ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ವತಿಯಿಂದ ಸ್ವಚ್ಛ ಮಂಗಳೂರಿಗಾಗಿ  ಜಾಗೃತಿ  ಕಾರ್ಯಕ್ರಮಗಳು

Spread the love

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ವತಿಯಿಂದ ಸ್ವಚ್ಛ ಮಂಗಳೂರಿಗಾಗಿ  ಜಾಗೃತಿ  ಕಾರ್ಯಕ್ರಮಗಳು

ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಅಂಗವಾದ ಸ್ವಚ್ಛತಾಜಾಗೃತಿಕಾರ್ಯಕ್ರಮಗಳನ್ನು ಫೆಬ್ರವರಿ 16 ರಿಂದ ಮಾರ್ಚ್ 2 ರ ತನಕ ಮಂಗಳೂರಿನ ವಿವಿಧೆಡೆಕೈಗೊಳ್ಳಲಾಯಿತು.

ಮುಳಿಹಿತ್ಲು: ಶ್ರೀ ಅಂಬಾಮಹೇಶ್ವರಿ ಭಜನಾ ಮಂಡಳಿಯ ಸದಸ್ಯರು ಮುಳಿಹಿತ್ಲುವಿನಲ್ಲಿ 65ನೇ ದಿನದಜಾಗೃತಿಕಾರ್ಯಕ್ರಮವನ್ನು ಆಯೋಜಿಸಿದ್ದರು. ಉಮಾನಾಥಕೋಟೆಕಾರ್ ನೇತೃತ್ವದಲ್ಲಿಎರಡು ಗುಂಪುಗಳಲ್ಲಿ ಮನೆ ಮತ್ತು ಅಂಗಡಿಗಳನ್ನು ಸಂದರ್ಶಿಸಿ ಸ್ವಚ್ಛತಾಜಾಗೃತಿಕರಪತ್ರವನ್ನು ವಿತರಿಸಿ ಜನರಲ್ಲಿ ಸ್ವಚ್ಛತೆಕಾಯ್ದಿರಿಸುವಂತೆ ಮನವಿ ಮಾಡಿಕೊಂಡರು. ಜೊತೆಗೆಕಾರ್ಯಪ್ರವೃತ್ತ ಕಟ್ಟಡಗಳಿಗೆ ತೆರಳಿ ಶುಚಿತ್ವಕಾಯ್ದಿರಿಸುವಂತೆ ಸಿಬ್ಬಂದಿಯಲ್ಲಿ ಒತ್ತಾಯಿಸಿದರು.

ಕೋಟಿಚೆನ್ನಯ್ಯ ವೃತ್ತ: ಕೋಟಿಚೆನ್ನಯ್ಯ ವೃತ್ತದಿಂದ ಮಂಗಳಾದೇವಿ ಸಾಗುವ ರಸ್ತೆಯ ಪಕ್ಕದಲ್ಲಿ ನಿರಂತರವಾಗಿಕಸದ ರಾಶಿ ಬೀಳುತ್ತಿದ್ದದ್ದನ್ನು ನಿಲ್ಲಿಸುವ ಸಲುವಾಗಿ ವಿವೇಕಾನಂದಯುಥ್ ಫೆÇೀರಂಒಟ್ಟುಅರವತ್ತು ಸದಸ್ಯರುಐದು ಗುಂಪುಗಳಲ್ಲಿ ಸುತ್ತಮುತ್ತಲಿನ ಒಟ್ಟು200ಅಂಗಡಿ,ಮನೆಗಳಿಗೆ ತೆರಳಿ ರಸ್ತೆ ಬದಿಯಲ್ಲಿ ಕಸ ಎಸೆಯದಂತೆ ಸ್ಥಳಿಯರಲ್ಲಿ ಸ್ವಚ್ಛತೆಯಅರಿವು ಮೂಡಿಸಿ ಸ್ವಚ್ಛತಾ ಸಂಕಲ್ಪಕರಪತ್ರ ವಿತರಿಸಿದರು. 66ನೇ ಸ್ವಚ್ಛತಾಕಾರ್ಯಕ್ರಮವನ್ನು ನಲ್ಲೂರ ಸಚಿನ ಶೆಟ್ಟಿ ಹಾಗೂ ಅಭಿಷೇಕ ವಿ ಎಸ್‍ಸಂಯೋಜಿಸಿದರು.

