ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳು

Spread the love

ರಾಮಕೃಷ್ಣ ಮಿಷನ್‍ಸ್ವಚ್ಛ ಮಂಗಳೂರು ಅಭಿಯಾನದ 24ನೇ ವಾರದಲ್ಲಿ (19-03-17) ಜರುಗಿದ 24 ಸ್ವಚ್ಛತಾ ಕಾರ್ಯಕ್ರಮಗಳ ವರದಿ

261)ಪಾಂಡೇಶ್ವರ: ಪೆÇೀಲಿಸ್ ಸಿಬ್ಬಂದಿ ಸ್ವಯಂ ಪ್ರೇರಣೆಯಿಂದಇಂದು ಪಾಂಡೇಶ್ವರಠಾಣೆಯಆವರಣದಲ್ಲಿ ಸ್ವಚ್ಛತಾಕಾರ್ಯಮಾಡಿದರು. ಸ್ವಾಮಿಜಿತಕಾಮಾನಂದಜಿ ಹಾಗೂ ಪೆÇೀಲಿಸ್ ವೃತ್ತ ನಿರೀಕ್ಷಕ ಶ್ರೀಬೆಳ್ಳಿಯಪ್ಪ ಜಂಟಿಯಾಗಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆÇೀಲಿಸ್ ಉಪ ನಿರೀಕ್ಷಕ ಶ್ರೀಅನಂತ ಮುರ್ಡೆಶ್ವರ ಹಾಗೂ ಶ್ರೀಸತ್ಯ ಅಭಿಯಾನವನ್ನು ಸಂಯೋಜಿಸಿದರು.

262)ಕೊಟ್ಟಾರ: ಕುಮಾರ್‍ಜಿಮ್ ಫ್ರೆಂಡ್ಸ್ ಗೆಳೆಯರು ಕೊಟ್ಟಾರಚೌಕಿಯಲ್ಲಿ ಸ್ವಚ್ಛತಾಕಾರ್ಯಕೈಗೊಂಡರು. ಶ್ರೀ ಜೆ. ಕೃಷ್ಣ ಪಾಲೆಮಾರ್ ಹಾಗೂ ಶ್ರೀ ಪ್ರವೀಣ ಅಭಿಯಾನಕ್ಕೆ ಚಾಲನೆ ನೀಡಿದರು. ಕೊಟ್ಟಾರ ಚೌಕಿಯ ಮೇಲ್ಸೇತುವೆಯ ಕಂಬಗಳನ್ನು ಎರಡು ದಿನಗಳಿಂದಲೇ ಸ್ವಚ್ಛ ಮಾಡುತ್ತಿದ್ದ ಯುವಕರ ಪಡೆ ಇಂದು ಸುಂದರವಾಗಿ ಸಾಮಾಜಿಕ ಕಳಕಳಿಯುಳ್ಳ ಸಂದೇಶ ಮತ್ತು ಚಿತ್ರಗಳನ್ನು ಬರೆದರು. ಶ್ರೀ ಹರೀಶ್,  ದಯಾನಂದ ಸೇರಿದಂತೆ ಸುಮಾರು70 ಜನಯುವಕರು ಸೌಂದರೀಕರಣದಲ್ಲಿ ಭಾಗಿಯಾದರು. ಶ್ರೀ ಕಿರಣಕುಮಾರ್‍ಕಾರ್ಯಕ್ರಮ ಸಂಯೋಜಿಸಿದರು

