ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಸಾವು

Spread the love

 ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಸಾವು
 
ಬಂಟ್ವಾಳ: ಇಲ್ಲಿಗೆ ಸಮೀಪದ ವಗ್ಗದಲ್ಲಿ ಭಾನುವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ರಂಗಭೂಮಿ ಕಲಾವಿದ ಗೌತಮ್ ಕುಲಾಲ್ ವಗ್ಗ (28) ಮೃತಪಟ್ಟಿದ್ದಾರೆ.

ಬಂಟ್ವಾಳ ತಾಲ್ಲೂಕಿನ ದೇವಸ್ಯಪಡೂರು ಗ್ರಾಮದ ಮರಾಯಿದೊಟ್ಟು, ನೂಜೆ ಗ್ರಾಮದ ಗೌತಮ್ ಅವರು ಪಿಂಗಾರ ಕಲಾವಿದೆರ್ ಬೆದ್ರ ರಂಗಭೂಮಿ ತಂಡದ‌ ಸದಸ್ಯರಾಗಿದ್ದರು.

ಈ ತಂಡವು ಬೆಳುವಾಯಿಯ ಕರಿಯನಂಗಡಿಯಲ್ಲಿ ನಿನ್ನೆ ರಾತ್ರಿ ‘ಕದಂಬ’ ನಾಟಕವಬ್ಬು ಪ್ರದರ್ಶಿಸಿತ್ತು. ಅದರಲ್ಲಿ ಅಭಿನಯಿಸಿದ್ದ ಗೌತಮ್ ಮನೆಗೆ ಮರಳುತ್ತಿದ್ದರು. ಅವರ ಬೈಕ್ ಮುಂಜಾನೆ ವೇಳೆ ವಗ್ಗದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡು ಬಿದ್ದಿದ್ದ ಅವರನ್ನು ಗಮನಿಸಿದ ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು. ಅದಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಅವಿವಾಹಿತರಾಗಿದ್ದ ಗೌತಮ್ ಬಿ.ಸಿ.ರೋಡ್ ನ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದರು. ಮೃತರಿಗೆ ತಾಯಿ ಸಹೋದರ ಮತ್ತು ಸಹೋದರಿ ಇದ್ದಾರೆ.


Spread the love