‘ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ವಾರಕ್ಕೆ ಸೀಮಿತಗೊಳಿಸದೆ ವರ್ಷವಿಡಿ ಆಚರಿಸೋಣ’ – ಟಿ ಆರ್ ಸುರೇಶ್

Spread the love

‘ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ವಾರಕ್ಕೆ ಸೀಮಿತಗೊಳಿಸದೆ ವರ್ಷವಿಡಿ ಆಚರಿಸೋಣ’ – ಟಿ ಆರ್ ಸುರೇಶ್

ಮಂಗಳೂರು :  ರಸೆ ಸುರಕ್ಷತೆ- ಜೀವದ ರಕ್ಷೆ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭಗೊಂಡ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ವಾರಕ್ಕೆ ಸೀಮಿತಗೊಳಿಸದೆ ವರ್ಷವಿಡಿ ಆಚರಿಸೋಣ ಎಂದು ಪೊಲೀಸ್ ಆಯುಕ್ತರಾದ ಟಿ ಆರ್ ಸುರೇಶ್ ಹೇಳಿದರು.

ಫೆಬ್ರವರಿ 4 ರಂದು ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್ ಇಲಾಖೆ ಮಂಗಳೂರು ಇವರ ಆಶ್ರಯದಲ್ಲಿ ಪೊಲೀಸ್ ಸಮುದಾಯ ಭವನದಲ್ಲಿ ನಡೆದ 30 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಉದ್ಘಾಟಿಸಿ ಅವರು ಮಾತನಾಡಿದರು, ಯುವಜನತೆಯಲ್ಲಿ ರಸ್ತೆ ಸುರಕ್ಷೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ರಸ್ತೆ ಸುರಕ್ಷತಾ ಸಪ್ತಾಹ, ನಿಯಮ ಮತ್ತು ಮೋಟಾರು ವೆಹಿಕಲ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಅಪಘಾತಗಳು ಕಡಿಮೆ ಮಾಡಲು ಸಾಧ್ಯ ಎಂದರು.

ರಸ್ತೆ ಅಫಘಾತಗಳಾದಾಗ ನೆರವಾಗುವ ಬದಲು ಸುದ್ದಿ ವೈರಲ್ ಮಾಡೋದೆ ಇತ್ತೀಚಿನ ಆದ್ಯತೆಗಳಾಗಿವೆ. ಅದರ ಬದಲು ಒಂದು ಜೀವ ಉಳಿಸಿದರೆ ಒಂದು ಕುಟುಂಬ ಉಳಿಸಿದಂತೆ. ಪ್ರತಿದಿನವೂ ಅಪಘಾತದಿಂದ ಸಾವಿಗೀಡಾಗುವವರ ಸಂಖ್ಯೆ ಅಧಿಕವಾಗಿದೆ. ಅಪಘಾತ ಕಡಿಮೆ ಗೊಳಿಸಲು ರಸ್ತೆ ಸುರಕ್ಷತೆಯ ನಿಯಮಗಳನ್ನು ಪಾಲಿಸಿ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎ.ಜಿ.ಎಮ್ ಕೆನರಾ ಬ್ಯಾಂಕ್ ಮಂಗಳೂರು, ರಾಮ್‍ದಾಸ್ ಇವರು ಹೇಳಿದರು.

ಉಪ ಪೊಲೀಸ್ ಆಯುಕ್ತರು(ಸಂಚಾರ) ಉಮಾಪ್ರಶಾಂತ್ ಸ್ವಾಗತಿಸಿದರು., ಉಪ ಸಾರಿಗೆ ಆಯುಕ್ತರು ಜೋನ್ ಬಿ. ಮಿಸ್ಕಿತ್ ವಂದಿಸಿದರು. ಪೊಲೀಸ್ ಅಧೀಕ್ಷಕರು ಬಿ ಎಮ್ ಲಕ್ಷ್ಮೀಪ್ರಸಾದ್, ಅಧ್ಯಕ್ಷರು ಕೆನರಾಚೇಂಬರ್ಸ್ ಪಿ.ಬಿ ಅಬ್ದುಲ್ ಹಮೀದ್, ಅಧ್ಯಕ್ಷರು ಮಂಗಳೂರು ಕೆನರಾ ಬಸ್ಸು ಮಾಲಿಕರ ಸಂಘ ರಾಜವರ್ಮ ಬಳ್ಳಾಲ್, ದಿಲ್‍ರಾಜ್ ಆಳ್ವ, ಕಿಶೋರ್ ಕುಮಾರ್ ಮಾರ್ಲ, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love