263)ಕಾವೂರು: ಶ್ರೀಸುಧಾಕರ್ ನೇತೃತ್ವದಲ್ಲಿಕಾವೂರು ವೃತ್ತದಲ್ಲಿ ಸ್ವಚ್ಛತಾಅಭಿಯಾನ ನಡೆಯಿತು. ಶ್ರೀರಣದೀಪ ಕಾಂಚನ್ ಹಾಗೂ ಶ್ರೀ ರಾಮಚಂದ್ರರಾವ್‍ಅಭಿಯಾನಕ್ಕೆ ಚಾಲನೆ ನೀಡಿದರು. ವೃತ್ತದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಮಾಡಲಾಯಿತು. ಅಲ್ಲಲ್ಲಿ ನೇತಾಡುತ್ತಿದ್ದ ಹಳೆಯ ಬ್ಯಾನರ್ ಗಳನ್ನು ತೆರವುಗೊಳಿಸಲಾಯಿತು. ರಸ್ತೆಯ ಬದಿಯಲ್ಲಿ ಬಿದ್ದಿದ್ದ ಬಾಟಲ್, ಪ್ಲಾಸ್ಟಿಕ್ ಹೆಕ್ಕಿ ಶುಚಿಗೊಳಿಸಲಾಯಿತು. ಶ್ರೀ ಸಚಿನ್, ಶ್ರೀ ಮೋಹನ್, ಶ್ರೀ ಸದಾನಂದರೈ ಸೇರಿದಂತೆ ಹಲವರು ಶ್ರಮದಾನದಲ್ಲಿ ಪಾಲ್ಗೊಂಡರು.

264)ಫೆÇೀರಂ ಮಾಲ್: ಪೆÇೀರಂ ಫಿಜಾ ಮಾಲ್ ಸಿಬ್ಬಂದಿ ಆಸಕ್ತಿಯಿಂದ ಸ್ವಚ್ಛತಾಅಭಿಯಾನದಲ್ಲಿ ಭಾಗಿಗಳಾದರು. ನೆಹರು ವೃತ್ತದ ಮೂರೂ ರಸ್ತೆಗಳು, ಮಾರ್ಗವಿಭಾಜಕಗಳು ಹಾಗೂ ಪಕ್ಕದ ತೊಡುಗಳನ್ನು ಶುಚಿಗೊಳಿಸಲಾಯಿತು. ಇದಕ್ಕೂ ಮುನ್ನ ಸ್ವಾಮಿಜಿತಕಾಮಾನಂದಜಿ ಸಮ್ಮುಖದಲ್ಲಿಕ್ಯಾಪ್ಟನ್‍ಗಣೇಶ್‍ಕಾರ್ಣಿಕ್ ಹಾಗೂ ಶ್ರೀಮನೋಜ್ ಸಿಂಗ್ ಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಶ್ರೀಅಶ್ವಿತ ಕುಮಾರ್ ಶೆಟ್ಟಿ ಹಾಗೂ ಸುನೀಲ್ ಕೆ ಎಸ್‍ಕಾರ್ಯಕ್ರಮವನ್ನು ಸಂಘಟಿಸಿದರು,

265)ಮಂಗಳಾದೇವಿ: ಶ್ರೀಶಾರದಾ ಮಹಿಳಾ ವೃಂದದ ಸದಸ್ಯೆಯರಿಂದ ಮಂಗಳಾ ನಗರ ಹಾಗೂ ಮಂಕಿಸ್ಟಾಂಡ್ ಪರಿಸರದಲ್ಲಿ ಸ್ವಚ್ಛತಾಕಾರ್ಯಜರುಗಿತು. ಶ್ರೀರವಿಶಂಕರ್ ಹಾಗೂ ಶ್ರೀಮತಿ ಸತ್ಯವತಿಅಭಿಯಾನವನ್ನು ಶುಭಾರಂಭಗೊಳಿಸಿದರು. ಸ್ವಚ್ಛತೆಯೊಂದಿಗೆ ಸಾರ್ವಜನಿಕರಿಗೆಕರಪತ್ರ ನೀಡಿಜಾಗೃತಿಕಾರ್ಯ ನಡೆಸಿದರು.

266)ಯಯ್ಯಾಡಿ: ಫ್ರೇಂಡ್ಸ್ ಪಾರ್‍ಎವರ್ ಸದಸ್ಯರು ಯಯ್ಯಾಡಿಯಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು. ಶ್ರೀ ದಿನೇಶ ಆಳ್ವ ಹಾಗೂ ಶ್ರೀ ಅರವಿಂದ ಜೊತೆಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು. ಶ್ರೀ ಅನಿಲ್ ಬೇಕಲ್, ಶ್ರೀ ಪ್ರಭಾಕರ್ ಶ್ರೀ ಸುಜಿತ್ ಮತ್ತಿತರರು ಭಾಗವಹಿಸಿದರು. ಶ್ರೀ ಶುಭೋದಯ ಆಳ್ವ ಮಾರ್ಗದರ್ಶಿಸಿದರು.

