ರಾಜಭವನದಲ್ಲಿ ದೋಸ್ತಿ ನಾಯಕರ ಹೈಡ್ರಾಮ, ಕೈ ನಾಯಕರನ್ನು ವಶಕ್ಕೆ ಪಡೆದ ಪೋಲಿಸರು

Spread the love

ರಾಜಭವನದಲ್ಲಿ ದೋಸ್ತಿ ನಾಯಕರ ಹೈಡ್ರಾಮ, ಕೈ ನಾಯಕರನ್ನು ವಶಕ್ಕೆ ಪಡೆದ ಪೋಲಿಸರು

ಬೆಂಗಳೂರು: ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಮೈತ್ರಿ ಸರ್ಕಾರದ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈತ್ರಿ ಸರ್ಕಾರದ ಒಡಕನ್ನು ರಾಜ್ಯಪಾಲರು ಶೀಘ್ರ ನಿವಾರಿಸಬೇಕೆಂದು ರಾಜಭವನಕ್ಕೆ ಮುತ್ತಿಗೆ ಹಾಕಲು ಹೊರಟ್ಟಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿಂದತೆ ಹಲವು ಶಾಸಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ವೇಳೆ ಸಿದ್ದರಾಮಯ್ಯ, ವೇಣುಗೋಪಾಲ್​​​​​ ಸೇರಿಂದತೆ ಅನೇಕ ದೋಸ್ತಿ ಪಕ್ಷದ ನಾಯಕರು ರಸ್ತೆಯ ಮಧ್ಯೆದಲ್ಲಿಯೆ ಕುಳಿತು ಹೋರಾಟ ಮಾಡುತ್ತಿದ್ದಾರೆ.

ಈ ವೇಳೆ ಮಾತನಾಡಿದ ಶಾಸಕ ಕೆ.ಸಿ ವೇಣು ಗೋಪಾಲ್​​​​​​​, ಕಳೆದ ಒಂದು ವರ್ಷದಿಂದ ಇದು 6ನೇ ಬಾರಿ ಸರ್ಕಾರ ಉರುಳಿಸಲು ಬಿಜೆಪಿಯವರು ಯತ್ನಿಸುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಒಪ್ಪುವುದಿಲ್ಲ. ಬಿಜೆಪಿಯನ್ನು ರಾಜ್ಯದ ಜನೆತ ನಿರಾಕರಿಸಿದ್ದಾರೆ ಎಂದು ಹೇಳಿದರು.

ಬಿಜೆಪಿಗೆ ಸೂಕ್ತ ಬಹುಮತ ದೊರೆತಿಲ್ಲ. ಅವರು ಸರ್ಕಾರ ರಚಿಸಲು ಸಾಧ್ಯವಿಲ್ಲ. ಕರ್ನಾಟಕದ ಜನತೆ ಎಲ್ಲವನ್ನು ಗಮನಿಸುತ್ತಿದ್ದಾರೆ. ಇದಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.


Spread the love