ಅಳಕೆ: ಅಳಕೆ ಮುಖ್ಯರಸ್ತೆಯಲ್ಲಿನ ವ್ಯಾಪಾರ ಮಳಿಗೆಗಳಿಗೆ ತೆರಳಿದ ಸ್ವಚ್ಛ ಅಳಕೆಯ ಯುವಕರು ವರ್ತಕರನ್ನು ಭೇಟಿ ಮಾಡಿ ಸ್ವಚ್ಛತೆಗೆ ಹೆಚ್ಚಿನಒತ್ತು ನೀಡುವಂತೆ ಕೇಳಿಕೊಂಡರು. 67ನೇ ಈ ಕಾರ್ಯಕ್ರಮವನ್ನು ಕೃಷ್ಣ ಪ್ರಸಾದ್ ಶೆಟ್ಟಿ ಸಂಯೋಜಿಸಿದರು.

ಒಲ್ಡ್‍ಕೆಂಟ್‍ರೋಡ್:68ನೇ ನಿತ್ಯಜಾಗೃತಿಕಾರ್ಯದಲ್ಲಿ   ಶ್ರೀರಾಮ್ ಟ್ರಾನ್ಸ್ ಪೆÇರ್ಟ್ ಫೈನಾನ್ಸ್ ನ ಸುಮಾರು50ಜನ ಸಿಬ್ಬಂದಿಯವರು ಡಿಜಿಎಂ  ಶರತ್‍ಚಂದ್ರ  ನೇತೃತ್ವದಲ್ಲಿ ಪೆÇೀಲಿಸ್ ಕ್ವಾಟರ್ಸ್, ಆರ್‍ಟಿಒ, ಅಗ್ನಿಶಾಮಕದಳದ ಕಛೆÉೀರಿ ಸುತ್ತಮುತ್ತಲಿನ ಹಲವು ಕಛೇರಿಗಳಿಗೆ ಭೇಟಿ ನೀಡಿ ಅಧಿಕಾರಿಗಳಲ್ಲಿ ಸ್ವಚ್ಛತೆಗೆ ಹೆಚ್ಚಿನಆದ್ಯತೆ ನೀಡುವಂತೆ ಕೇಳಿಕೊಂಡರು. ಜೊತೆಗೆಅಕ್ಕಪಕ್ಕದ ಮನೆಗಳಿಗೆ ತೆರಳಿ ಸ್ವಚ್ಛತಾ ಮಾಹಿತಿ ಪತ್ರವನ್ನು ನೀಡಿಜಾಗೃತಿ ಮೂಡಿಸಿದರು.

ಅತ್ತಾವರ: ಕಳೆದ ಬಾರಿ ಸ್ವಚ್ಛತಾ ಶ್ರಮದಾನದ ಮೂಲಕ ಶುಚಿಗೊಳಿಸಿದ ಅತ್ತಾವರ ಸೆಂಟರ್ ಮತ್ತುಅತ್ತಾವರಕಟ್ಟೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛಅತ್ತಾವರತಂಡದ ಸದಸ್ಯರಿಂದ69ನೇ ನಿತ್ಯಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸದಸ್ಯರುಅಕ್ಷಿತ್‍ಅತ್ತಾವರ ಮತ್ತು ಮೊಹ್ಮದ್ ಶಮೀಮ್ ನೇತೃತ್ವದಲ್ಲಿಎರಡು ತಂಡಗಳಲ್ಲಿ  ಕರಪತ್ರಗಳನ್ನು ಮನೆಮನೆಗೆ ತೆರಳಿ ವಿತರಿಸಿದರು. ಸಿಟಿ ¥sóÉ್ರಂಡ್ಸ್  ಸದಸ್ಯರು ಮತ್ತುಎಸ್ ಎಂ ಕುಶೆ ಶಾಲೆಯ ಸ್ಕೌಟ್ಸ್ ವಿದ್ಯಾರ್ಥಿಗಳು ಸಾಥ್ ನೀಡಿದರು.

