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಸಾಬ್ರಕಟ್ಟೆ ನಿವಾಸಿ ಸಿಂಚನ ಅವರ ವೈದ್ಯಕೀಯ ಚಿಕಿತ್ಸೆಗೆ ರವಿವಾರ ಸಂಘದ ಆವರಣದಲ್ಲಿ ಹಸ್ತಾಂತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಯೋಧ ಅಶೋಕ್ ಕೋಟ್ಯಾನ್ ವಿದ್ಯಾರ್ಥಿ ಸಿಂಚನ ಅವರಿಗೆ ಸಹಾಯಧನದ ಚೆಕ್ ವಿತರಿಸಿದರು. ಪೊಲೀಸ್ ಸಿಬ್ಬಂದಿ ರಾಮಚಂದ್ರ, ನಿವೃತ್ತ ಸೈನಿಕ ಚಂದ್ರಶೇಖರ್, ಸ್ಥಳೀಯರಾದ ಸುಮತಿ ಶೇರಿ ಗಾರ್, ವಿಶ್ವಮೂರ್ತಿ ಆಚಾರ್ಯ, ಗೋಪಾಲ ಪೂಜಾರಿ ಮಂಚಿ, ದಿನೇಶ್ ಶಾನುಭಾಗ್, ಅಂಗನವಾಡಿ ಶಿಕ್ಷಕಿ ಶಕುಂತಲಾ, ಸಂಘದ ಅಧ್ಯಕ್ಷ ಸಂದೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಕ್ರಂ ಮಂಚಿ ಸ್ವಾಗತಿಸಿದರು. ಸತೀಶ್ ಶೆಟ್ಟಿ ದುಗ್ಲಿಪದವು ವಂದಿಸಿದರು. ವಿನೋದ್ ಮಂಚಿ ಕಾರ್ಯಕ್ರಮ ನಿರೂಪಿಸಿದರು.

Leave a Reply

  Subscribe  
Notify of