267)ಪಂಪವೆಲ್: ಗರೋಡಿ ಯುವಕರ ತಂಡದಿಂದ ಪಂಪವೆಲ್‍ನಲ್ಲಿ ಸ್ವಚ್ಛತಾ ಕಾರ್ಯಕ್ರಮ ಜರುಗಿತು. ಶ್ರೀಸುಭಾಷ ಪಡೀಲ್ ಹಾಗೂ ಶ್ರೀ ಸಂದೀಪ ಪಂಪವೆಲ್‍ ಕಾರ್ಯಕ್ರಮವನ್ನು ಚಾಲನೆಗೊಳಿಸಿದರು. ಪಂಪವೆಲ್ ನಿಂದಕಂಕನಾಡಿ ಸಾಗುವ ರಸ್ತೆ ಹಾಗೂ ಮಾರ್ಗವಿಭಾಜಕದಲ್ಲಿದ್ದ ತ್ಯಾಜ್ಯ ತೆಗೆದು ಶುಚಿಗೊಳಿಸಲಾಯಿತು. ಜೊತೆಗೆ ಅಲ್ಲಲ್ಲಿ ಹರಡಿಕೊಂಡಿದ್ದ ಕಾಗದ ಪ್ಲಾಸ್ಟಿಕ್ ಹೆಕ್ಕಲಾಯಿತು. ಪೂಜಾರಾಜ್, ಆಶ್ವಿನ್ ನಾಯ್ಕ್, ಪ್ರಕಾಶಗರೋಡಿ ಮತ್ತಿತರರು ಭಗವಹಿಸಿದ್ದರು.

268)ನಂತೂರು: ದ.ಕ ಹವ್ಯಕ ಸಭಾದ ಸದಸ್ಯರಿಂದ ಪದುವಾಜಂಕ್ಷನ್ ನಿಂದ ನಂತೂರವರೆಗೆ ಸ್ವಚ್ಛ ಮಾಡಲಾಯಿತು. ಶ್ರೀ ತಿಮ್ಮಪ್ಪಯ್ಯ ಹಾಗೂ  ಶ್ರೀ ಬಾಲಕೃಷ್ಣ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರುಇನ್ನೂರು ಮನೆಗಳಿಗೆ ತೆರಳಿ ಸ್ವಚ್ಛತೆಯ ಮಹತ್ವವನ್ನು ಸಾರುವಕರಪತ್ರ ಹಂಚಿಜಾಗೃತಿ ಮಾಡಲಾಯಿತು. ಶ್ರೀವೇಣು ಗೋಪಾಲ ಭಟ್ ಹಾಗೂ ಡಾರಾಜೇಂದ್ರ ಪ್ರಸಾದ ಕಾರ್ಯಕ್ರಮವನ್ನು ಸಂಯೋಜಿಸಿದರು.

269)ರಥಬೀದಿ: ಸರಕಾರಿಕಾಲೇಜಿನ ವಿದ್ಯಾರ್ಥಿಗಳಿಂದ ಶ್ರೀ ವೆಂಕಟರಮಣ ರಥಬೀದಿಯಲ್ಲಿ ಶ್ರಮದಾನ ನಡೆಯಿತು. ಪ್ರಾಚಾರ್ಯರಾದ ಶ್ರೀ ರಾಜಶೇಖರ್ ಹೆಬ್ಬಾರಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿದರು. ಪೆÇ್ರ. ಶೇಷಪ್ಪ ಅಮೀನ ವಿದ್ಯಾರ್ಥಿಗಳನ್ನು ಮಾರ್ಗದರ್ಶಿಸಿ ರಥಬೀದಿಯನ್ನು ಸ್ವಚ್ಛಗೊಳಿಸಿದರು. ಅಲ್ಲದೇದಾರಿಹೋಕರಿಗೆ ಹಾಗೂ ಅಂಗಡಿ ವರ್ತಕರಿಗೆ ಸ್ವಚ್ಛತೆಯಕರಪತ್ರ ನೀಡಿಜಾಗೃತಿಮಾಡಲಾಯಿತು.

