ಯು.ಎ.ಇ. ಯ ಕನ್ನಡಿಗರ ಮೆಚ್ಚಿನ ಕಂಠಸಿರಿಯ ಗಾಯಕಿ – ಸಾಯಿ ಮಲ್ಲಿಕಾ

Spread the love

 

ಯು.ಎ.ಇ. ಯ ಕನ್ನಡಿಗರ ಮೆಚ್ಚಿನ ಕಂಠಸಿರಿಯ ಗಾಯಕಿ – ಸಾಯಿ ಮಲ್ಲಿಕಾ

ನವೆಂಬರ್ ತಿಂಗಳು ಕನರ್ಾಟಕ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಕನ್ನಡ ಭಾಷೆ, ಕಲೆ, ಸಂಸ್ಕೃತಿಯನ್ನು ವೈಭವೀಕರಿಸಿ ಕಲಾ ಸೇವೆಯನ್ನು ಮಾಡಿರುವ ಅನಿವಾಸಿ ಕನ್ನಡಿಗ ಕಲಾವಿದರ ಸಂದರ್ಶನ ಮಾಲಿಕೆಯಲ್ಲಿ ಸುಮಧುರ ಕಂಠಸಿರಿಯ ಗಾಯಕಿ ಹಾಗೂ ಕಲಾವಿದೆ ಶ್ರೀಮತಿ ಸಾಯಿ ಮಲ್ಲಿಕಾ ರವರ ವಿಶೇಷ ಲೇಖನ….

image003sai-malika-20161029-01-003

image004sai-malika-20161029-01-004

ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ವಿವಿಧ ಭಾಗಗಳಲ್ಲಿ ಸಂಘಟಿತರಾಗಿ ಕನರ್ಾಟಕ ಸಂಘ , ಭಾಷಾ ಸಂಘಟನೆ, ಜಾತಿ ಸಮುದಾಯದ ಸಂಘಟನೆಗಳನ್ನು ಸ್ಥಾಪಿಸಿಕೊಂಡು ಕನರ್ಾಟಕದ ಕಳೆದ ಮೂರು ನಾಲ್ಕು ದಶಕಗಳಿಂದ ಕನರ್ಾಟಕದ ಕಲೆ, ಭಾಷೆ ಸಂಸ್ಕೃತಿಯನ್ನು ವೈಭವೀಕರಿಸಿಕೊಂಡು ಬರುತಿದ್ದಾರೆ. ಪ್ರತಿವರ್ಷ ನವೆಂಬರ್ ತಿಂಗಳಿನಲ್ಲಿ ಕನರ್ಾಟಕ ರಾಜ್ಯೋತ್ಸವ ಆಚರಣೆ, ಇನ್ನಿತರ ತಿಂಗಳಿನಲ್ಲಿ ವಿಹಾರಕೂಟ, ವಾಷರ್ಿಕೋತ್ಸವ, ಕ್ರೀಡಾಕೂಟ, ಸಂಗೀತ ರಸಮಂಜರಿ, ನಾಟಕ, ಯಕ್ಷಗಾನ, ಸಾಹಿತ್ಯ ಸಮ್ಮೇಳನ ಹಾಗೂ ಇನ್ನಿತರ ಕನ್ನಡ ಪರ ಚಟುವಟಿಕೆಗಳು ನಿರಂತರವಾಗಿ ಆಚರಣೆಗಳು ಆಯೋಜಿಸಲ್ಪಡುತಿದೆ.

image001sai-malika-20161029-01-001 image002sai-malika-20161029-01-002image005sai-malika-20161029-01-005 image006sai-malika-20161029-01-006

ಯು.ಎ.ಇ. ಯ ಕನ್ನಡಪರ ಸಾಂಸ್ಕೃತಿಕ ವೇದಿಕೆಯಲ್ಲಿ ತಮ್ಮ ಅಪೂರ್ವ ಕಂಠಸಿರಿಯಲ್ಲಿ ಗಾಯಕಿ ಸಾಯಿ ಮಲ್ಲಿಕಾ ಕೊಲ್ಲಿ ನಾಡಿನ ಕನ್ನಡಿಗರ ಮನಸೆಳೆದಿದ್ದಾರೆ.

ಗಾಯಕಿ ಹಾಗೂ ಕಲಾವಿದೆ ಶ್ರೀಮತಿ ಸಾಯಿ ಮಲ್ಲಿಕಾ ಹೆಜ್ಜೆಗುರುತು…..

ಸಾಯಿ ಮಲ್ಲಿಕಾ ಮೂಲತ ಕನರ್ಾಟಕದ ಕಡಲತೀರದ ಮಂಗಳೂರಿನವರು. ತಾಯಿ ಶ್ರೀಮತಿ ಪ್ರಫುಲ್ಲಾ ಜೆ. ರಾವ್. ತಂದೆ ಶ್ರೀ ಜಯರಾಮ್ ರಾವ್. ನಿವೃತ್ತ ಪಿ.ಡಬ್ಲ್ಯು. ಡಿ. ಇನ್ಸ್ ಪೆಕ್ಟರ್, ತಾಯಿ ನಿವೃತ್ತ ಹೆಲ್ತ್ ಸೂಪರ್ ವೈಸರ್. ತಂದೆ ತಾಯಿ ಸಕರ್ಾರಿ ಸೇವೆಯಲ್ಲಿ ಇದ್ದುದರಿಂದ ಬೇರೆ ಬೇರೆ ಊರಿಗೆ ವಗರ್ಾವಣೆಯಿಂದಾಗಿ ಬೇರೆ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯಬೇಕಾಯಿತು. ಪ್ರಾಥಮಿಕ ಹಂತ ಕುಂದಾಪುರ ತಾಲೂಕಿನ ಕೋಟಾ, ಸಾಲಿಗ್ರಾಮ, ಬಾಕರ್ೂರು, ಮತ್ತು ಮಂಡ್ಯದಲ್ಲಿ ಪ್ರೌಢ ಶಿಕ್ಷಣ ಕೋಟಾ ವಿವೇಕ ಜೂನಿಯರ್ ಕಾಲೇಜಿನಲ್ಲಿ, ಪದವಿಯನ್ನು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಡೆದರೆ ಎಂ. ಎ. ಸ್ನಾತಕೋತರ ಪದವಿಯನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.

image008sai-malika-20161029-01-008 image009sai-malika-20161029-01-009 image010sai-malika-20161029-01-010 image011sai-malika-20161029-01-011 image012sai-malika-20161029-01-012

ಸಕಲ ವಿದ್ಯಾಪಾರಂಗತರು ತಮ್ಮ ತಂದೆಯವರಿಂದ ಸಾಯಿ ಮಲ್ಲಿಕಾ ಭರತನಾಟ್ಯ, ಸಂಗೀತ, ಹಾಮರ್ೋನಿಯಂ, ಪ್ರಥಮ ಹಂತದಲ್ಲಿ ಕಲಿಸಿ ಮೂರುವರೆ ವರ್ಷದಲ್ಲೆ ಪ್ರಥಮಬಾರಿಗೆ ವೇದಿಕೆಯಲ್ಲಿ ಭರತನಾಟ್ಯದ ಮೂಲಕ ಪ್ರವೇಶ ಪಡೆದವರು. ಕನರ್ಾಟಕ್ ಸಂಗೀತದಲ್ಲಿ ಸೀನಿಯರ್, ಭರತನಾಟ್ಯಂನಲ್ಲಿ ವಿಧ್ವತ್ ಹಾಗೂ ಯಕ್ಷಗಾನದಲ್ಲಿ ತರಭೇತಿಯನ್ನು ಪಡೆದಿರುವ ಇವರು, ನಂತರ ಶಾಸ್ತ್ರೀಯವಾಗಿ ಸಂಗೀತವನ್ನು ಉಡುಪಿಯ ಪ್ರಸಿದ್ಧ ವಿದ್ವಾನ್ ಶ್ರೀ ಮದ್ದೂರು ಬಾಲ ಸುಬ್ರಹ್ಮಣ್ಯಂರವರಿಂದ ಕಲಿತರು. ನಂತರ ಭರತನಾಟ್ಯದಲ್ಲಿ ಜೂನಿಯರ್ ಮತ್ತು ಸೀನಿಯರ್ ವಿದ್ವಾನನ್ನು ಸುರತ್ಕಲ್ನ ಪ್ರಖ್ಯಾತ ವಿದ್ವಾನ್ ಶ್ರೀ ಚಂದ್ರಶೇಖರ ನಾವಡರಿಂದ ಕಲಿತರು. ಬಡಗು ತಿಟ್ಟು ಯಕ್ಷಗಾನವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಪ್ರಸಿದ್ದ ಶ್ರೀ ಮಾಗರ್ೊಳಿ ಗೋವಿಂದಾ ಶೇರಿಗಾರ್ ಅವರಲ್ಲಿ ಕಲಿತರು.