ಭವಂತಿ ಸ್ಟ್ರೀಟ್: ಶ್ರೀ ಗೋಕರ್ಣ ಮಠದ ಅನುಯಾಯಿಗಳು ಹಾಗೂ ಸ್ಥಳಿಯರು  ನಂದಾದೀಪರಸ್ತೆಯಲ್ಲಿ70ನೇ  ನಿತ್ಯಜಾಗೃತಿಅಭಿಯಾನವನ್ನು ಹಮ್ಮಿಕೊಂಡರು. ಈ ಸಂದರ್ಭದಲ್ಲಿ ಪುಣೆಯ ನಿವೃತ್ತ ಶಿಕ್ಷಕ ಹಾಗೂ ಪ್ರಧಾನಿಯವರಿಂದ ಪ್ರಶಂಸೆ ಪಡೆದ  ಶ್ರೀ ಚಂದ್ರಕಾಂತಕುಲಕರ್ಣಿ ಈ ಅಭಿಯಾನದಲ್ಲಿ ಪಾಲ್ಗೊಂಡುಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಪ್ರೇರೆಪಿಸಿದರು.ದಾಮೋದರ ಭಟ್, ದಿನಕರ್‍ಕಾಮತ್ ಸೇರಿದಂತೆ  ಅನೇಕ ಕಾರ್ಯಕರ್ತರು ಸುಮಾರು ನೂರೈವತ್ತಕ್ಕೂಅಧಿಕ ಮನೆಗಳಿಗೆ ಭೇಟಿ ನೀಡಿಜಾಗೃತಿಕರಪತ್ರ ವಿತರಿಸಿದರು.

ಉರ್ವಮಾರ್ಕೆಟ್: ಓಬಿಸಿ ಹಾಸ್ಟೆಲ್‍ನ ವಿದ್ಯಾರ್ಥಿನಿಯರುಉರ್ವ ಮಾರುಕಟ್ಟೆಆವರಣದಲ್ಲಿ71ನೇ ಅಭಿಯಾನವನ್ನು ಏರ್ಪಡಿಸಿದ್ದರು.  ವ್ಯಾಪಾರಿಗಳನ್ನು ಸಂಪರ್ಕಿಸಿ ತಮ್ಮತಮ್ಮ ಸ್ಥಳದ ಶುಚಿತ್ವಕ್ಕೆಆದ್ಯತೆ ನೀಡಲು ಮನವಿ ಮಾಡಿದರು ಮತ್ತುಕಸದಬುಟ್ಟಿಗಳನ್ನಿಡುವಂತೆ ಸ್ವಚ್ಛತಾ ಮಾಹಿತಿ ಪತ್ರನೀಡಿ ವಿನಂತಿಸಿಕೊಂಡರು. ಇದಲ್ಲದೆಗಾಂಧಿ ನಗರದ ಮನೆಗಳಿಗೂ ಭೇಟಿ ನೀಡಿಜಾಗೃತಿ ಮೂಡಿಸಲಾಯಿತು. ಒಟ್ಟು 50 ವಿದ್ಯಾರ್ಥಿನಿಯರು ವಿಠ್ಠಲದಾಸ ಪ್ರಭು ಮಾರ್ಗದರ್ಶನದಲ್ಲಿ ನಾಲ್ಕು ಗುಂಪುಗಳಲ್ಲಿ ಈ ಕಾರ್ಯಕೈಗೊಂಡರು. ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಶ್ರೀಮತಿ ಮಹಾಲಕ್ಷ್ಮೀ ಬೋಳಾರ ಕಾರ್ಯಕ್ರಮಕ್ಕೆ ಸಹಕರಿಸಿದರು.