270):ಬಿಜೈಚರ್ಚ್‍ರಸ್ತೆ: ಶ್ರೀ ಸುಬ್ರಮಣ್ಯ ಸಭಾದಆಶ್ರಯದಲ್ಲಿ ಬಿಜೈ ಚರ್ಚ್‍ರಸ್ತೆ: ಕೊಡಿಯಾಲ್‍ಗುತ್ತು ಪರಿಸರದಲ್ಲಿ ಸ್ವಚ್ಛತಾ ಅಭಿಯಾನ ಜರುಗಿತು. ಶ್ರೀ ಪ್ರಭಾಕರ ಶೆಟ್ಟಿ ಹಾಗೂ ಉದಯ ಕುಮಾರ ಅಭಿಯಾನಕ್ಕೆ ಚಾಲನೆ ಕೊಟ್ಟರು. ಶ್ರೀ ಎಂ ಆರ್ ವಾಸುದೇವ್ ನೇತೃತ್ವದಲ್ಲಿ ಕೊಡಿಯಾಲ್‍ ಗುತ್ತು ರಸ್ತೆಯನ್ನು ಹಾಗೂ ಸುತ್ತಮುತ್ತಲಿನ ಕಾಲುದಾರಿ ಹಾಗೂ ತೊಡುಗಳನ್ನು ಶುಚಿಗೊಳಿಸಲಾಯಿತು. ಶ್ರೀಕಾಂತ ರಾವ್‍ಅಭಿಯಾನವನ್ನು ಸಂಯೋಜಿಸಿದರು.

271)ಕರಂಗಲಪಾಡಿ: ಸಂತ ಅಲೋಸಿಯಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳು ಕರಂಗಲಪಾಡಿಯಲ್ಲಿ ಸ್ವಚ್ಛತಾಕಾರ್ಯವನ್ನು ಹಮ್ಮಿಕೊಂಡಿದ್ದರು.ಪ್ರಾಧ್ಯಾಪಕರಾದಶ್ರೀ ಚಂದ್ರಶೇಖರ ಶೆಟ್ಟಿ ಹಾಗೂ ಡಾ. ರವೀಂದ್ರ ಸ್ವಾಮಿಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರಾಧ್ಯಾಪಕಿ ಪ್ರೇಮಲತಾ ಶೆಟ್ಟಿ ಮುಂದಾಳತ್ವದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಆಸಕ್ತಿಯಿಂದ ಶ್ರಮದಾನಗೈದರು.

272)ಗಣೇಶಪುರ: ಜೆಸಿಆಯ್ ಸದಸ್ಯರಿಂದ ಗಣೇಶಪುರ ದೇವಸ್ಥಾನ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಅಭಿಯಾನ ನಡೆಯಿತು. ಶ್ರಿ ಗಣಪತಿ ಶೇಟ್ ಹಾಗೂ ಶ್ರಿ ವಿಜಯ್‍ ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಮೊದಲಿಗೆ ದೇವಸ್ಥಾನದ ವಠಾರ ಸ್ವಚ್ಛಗೊಳಿಸಲಾಯಿತು. ತದನಂತರ  ಪೆÇೀಸ್ಟ್‍ ಆಫೀಸ್‍ ಆವರಣ ಗೋಡೆ ಹಾಗೂ ಹತ್ತಿರದ ಬಸ್ ತಂಗುದಾಣವನ್ನು ಶುಚಿಗೊಳಿಸಿ ಬಣ್ಣ ಬಳಿಯಲಾಯಿತು.

