ರಾಜ್ಯಮಟ್ಟದ ಸ್ಕೌಟ್ ದೇಶಭಕ್ತಿಗೀತೆ ಸ್ಪರ್ಧೆ: ಆಳ್ವಾಸ್ ವಿದ್ಯಾರ್ಥಿ ಮನುಜ ನೇಹಿಗ ದ್ವಿತೀಯ

Spread the love

ರಾಜ್ಯಮಟ್ಟದ ಸ್ಕೌಟ್ ದೇಶಭಕ್ತಿಗೀತೆ ಸ್ಪರ್ಧೆ: ಆಳ್ವಾಸ್ ವಿದ್ಯಾರ್ಥಿ ಮನುಜ ನೇಹಿಗ ದ್ವಿತೀಯ

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ವರ್ಚುವಲ್ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಮನುಜ ನೇಹಿಗ ಸುಳ್ಯ ದ್ವಿತೀಯ ಬಹುಮಾನ ಪಡೆದಿದ್ದಾನೆ.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಬಹುಮಾನ ವಿತರಣೆ ಮಾಡಿದರು. ಪ್ರಸಿದ್ಧ ಗಾಯಕ ಶಶಿಧರ್ ಕೋಟೆ ಉಪಸ್ಥಿತರಿದ್ದರು.

ನೇಹಿಗ ರಂಗನಿರ್ದೇಶಕ ಜೀವನ್ ರಾಂ ಸುಳ್ಯ ಮತ್ತು ಪ್ರಾಧ್ಯಾಪಕಿ ಡಾ.ಮೌಲ್ಯ ಜೀವನ್ ದಂಪತಿಯ ಪುತ್ರ.
ವಿದ್ಯಾರ್ಥಿಯ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಪ್ರಶಂಸಿಸಿದ್ದಾರೆ.


Spread the love