ಯೋಧ, ಮತ್ತು ಧರ್ಮವನ್ನು ದ್ವೇಷಿಸಿ, ಉಗ್ರರನ್ನು ಬೆಂಬಲಿಸುವವುರು ದೇಶ ದ್ರೋಹಿಗಳು – ಜಿತೇಂದ್ರ ಕುಂದೇಶ್ವರ

Spread the love

ಯೋಧ, ಮತ್ತು ಧರ್ಮವನ್ನು ದ್ವೇಷಿಸಿ, ಉಗ್ರರನ್ನು ಬೆಂಬಲಿಸುವವುರು ದೇಶ ದ್ರೋಹಿಗಳು – ಜಿತೇಂದ್ರ ಕುಂದೇಶ್ವರ

ಬೆಂಗಳೂರು: ಯೋಧರನ್ನು ದ್ವೇಷಿಸುವವರು ಉಗ್ರರನ್ನು ಬೆಂಬಲಿಸುವವರು, ಧರ್ಮ ನಿಂದಕರು, ಧರ್ಮ ಭಂಜಕರೆಲ್ರುಲರೂ ದೇಶ ದ್ರೋಹಿಗಳು ಎಂದು ವಿಶ್ವವಾಣಿ ವಿಶೇಷ ವರದಿಗಾರ ಜಿತೇಂದ್ರ ಕುಂದೇಶ್ವರ ಹೇಳಿದರು.
ವಿಶ್ವ ಸಂವಾದ ಕೇಂದ್ರದ ವತಿಯಿಂದ ಭಾನುವಾರ ಜಯನಗರದ 4ನೇ ಹಂತದಲ್ಲಿರುವ ರಾಷ್ಟೋತ್ಥಾನ ಶಾರೀರಿಕ ಕೇಂದ್ರದಲ್ಲಿ ನಾರದ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಮಾಧ್ಮಮ ಮಿತ್ರರ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ತೀ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ಪತ್ಕರ್ತರಿಗೆ ಯೋಧರಂತೆ ಕರ್ತವ್ಯದ ಜತೆ ದೇಶ, ಜನ ಸೇವೆಯ‌ನ್ನು ಮಾಡುವ ಅವಕಾಶ ಇದೆ ಎಂದರು.

ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ವೀರ ಯೋಧನಂತೆ ಕೆಲಸ ಮಾಡುತ್ತಿದ್ದ ಪತ್ರಕರ್ತ ಬುಕಾರಿ ಅವರನ್ನು ಉಗ್ರವಾದಿಗಳು ಕೊಂದು ಹಾಕಿದರು. ಆಗ ಪ್ರಗತಿಪರರಿಗೆ ಮಾನವ ಹಕ್ಕು ಉಲ್ಲಂಘನೆ ನೆನಪಾಗುವುದಿಲ್ಲ. ಉಗ್ರವಾದಿಗಳನ್ನು ಕೊಂದರೆ ತಕ್ಷಣ ಪ್ರಗತಿಪರರಿಗೆ ವಿಶ್ವಮಾನವ ಧರ್ಮ ಜಾಗೃತವಾಗುತ್ತದೆ. ಮಾನವ ಧರ್ಮಕ್ಕೆ ಗಡಿ ಇಲ್ಲ ಎಂದು ವಾದಿಸಿ, ಯೋಧರನ್ನು ಕೊಲೆಗಡುಕರಂತೆ ಚಿತ್ರಿಸುತ್ತಾರೆ. ಆದರೆ ಇದೇ ವಿಶ್ವಮಾನವತಾವಾದಿಗಳು ತಮ್ಮ ಮನೆಗೆ ಗಡಿ ಬೇಲಿ, ಬಾಗಿಲಿಗ ಬೀಗ ಹಾಕಿಕೊಂಡಿರುತ್ತಾರೆ. ಈಗ ರಾಜಕಾರಣಿಗಳು ಉಗ್ರವಾದಿಗಳನ್ಮು ಬೆಂಬಲಿಸಿ ಯೋಧರನ್ನು ಹಂತಕರು ಎನ್ನುವವಷ್ಟು ನಿಕೃಷ್ಟ ಹಂತಕ್ಕೆ ತಲುಪಿದ್ದಾರೆ ಮಾಧ್ಯಮಗಳು ಇಂಥವರನ್ನು ಬೆತ್ತಲು ಮಾಡಿ ರಾಷ್ಟ್ರೀಯವಾದವನ್ಮು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ನೆಲದ ಸಂಸ್ಕೃತಿ, ಹಿಂದೂ ಧರ್ಮವನ್ನು ದೂಷಿಸುವವರು ಧರ್ಮವನ್ನು ಒಡೆಯುವವರು ಧರ್ಮದ್ರೋಹಿಗಳು ಮಾತ್ರವಲ್ಲದೆ ದೇಶದ್ರೋಹಿಗಳು ಎಂದು ಆರೋಪಿಸಿದರು. ಸಾಮಾಜಿಕ‌ ಜಾಲತಾಣಗಳು ಸುದ್ದಿ ನೀಡುವ ‘ರದಲ್ಲಿ ವಿಶ್ವಾಸರ್ಹತೆ ಕಳೆದುಕೊಳ್ಳುತ್ತಿದ್ದು, ಪತ್ರಿಕೆಗಳು ವಿಶ್ವಾಸರ್ಹತೆ ಉಳಿಸಿಕೊಂಡಿವೆ. ಲೋಕೋದ್ಧಾರವೇ ಪತ್ರಕರ್ತನ ಆದ್ಯ ಕರ್ತವ್ಯವಾಗಿದ್ದು, ಲೇಖನಗಳಿಂದ ಸಮಾಜದಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ ಎಂದರು.
ಹಸಿರುವಾಸಿ ಪಾಕ್ಷಿಕೆಯ ಸಂಪಾದಕ ರಾಧಾಕೃಷ್ಣ ‘ಡ್ತಿ ಮಾತನಾಡಿ, ಕಳೆದ ಹಲವು ದಶಕಗಳಿಂದ ಎಡಪಂಥಗಳು ಪತ್ರಿಕೋದ್ಯಮ ಆಳುತ್ತಿದ್ದು, ಇತ್ತೀಚೆಗೆ ಸ್ವಲ್ಪ ಬದಲಾವಣೆಗಳು ಆಗಿವೆ. ಎಂದರು.

ಕಾರ್ಯಕ್ರಮದಲ್ಲಿ ವಿಶ್ವ ಸಂವಾದ ಕೇಂದ್ರದ ಸ್ಥಾಪಕ ಚಂದ್ರಶೇಕರ್ ‘ಭಂಡಾರಿ, ಟ್ರಸ್ಟಿ ಡಾ. ವಿ.ಶ್ರೀ‘ರ್, ಆರ್‌ಎಸ್‌ಎಸ್‌ನ ಪ್ರದೀಪ್, ತಿಪ್ಪೇಸ್ವಾಮಿ, ಮಂಜುನಾಥ, ಪ್ರವೀಣ್,ಪಟವರ್ಧನ್, ರಾಧಾಕೃಷ್ಣ ಹೊಳ್ಳ, ರಾಘವೇಂದ್ರ ಇದ್ದರು.


Spread the love