273)ಎಕ್ಕೂರು: ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಸದಸ್ಯರು ಹಾಗೂ ಸ್ಥಳಿಯ ಸಾರ್ವಜನಿಕರುಎಕ್ಕೂರಿನಲ್ಲಿ ಸ್ವಚ್ಛತೆಗಾಗಿ ಶ್ರಮದಾನ ನಡೆಸಿದರು. ಶ್ರಿಮತಿ ಜಯಂತಿಆನಂದ ಹಾಗೂ ಶ್ರೀಮತಿ ವಿಮಲಾ ಸ್ವಚ್ಛತಾಕಾರ್ಯವನ್ನು ಆರಂಭಗೊಳಿಸಿದರು. ಎಕ್ಕೂರಿನಅಡ್ಡರಸ್ತೆ ಹಾಗೂ ಭಜನಾ ಮಂದಿರದ ಸುತ್ತಮುತ್ತ ಸ್ವಚ್ಛತೆಯನ್ನು ನಡೆಸಲಾಯಿತು. ಶ್ರೀಮತಿ ಶೋಭಾ, ಪ್ರೇಮಾ ಹಾಗೂ ಗೌತಮ್ ಸೇರಿದಂತೆಅನೇಕರು ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಪಾಲ್ಗೊಂಡರು.

274) ಬೋಳಾರ: ಶಿಕ್ಷಕಿ ವಿಜಯಲಕ್ಷ್ಮೀ ಮಾರ್ಗದರ್ಶನದಲ್ಲಿಸೋದರಿನಿವೇದಿತ ಬಳಗದವರಿಂದ ಮಂಗಳಾದೇವಿಯಿಂದ ಬೋಳಾರ ಲಿವೆಲ್‍ಜಂಕ್ಷನ್ ವರೆಗೆ ಸ್ವಚ್ಛತಾಕಾರ್ಯಜರುಗಿತು. ಶ್ರೀಮತಿ ಉಷಾ ದಿನಕರ್‍ರಾವ್ ಹಾಗೂ ಶ್ರೀ ಚಂದ್ರನ್‍ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಚ್ಛತೆಯೊಂದಿಗೆ ಮನೆ ಮನೆಗೆ ಹೋಗಿ ಕರಪತ್ರ ನೀಡಿಜಾಗೃತಿ ಮಾಡಲು ಪ್ರಯತ್ನಿಸಲಾಯಿತು.

275)ಚೆಂಬುಗುಡ್ಡೆ: ಜೈ ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರ ನೇತೃತ್ವದಲ್ಲಿಚೆಂಬುಗುಡ್ಡೆರುದ್ರಭೂಮಿಯಲ್ಲಿ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಶ್ರೀರಾಮಚಂದ್ರ ಹಾಗೂ ಶ್ರೀ ಪುರುಷೋತ್ತಮ್‍ಜಂಟಿಯಾಗಿಅಭಿಯಾನಕ್ಕೆ ಹಸಿರು ನಿಶಾನೆ ತೋರಿದರು. ಶ್ರೀವಿಠೋಭ ರುಕ್ಮಯ್ಯ ಭಜನಾ ಮಂದಿರ, ಅಮ್ಮ ಭಗವಾನ್ ಮಾನವ ಸೇವಾ ಸಮಿತಿ, ಜಗತ್ ಫ್ರೇಂಡ್ಸ್ ಸರ್ಕಲ್, ವೆಲಕಮ್‍ಗ್ರೂಪ್ ಶ್ರೀ ಉಮಾ ಮಹೇಶ್ವರಿ ದೇವಸ್ಥಾನದ ಸಹಯೊಗದೊಂದಿಗೆಅಭಿಯಾನವನ್ನು ನಡೆಸಲಾಯಿತು. ಶ್ರೀ ವೇದಿತಕುಮಾರ ಸಂಯೋಜಿಸಿದರು.

276)ಫಳ್ನಿರ್: ಲಯನ್ಸ್‍ಕ್ಲಬ್‍ಸದಸ್ಯರಿಂದ ಫಳ್ನಿರ್ ಹೈಲ್ಯಾಂಡ್ ನಲ್ಲಿ ಸ್ವಚ್ಛತಾಕಾರ್ಯಕ್ರಮ ನಡೆಯಿತು. ಶ್ರೀ ತಾರಾನಾಥ ಶೆಟ್ಟಿ ಹಾಗೂ ಸುರೇಶ್‍ರೈಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ರಸ್ತೆಗಳ ಬದಿಗಳನ್ನು ಹಾಗೂ ತೋಡಿನಲ್ಲಿದ್ದತ್ಯಾಜ್ಯವನ್ನುತೆಗೆದು ಸ್ವಚ್ಛಗೊಳಿಸಲಾಯಿತು. ಶ್ರೀಸದಾಶಿವ ರೈ ಹಾಗೂ ಶ್ರೀಸುರೇಶ್ ಶೆಟ್ಟಿಕಾರ್ಯಕ್ರಮವನ್ನು ಸಂಯೋಜಿಸಿದರು.

277)ಮೇರ್ಲಪದವು:ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಮೇರ್ಲಪದವಿನಲ್ಲಿ ಸ್ವಚ್ಛತಾಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಗ್ರಾಮ ಪಂಚಾಯತ್ ಸದಸ್ಯ ಶ್ರೀ ಅಶೋಕ್ ಹಾಗೂ ಶ್ರೀ ರಾಜೇಶ್ ಶೆಟ್ಟಿ ಸ್ವಚ್ಛತಾಕಾರ್ಯಕ್ಕೆ ಚಾಲನೆ ನೀಡಿದರು.

278)ಏರಪೆÇೀರ್ಟ್‍ರಸ್ತೆ:ಕೆಪಿಟಿ ವಿದ್ಯಾರ್ಥಿಗಳಿಂದ ಏರಪೆÇರ್ಟ್‍ರಸ್ತೆಯಲ್ಲಿ ಸ್ವಚ್ಛತಾಕಾರ್ಯ ನಡೆಯಿತು. ಶ್ರೀರೋನಾಲ್ಡ್ ಮಿರಂಡ್‍ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೊದಲಿಗೆಏರಪೆÇೀರ್ಟ್‍ರಸ್ತೆಹಾಗೂ ಪುಟ್ ಪಾಥ್ ಗೂಡಿಸಿ ಶುಚಿಗೊಳಿಸಿದರು. ನಂತರ  ಪಾಲಿಟೆಕ್ನಿಕ್ ಮುಂಭಾಗದಗೊಡೆಗೆ ಅಂಟಿಸಿದ್ದ ಭಿತ್ತಿಚಿತ್ರಗಲನ್ನುಕಿತ್ತು ಶುಚಿಗೊಳಿಸಿದರು.

279)ಗೂಡಶೆಡ್‍ರಸ್ತೆ:ಶ್ರೀಗೋಪಾಲಕೃಷ್ಣ ಕುಂಬ್ಳೆ ನೇತೃತ್ವದಲ್ಲಿ ನಿರೇಶ್ವಾಲ್ಯರಸ್ತೆಯಲ್ಲಿ ಸ್ವಚ್ಛತೆಯನ್ನು ಕೈಗೊಳ್ಳಲಾಯಿತು.  ಶ್ರೀದೇವರಾಜ್ ಕಾಮತ್ ಹಾಗೂ ಮಾಧವ ಶೆಟ್ಟಿಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

280)ಕೊಣಾಜೆ:ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಸ್ವಚ್ಛತಾಕಾರ್ಯಕೊಣಾಜೆಯಲ್ಲಿಜರುಗಿತು. ಡಾ ಸುದೀಪ ಹಾಗೂ ಶ್ರಿ ಲತಾಕಾರ್ಯಕ್ರಮವನ್ನು ಶುಭಾರಂಭಗೊಳಿಸಿದರು. ಅಶೋಕ, ಶಶಾಂಕ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಸ್ವಚ್ಛತಾಕಾರ್ಯದಲ್ಲಿ ಭಾಗವಹಿಸಿದರು.

