ರಾಜೀನಾಮೆ ನೀಡಿದ ಕ್ಷೇತ್ರಕ್ಕೆ ಚುನಾವಣೆ ನಡೆಸದೆ 2ನೇ ಸ್ಥಾನದ ಅಭ್ಯರ್ಥಿಗೆ ಅವಕಾಶ ನೀಡಿ – ಅಬ್ದುಲ್ ರೆಹಮಾನ್

ರಾಜೀನಾಮೆ ನೀಡಿದ ಕ್ಷೇತ್ರಕ್ಕೆ ಚುನಾವಣೆ ನಡೆಸದೆ 2ನೇ ಸ್ಥಾನದ ಅಭ್ಯರ್ಥಿಗೆ ಅವಕಾಶ ನೀಡಿ – ಅಬ್ದುಲ್ ರೆಹಮಾನ್

ಉಡುಪಿ: ರಾಜೀನಾಮೆ ನೀಡಿರುವ ಕ್ಷೇತ್ರಕ್ಕೆ ಮತ್ತೆ ಚುನಾವಣೆ ನಡೆಸಿ ಜನರ ತೆರಿಗೆ ಹಣ ಪೂಲು ಮಾಡುವ ಬದಲು ಹಿಂದಿನ ಚುನಾವಣೆಯಲ್ಲಿ 2ನೇ ಸ್ಥಾನದಲ್ಲಿದ್ದ ಅಭ್ಯರ್ಥಿಯನ್ನು ವಿಧಾನಸಭೆ ಸದಸ್ಯರೆಂದು ಆಯ್ಕೆ ಮಾಡಬೇಕು ಎಂದು ಯುವ ನಟ ಹಾಗೂ ಕಾನೂನು ವಿದ್ಯಾರ್ಥಿ ಅಬ್ದುಲ್ ರೆಹಮಾನ್ ಆಗ್ರಹಿಸಿದ್ದಾರೆ.

ಇಂತಹ ಕಾನೂನನ್ನು ತಂದಾಗ ಯಾರೂ ರಾಜೀನಾಮೆ ನೀಡುವುದಿಲ್ಲ ಅಥವಾ ಪಕ್ಷ ಬಿಟ್ಟು ಹೋಗುವುದಿಲ್ಲ. ಇದಕ್ಕೆ ರಾಜೀನಾಮೆ ನೀಡಿರುವ ಅಭ್ಯರ್ಥಿಗಳು ಒಪ್ಪದಿದ್ದರೆ ಕ್ಷೇತ್ರದ ಚುನಾವಣಾ ವೆಚ್ಚವನ್ನು ಅವರೇ ಭರಿಸಬೇಕು ಮತ್ತು ಮುಂದಿನ ದಿನಗಳಲ್ಲಿ ಇವರಿಗೆ ಯಾವುದೇ ಚುನಾವಣೆಯಲ್ಲಿ ಭಾಗವಹಿಸಲು ಅವಕಾಶ ನೀಡಬಾರದು..ಈ ನಿಟ್ಟಿನಲ್ಲಿ ಸಂವಿಧಾನ ತಿದ್ದುಪಡಿಯಾಗಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ .