ರಕ್ತದಾನಿಗಳ ಜಾಗೃತಿ ಬೈಕ್ ಜಾಥಾಕ್ಕೆ ಜೇಸಿಐ ಉದ್ಯಾವರ ಕುತ್ಪಾಡಿ ವತಿಯಿಂದ ಸ್ವಾಗತ

Spread the love

ರಕ್ತದಾನಿಗಳ ಜಾಗೃತಿ ಬೈಕ್ ಜಾಥಾಕ್ಕೆ ಜೇಸಿಐ ಉದ್ಯಾವರ ಕುತ್ಪಾಡಿ ವತಿಯಿಂದ ಸ್ವಾಗತ

ಉಡುಪಿ: ಜೇಸಿಐ ವಲಯ ಹದಿನೈದರ ನೇತೃತ್ವದಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತವಾಗಿ ಭಟ್ಕಳದಿಂದ ಮಂಗಳೂರಿನ ವರೆಗೆ ಅದ್ಧೂರಿಯಾಗಿ ನಡೆದ ರಕ್ತದಾನಿಗಳ ಜಾಗೃತಿ ಬೈಕ್ ಜಾಥಾಕ್ಕೆ ಉದ್ಯಾವರ ಬಲಾಯಿಪಾದೆ ಯಲ್ಲಿ ಜೇಸಿಐ ಉದ್ಯಾವರ ಕುತ್ಪಾಡಿ ಇವರ ನೇತೃತ್ವದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ಜಾಥಾಕ್ಕೆ ನೇತೃತ್ವವನ್ನು ವಹಿಸಿದ್ದ ವಲಯ ಹದಿನೈದರ ಅಧ್ಯಕ್ಷ ಜೆಸಿ ರಾಕೇಶ್ ಕುಂಜೂರು ಮತ್ತು ಜೇಸಿ ಸುನಿಲ್ ಬಂಗೇರ ಮತ್ತು ಅವರ ತಂಡವನ್ನು ಹೂಗುಚ್ಛ ನೀಡುವುದರೊಂದಿಗೆ ಜೇಸಿಐ ಉದ್ಯಾವರ ಕುತ್ಪಾಡಿ ಯ ಅಧ್ಯಕ್ಷ ಜೆಸಿ ಸ್ಟೀವನ್ ಕುಲಾಸೊ ಉದ್ಯಾವರ, ಸಲಹೆಗಾರರಾದ ಶ್ರೀ ಪ್ರತಾಪ್ ಕುಮಾರ್ ಮತ್ತು ಜೇಸಿ ವಿಜಯ ಕುಮಾರ್ ಉದ್ಯಾವರ ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಜೇಸಿಐ ಉದ್ಯಾವರ ಕುತ್ಪಾಡಿ ಇದರ ಪೂರ್ವಾಧ್ಯಕ್ಷ ರುಗಳಾದ ಜೇಸಿ ಹರೀಶ್ ಅಂಚನ್, ಜೇಸಿ ರಮೇಶ್ ಕುಮಾರ್, ಸದಸ್ಯರುಗಳಾದ ಜೇಸಿ ಸುಪ್ರೀತ್ ಕುಮಾರ್, ಜೇಸಿ ದಯಾನಂದ ಶೆಟ್ಟಿ, ಜೇಸಿ ಯೋಗೀಶ್ ಕೋಟ್ಯಾನ್, ಜೇಸಿ ರಮೇಶ್ ಆಚಾರ್ಯ, ಜೇಸಿ ಪ್ರೇಮ್ ಮಿನೇಜಸ್, ಮತ್ತು ವಲಯದ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love