ಮಲ್ಲಿಕಟ್ಟೆ: ಲಯನ್ಸ್‍ಕ್ಲಬ್ ಸದಸ್ಯರು ಮಲ್ಲಿಕಟ್ಟೆ ವೃತ್ತದಿಂದ ಕೆಎಸ್‍ಅರ್‍ಟಿಸಿ ಸಾಗುವ ರಸ್ತೆಯಲ್ಲಿ ಮನೆಮನೆಗಳಿಗೆ ಭೇಟಿನೀಡಿಕಸದಿಂದಾಗುವದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಿ ಸ್ವಚ್ಛತೆಗೆ ಸಂಬಂಧಿಸಿದ ಮಾಹಿತಿಪತ್ರವನ್ನು ನೀಡಿದರು. 72ನೇ ದಿನದ  ಈಅಭಿಯಾನದಲ್ಲಿ ಶ್ರೀ ಲ್ಯಾನ್ಸಿ ಮಸ್ಕರೆಂಜಸ್, ಉಮಾರಾವ್ ಸೇರಿದಂತೆ ಅನೇಕ ಆಸಕ್ತರು ಭಾಗವಹಿಸಿದ್ದರು.

ಜ್ಯೋತಿ ವೃತ್ತ: ಹಿಂದೂ ವಾರಿಯರ್ಸ್‍ತಂಡದ ಸದಸ್ಯರುಜ್ಯೋತಿ ವೃತ್ತದಿಂದ ಬಲ್ಮಠ ಸಾಗುವ ರಸ್ತೆಯಲ್ಲಿ73ನೇ ಜಾಗೃತಿಕಾರ್ಯಕ್ರಮವನ್ನು ಹಮ್ಮಿಕೊಂಡರು.  ಸ್ವಯಂ ಸೇವಕರು ಶಶಿಕಾಂತ ಬೆಳ್ತಂಗಡಿ, ಸೌಮ್ಯಕೋಡಿಕಲ್‍ಜೊತೆಗೂಡಿವ್ಯಾಪಾರ ಮಳಿಗೆಗಳಿಗೆ ತೆರಳಿ ಜಾಗೃತಿ ಪತ್ರ ನೀಡಿ ಸ್ವಚ್ಛತೆಗೆಆದ್ಯತೆಯನ್ನು ನೀಡುವಂತೆ ವಿನಂತಿಸಿದರು. ಅಲ್ಲದೆರಸ್ತೆಯ ಬೀದಿದೀಪಗಳಿಗೆ ಕಟ್ಟಿದ್ದ ಬ್ಯಾನರ್‍ಗಳನ್ನು ಸೌರಜ್ ಮಂಗಳೂರು ಹಾಗೂ ಕಾರ್ಯಕರ್ತರುತೆರವು ಗೊಳಿಸಿದರು.

ಮಣ್ಣಗುಡ್ಡ: ಅರ್ಟ್‍ಅಫ್ ಲಿವಿಂಗ್ ನ ಸದಸ್ಯರು ಸದಾಶಿವ ಕಾಮತ್   ನೇತೃತ್ವದಲ್ಲಿಮಣ್ಣಗುಡ್ದಗುರ್ಜಿಪರಿಸರದ ಮನೆಗಳಿಗೆ ಭೇಟಿಕೊಟ್ಟು , ಸ್ವಚ್ಛತಾ ಸಂಕಲ್ಪಕರಪತ್ರ ನೀಡುವುದರೊಂದಿಗೆ, ಮಾರ್ಗದಲ್ಲಿ ಕಸ ಎಸೆಯದಂತೆ ಮತ್ತುಎಸೆಯುವವರಿಗೆ ತಿಳಿಹೇಳುವಂತೆ ಕೇಳಿಕೊಳ್ಳಲಾಯಿತು.74ನೇ ದಿನದಅಭಿಯಾನದಲ್ಲಿಮಧುರಾಜ್, ಜಯಸಾಧನಾ ಪ್ರಸಾದ್ ಮತ್ತಿತರರು ಪಾಲ್ಗೊಂಡರು.


Spread the love