
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ – ಜಗದೀಶ್ ಶೇಣವ
ಮಂಗಳೂರು: ಬಿಟ್ಟಿ ಭಾಗ್ಯ ದ ಹೆಸರಿನಲ್ಲಿ ರಾಜ್ಯದಲ್ಲಿ ಆಡಳಿತಕ್ಕೆ ಬಂದ ಸರಕಾರ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ . ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ನಂತರ ಆರಾಜಕತೆ ತಾಂಡವ ವಾಡುತ್ತಿದೆ ಎಂದು ಬಿಜೆಪಿ ಮುಖಂಡ ಜಗದೀಶ್ ಶೇಣವ ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸರಕಾರದ ಎಲ್ಲಾ ಮಂತ್ರಿಗಳು ವರ್ಗಾವಣೆಯ ದಂಧೆಯಲ್ಲಿ ನಿರತರಾಗಿದ್ದಾರೆ. ಕ್ರಿಮಿನಲ್‌ಗಳಿಗೆ ಪೋಲಿಸರ ಭಯವೇ ಇಲ್ಲವಾಗಿದೆ. ಸರಕಾರವು ತುಷ್ಟಿಕರಣದ ನೀತಿಯಲ್ಲಿ ತೊಡಗಿದೆ. ಮಂಗಳೂರಿನಲ್ಲಿ ಮುಸ್ಲಿಂ ವ್ಯಾಪಾರಿಯೊಬ್ಬ ನ ಕೊಲೆ, ಹಾಡು ಹಗಲೇ ನಡೆದಿದೆ , ಬೆಂಗಳೂರಿನಲ್ಲಿ ನಡೆದ ಡಬಲ್ ಮರ್ಡರ್, ಎಲ್ಲಕ್ಕಿಂತಲೂ ಮಿಗಿಲಾಗಿ ಚಿಕ್ಕೋಡಿಯಲ್ಲಿ ಹಿಂದೂ ನೌಕರನನ್ನು ಕೊಂದು ಸುಟ್ಟು ಹಾಕಿದ ಘಟನೆ, ಮೈಸೂರಿನಲ್ಲಿ ಕಾರ್ಯಕರ್ತನ ಬರ್ಬರ ಹತ್ಯೆ ಮುನಿಗಳ ಬರ್ಬರ ಹತ್ಯೆ ಇವೆಲ್ಲವನ್ನೂ ನೋಡಿದಾಗ, ಕ್ರಿಮಿನಲ್‌ಗಳಿಗೆ ಪೋಲಿಸರ ಭಯವೇ ಇಲ್ಲವೇನೋ, ಎಂಬಂತೆ ಭಾಸವಾಗುತ್ತದೆ.
ಚಿಕ್ಕೋಡಿಯಲ್ಲಿ ನಡೆದ ಬರ್ಬರ ಹತ್ಯೆಯನ್ನು ದ.ಕ.ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಸರ್ವ ಸಂಘ ಪರಿತ್ಯಾಗಿ, ಸಮಾಜಕ್ಕಾಗಿ, ಧರ್ಮಕ್ಕಾಗಿ, ಎಲ್ಲವನ್ನೂ ತ್ಯಜಿಸಿದ ಓರ್ವ ಮುನಿಯನ್ನು ವಿದ್ಯುತ್ ಶಾಕ್ ನೀಡಿ, ಬರ್ಬರವಾಗಿ ಕೊಲೆ ಮಾಡಿ, ದೇಹವನ್ನು ತುಂಡು ತುಂಡು ಮಾಡಿ, ಕೊಳವೆ ಬಾವಿಗೆ ಹಾಕಿದ ಘಟನೆ ಇಡೀ ನಾಗರೀಕ ಸಮಾಜ ತಲೆ ತಗ್ಗಿಸುವಂತಹದ್ದು. ಇಂತಹ ಘಟನೆ ಈ ವರೆಗೆ ಪ್ರಪಂಚದಲ್ಲಿ ನಡೆದದ್ದು ಪ್ರಥಮ ಆದರೆ ಸರಕಾರ ಈ ಪ್ರಕರಣವನ್ನು ಒಂದು ಸಾಮಾನ್ಯ ಪ್ರಕರಣವಾಗಿ ಪರಿಗಣಿಸಿದೆ, ಈ ಘಟನೆಯಲ್ಲಿ ಭಾಗವಹಿಸಿದ 2 ಆರೋಪಿಯನ್ನು ರಕ್ಷಿಸುವ ಕೆಲಸವನ್ನು ಸರಕಾರ ಮಾಡಿದೆ.
ಓರ್ವ ಮುಸಲ್ಮಾನನ ಹತ್ಯೆಯಾದರೆ, ಎಲ್ಲಾ ಬುದ್ದಿಜೀವಿಗಳು, ಕಾಂಗ್ರೆಸ್ ಕಮ್ಯುನಿಸ್ಟ್ ಪಕ್ಷಗಳು “ಅಲ್ಪಸಂಖ್ಯಾತರಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ ಎಂದು ದೊಂಬರಾಟ ಮಾಡುತ್ತಾರೆ. ಜೈನ ಸಮುದಾಯ ಅತೀ ಸಣ್ಣ ಸಮುದಾಯ (micro community) ಇಂತಹ ಅಲ್ಪಸಂಖ್ಯಾತರ ಮುನಿಯ ಹತ್ಯೆಯಾಗುವಾಗ ಸರಕಾರವಾಗಲೀ ಕಾಂಗ್ರೆಸ್ ಪಕ್ಷವಾಗಲೀ ಬುದ್ಧಿಜೀವಿಗಳಾಗಲೀ ತುಟಿಪಿಟಿಕೆನ್ನದೇ ಮೌನವಾಗಿದ್ದಾರೆ.
ಜೈನ್ ಮುನಿಯ – ಹತ್ಯೆಯ ಹಿಂದೆ ಯಾವುದೋ ಒಂದು ಷಡ್ಯಂತ್ರವಿದೆ. ಈ ಷಡ್ಯಂತ್ರವನ್ನು ಭೇದಿಸಬೇಕಾದರೆ, ಇದರ ತನಿಖೆಯನ್ನು ಸಿ.ಬಿ.ಐ ಗೆ ನೀಡಬೇಕೆಂದು ಆಗ್ರಹಿಸಿದರು.