ಮಲ್ಲಿಕಾರವರ ತಾಯಿಯವರು ಮಹಿಳಾ ಮಂಡಳಿಯ ಅಧ್ಯಕ್ಷೆಯಾಗಿರುವಾಗ, ಮಹಿಳಾ ಮಂಡಳಿಯ ಹಲವಾರು ಕಾರ್ಯಕ್ರಮಗಳಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮ ನೀಡುವ ಅವಕಾಶ ದೊರೆಯುತಿತ್ತು. ಇವರ ಪ್ರತಿಭೆಯನ್ನು ಕಂಡು ಇವರನ್ನು ಹಲವಾರು ತಾಲೂಕು ಮಟ್ಟದ, ಜಿಲ್ಲಾ ಮಟ್ಟದಲ್ಲಿ ನಡೆಯುವ ಯುವತಿ ಮಂಡಲದ ಸ್ಪಧರ್ೆಗಳಲ್ಲಿ ಭಾಗವಹಿಸುವ ಅವಕಾಶ ದೊರೆತು ಹಲೌಬಾರಿ ಪ್ರಥಮ ಸ್ಥಾನಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.

image013sai-malika-20161029-01-013 image014sai-malika-20161029-01-014 image015sai-malika-20161029-01-015 image016sai-malika-20161029-01-016 image017sai-malika-20161029-01-017

ತಮ್ಮ ಹದಿಮೂರನೆಯ ವಯಸಿನಲ್ಲೆ ಯಕ್ಷಗಾನದಲ್ಲಿ ಬಣ್ಣ ಹಚ್ಚಿ ಬಲರಾಮ, ಅಜರ್ುನ, ಕಿರಾತ, ಸುಭದ್ರೆ, ಇನ್ನು ಹಲವಾರು ಪಾತ್ರದ ಮೂಲಕ ಯಕ್ಷಗಾನ ರಂಗದಲ್ಲಿ ತಮ್ಮ ಅಭಿನಯದ ಮೂಲಕ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಕಾಲೇಜು ಹಂತದಲ್ಲಿ ಹಲವಾರು ಕಡೆಗಳಲ್ಲಿ ಸ್ಪಧರ್ೆಯಲ್ಲಿ ಭಾಗವಹಿಸಿ ಬಹುಮಾನ ತಮ್ಮದಾಗಿಸಿಕೊಂಡರೆ ಇನ್ನು ಹಲವಾರು ಸಾಂಸ್ಕೃತಿಕ ವೇದಿಕೆಗಳಲ್ಲಿ ಅಪಾರ ಜನ ಮೆಚ್ಚುಗೆಯನ್ನು ಪಡೆದಿರುವ ಸಾಯಿ ಮಲ್ಲಿಕಾ ರವರು ಬ್ರಹ್ಮಾವರದಲ್ಲಿ ಪ್ರಸಿದ್ದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ನಲ್ಲಿ ಅಧ್ಯಪಕಿಯಾಗಿ ಸೇರ್ಪಡೆಯಾದರು. ತಮ್ಮ ಪಾಠಪ್ರವಚನದ ಭೋದನೆಯೊಂದಿಗೆ ಪಠ್ಯೆತರ ಚಟುವಟಿಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಾಲಾ ಮಕ್ಕಳಿಗೆ ಸಂಗೀತ, ನೃತ್ಯ ಅಭ್ಯಾಸ ನೀಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ಸಂಗೀತ, ನೃತ್ಯ ಪ್ರದರ್ಶನ ನೀಡುವ ಅವಕಾಶ ಕಲ್ಪಿಸಿ ಕೊಡುತಿದ್ದರು. ಸ್ವತಹ ತಾವು ಕೂಡ ಅಂತರಶಾಲಾ ಶಿಕ್ಷಕರ ಸ್ಪಧರ್ೆಯಲ್ಲಿಯೂ ಭಾಗವಹಿಸಿ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ರೋಟರಾಕ್ಟ್, ರೋಟರಿ, ಲಯನ್ಸ್ ಕ್ಲಬ್ನ ವಿಶೇಷ ಕಾರ್ಯಕ್ರಮ, ಸಮ್ಮೇಳನಗಳಲ್ಲಿ ಸಂಗೀತ, ನೃತ್ಯ, ಫ್ಯಾಶನ್ ಶೋ ದ ಮೂಲಕ ಹಲವಾರು ಕಾರ್ಯಕ್ರಮ ನೀಡಿದ್ದಾರೆ.

2000 ರಲ್ಲಿ ರೋಟರಿ ಸಮ್ಮೇಳನದಲ್ಲಿ ಆಯೋಜಿಸಿರುವ ಸ್ಪಧರ್ೆಯಲ್ಲಿ ಭಾಗವಹಿಸಿ ಅತ್ಯಂತ ಹೆಚ್ಚು ಅಂಕ ಗಳಿಸಿ “ಮಿಸ್ ಮಿಲೆನಿಯಂ ಅವಾಡರ್್” ತಮ್ಮದಾಗಿಸಿ ಕೊಂಡ ಸಾಯಿ ಮಲ್ಲಿಕಾ ನಂತರ ಶೀಮತಿಯಾದರು. ಶ್ರೀ ನರೇಂದ್ರ ರವರ ಬಾಳಾಸಂಗಾತಿಯಾಗಿ ಹುಟ್ಟೂರಿನಿಂದ 2002 ರಲ್ಲಿ ದೂರದ ದುಬಾಯಿಗೆ ಬಂದು ನೆಲೆಸಿದರು. ಪ್ರಾರಂಭದಲ್ಲಿ ತಮ್ಮದೇ ಸಮುದಾಯದ ಸಂಘಟನೆಯಾದ “ರಾಮ ಕ್ಷತ್ರೀಯ ಸಂಘ ದುಬಾಯಿ” ಯ ಆಶ್ರಯದಲ್ಲಿ ನಡೆಯುತಿದ್ದ ವಾಷರ್ಿಕೋತ್ಸವ, ಪೂಜಾಕಾರ್ಯದಲ್ಲಿ ತಮ್ಮ ಸುಮಧುರ ಸಂಗೀತ ಕಾರ್ಯಕ್ರಮ ನೀಡುತ್ತಾ ನಂತರದ ವರ್ಷಗಳಲ್ಲಿ ಇನ್ನಿತರ ಸಂಘ ಸಂಸ್ಥಗಳ ಅಹ್ವಾನದ ಮೇರೆಗೆ ಸಾಂಸ್ಕೃತಿಕ ವೇದಿಕೆಯಲ್ಲಿ ಹಲವು ಅವಕಾಶಗಳು ದೊರೆತು ತಮ್ಮ ಅಪೂರ್ವ ಪ್ರತಿಭೆಗೆ ಯು.ಎ.ಇ. ಯ ವಿವಿಧ ಕಡೆಗಳಲ್ಲಿ ಅಪಾರ ಜನಪ್ರಿಯತೆಯನ್ನು ಪಡೆದರು.

image020sai-malika-20161029-01-020 image021sai-malika-20161029-01-021 image022sai-malika-20161029-01-022