281)ದೇರೆಬೈಲ್: ಪ್ರಶಾಂತ ನಗರದಲ್ಲಿ ಸ್ವಚ್ಛತಾಕಾರ್ಯಕ್ರಮಜರುಗಿತು. ಮನಪಾ ಸದಸ್ಯ ಶ್ರೀ ರಾಜೇಶ್ ಹಾಗೂ ಎನ್‍ಎಲ್‍ರಾವ್‍ಕಾರ್ಯಕ್ರಮವನ್ನು ಆರಂಭಗೊಳಿಸಿದರು. ಪ್ರಶಾಂತ ನಗರ ಅಸೋಸಿಯೆಶನ್ ಸದಸ್ಯರುಸಹಯೋಗ ಒದಗಿಸಿದರು.

282ಅಶೋಕ ನಗರ: ಎಂಸಿಎ¥sóï ಮಂಗಳಾ ಸಿಬ್ಬಂದಿಯಿಂದ ಸ್ವಚ್ಛತಾಅಭಿಯಾನ ನಡೆಯಿತು. ಮನಪಾ ಸದಸ್ಯ ಶ್ರೀ ರಾಧಾಕೃಷ್ಣ ಹಾಗೂ ಶ್ರೀ ಪ್ರಭಾಕರ್‍ರಾವ್‍ಅಭಿಯಾನಕ್ಕೆ ನಿಶಾನೆ ತೋರಿದರು. ಶ್ರೀಸಾಯಿ ಫ್ರೇಂಡ್ಸ್ ಹಾಗೂ ಸ್ಪಂದನ ಫ್ರೇಂಡ್ಸ್ ಸ್ವಚ್ಛತಾಕಾರ್ಯಕ್ಕೆ ಕೈಜೋಡಿಸಿ ಸಹಕರಿಸಿದರು.

283)ಪಡೀಲ್: ಯೂಥ ಸೆಂಟರ್ ಹಾಗೂ ಆಟೋಚಾಲಕರ ಸಹಯೋಗದಲ್ಲಿ ಪಡೀಲ್‍ನಲ್ಲಿ ಸ್ವಚ್ಛ ಮಂಗಳೂರು ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಪಡೀಲ್‍ಜಂಕ್ಷನ್ ಸುತ್ತಮುತ್ತ ಸ್ವಚ್ಛಗೊಳಿಸಲಾಯಿತು. ತದನಂತರ ಮನೆಮನೆ ಸಂಪರ್ಕಿಸಿ ಜಾಗೃತಿಕರಪತ್ರ ನೀಡಲಾಯಿತು. ಶ್ರೀ ಉದಯಕುಮಾರ ಕೆ ಪಿ ಕಾರ್ಯಕ್ರಮವನ್ನು ಸಂಯೋಜಿಸಿದರು.

284)ಕೊಂಡಾಣ: ಶ್ರೀಎ ಸೀತಾರಾಂ ಮಾರ್ಗದರ್ಶನದಲ್ಲಿ ಮಿತ್ರನಗರದಲ್ಲಿ ಸ್ವಚ್ಛತೆಯನ್ನು ಹಮ್ಮಿಕೊಳ್ಳಲಾಯಿತು. ಶ್ರೀ ರವೀಂದ್ರ ಶೆಟ್ಟಿ ಹಾಗೂ ಪ್ರತಿಮಾ ಹೆಬ್ಬಾರ ಜಂಟಿಯಾಗಿ ಅಭಿಯಾನಕ್ಕೆ ಚಾಲನೆ ನೀಡಿದರು. ನೂರಾರು ಮನೆಗಗಳನ್ನು ಸಂಪರ್ಕ ಮಾಡಿ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಶ್ರಿಮತಿ ಪುಷ್ಪಕಲಾ ಬೀರಿ ಹಾಗೂ ಶ್ರೀ ಪ್ರವೀಣ ಕೊಂಡಾಣ ಸೇರಿದಂತೆ ಸುಮಾರು 70 ಜನ ಶ್ರಮದಾನ ಮಾಡಿದರು.

 


Spread the love