ಸಾಯಿ ಮಲ್ಲಿಕಾ ರವರ ಪ್ರತಿಭೆಯನ್ನು ಗುರುತಿಸಿ ಯು.ಎ.ಇ. ಯ ವಿವಿಧ ಸಂಘಟನೆಗಳು ವಿವಿಧ ಅತ್ಯಂತ ಅದ್ಧೂರಿ ಸಮಾರಂಭದ ವೇದಿಕೆಯಲ್ಲಿ ಗಾಯನಕ್ಕೆ ಅವಕಾಶ ನೀಡಿ ಗೌರವಿಸಿದೆ. ಇದರಲ್ಲಿ ಪ್ರಮುಖವಾದ ಸಂಘಟನೆಗಳಲ್ಲಿ, “ದುಬಾಯಿ ಕನರ್ಾಟಕ ಸಂಘ”, “ಶಾಜರ್ಾ ಕನರ್ಾಟಕ ಸಂಘ”, “ಯು.ಎ.ಇ. ತುಳುಕೂಟ” “ಮಾರ್ಗದೀಪ ಸಾಂಸ್ಕೃತಿಕ ಸಮಿತಿ ಯು.ಎ.ಇ.” “ರಾಮ ಕ್ಷತ್ರೀಯ ಸಂಘ ಯು.ಎ.ಇ” “ಕನ್ನಡಿಗರು ದುಬಾಯಿ” “ಧ್ವನಿ ಪ್ರತಿಷ್ಠಾನ” ಇವರ ಕಲಾಪ್ರತಿಭೆಗೆ ಸನ್ಮಾನಿಸಿ ಗೌರವಿಸಿದ್ದಾರೆ.

ಪ್ರಸ್ತುತ ದುಬಾಯಿಯಲ್ಲಿ ಬಿಝ್ ಗ್ರೂಪ್ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ‘ಫೈನಾನ್ಸ್ ಅಫಿಸರ್’ ಆಗಿ ಸೇವೆಯಲ್ಲಿದ್ದಾರೆ. ತಾವು ಉದ್ಯೋಗ ಮಾಡುತಿರುವ ಸಂಸ್ಥೆಯಲ್ಲಿಯೂ ಹಲವಾರು ಕಾರ್ಯಕ್ರಮಗಳನ್ನು ನೀಡಿ ಭಾರತೀಯ ಕಲೆ ಸಂಸ್ಕೃತಿಯನ್ನು ವಿದೇಶಿ ಸಂಸ್ಥೆಯಲ್ಲಿ ಎತ್ತಿ ಹಿಡಿದು ಸರ್ವಕಾಲಿಕ ಮಾನ್ಯರಾಗಿದ್ದಾರೆ.

image019sai-malika-20161029-01-019

image007sai-malika-20161029-01-007

ತಾಯಿಗೆ ತಕ್ಕ ಮಗನಾಗಿ ಕು| ಮನೀಶ್ ಕುಮಾರ್ ಎಳೆಯ ಕಲಾಪ್ರತಿಭೆ ವಿವಿಧ ವೇದಿಕೆಯಲ್ಲಿ ಹಲವಾರು ಗೀತಾಗಾಯನದ ಮೂಲಕ ಜನರ ಪ್ರೀತಿ, ಪ್ರಶಂಸೆಗೆ ಪಾತ್ರನಾಗಿದ್ದಾನೆ.

ಪ್ರತಿಯೊಂದು ಹಂತದಲ್ಲಿಯೂ ಸಾಯಿ ಮಲ್ಲಿಕಾ ರವರ ಪತಿ ಶ್ರೀ ನರೇಂದ್ರರವರು ಪ್ರೊತ್ಸಾಹ, ಬೆಂಬಲ ನೀಡುತ್ತಾ ಸದಾ ಯಶಸ್ಸಿನ ಹಾದಿಯಲ್ಲಿ ಮುನ್ನಡೆಯಲು ಅವಕಾಶ ಕಲ್ಪಿಸಿದ್ದಾರೆ.

image018sai-malika-20161029-01-018

ಶ್ರೀಮತಿ ಸಾಯಿ ಮಲ್ಲಿಕಾ ರವರ ಕಂಠ ಮಾಧುರ್ಯ ನಿರಂತರ ಅಭಿಮಾನಿಗಳು ಆಲಿಸುವಂತಾಗಲಿ ಎಂದು ಕನರ್ಾಟಕ ರಾಜ್ಯೋತ್ಸವದ ಶುಭಾಶಯದೊಂದಿಗೆ ಹಾರೈಸುತ್ತೇವೆ.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ


Spread the love