ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 33 ನೇ ಶ್ರಮದಾನದ ವರದಿ

Spread the love

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 33 ನೇ ಶ್ರಮದಾನದ ವರದಿ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 33ನೇ ಶ್ರಮದಾನ ನಗರದ ಕದ್ರಿ ಪಾರ್ಕ್ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜರುಗಿತು. 27-5-2018 ಆದಿತ್ಯವಾರದಂದು ಬೆಳಿಗ್ಗೆ 7:30ಕ್ಕೆ ಸ್ವಾಮಿ ಜಿತಕಾಮಾನಂದಜಿ ಸಮಕ್ಷಮದಲ್ಲಿ ಡಾ.ಶ್ರೀಕುಮಾರ್ ಮೆನನ್, ರಿಜಿಸ್ಟ್ರಾರ್, ಯೆನಪೆÇೀಯ ವಿಶ್ವವಿದ್ಯಾನಿಲಯ ಹಾಗೂ ಡಾ. ಸುಬ್ರಮಣ್ಯ ಶೆಟ್ಟಿ ಜಂಟಿಯಾಗಿ ಶ್ರಮದಾನಕ್ಕೆ ನಿಶಾನೆ ತೋರಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಮೇಶ್ ರಾವ್, ಮಸಾ ಹಿರೊ, ನಾಗೇಶ್ ಕೆ, ಪುರುಷೋತ್ತಮ ಪೂಜಾರಿ, ಎನ್ನಾರೈ ವಿಭಾ ಪ್ರಭು, ಅನಿರುದ್ಧ ನಾಯಕ್ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಶ್ರೀಕುಮಾರ್ ಮೆನನ್ “ಸ್ವಚ್ಛ ಭಾರತ ಅಭಿಯಾನವು ಜನಾಂದೋಲನವಾಗಿ ಮಾರ್ಪಟ್ಟಿರುವುದು ಸ್ಪಷ್ಟ. ಈ ದಿಸೆಯಲ್ಲಿ ರಾಮಕೃಷ್ಣ ಮಿಷನ್ ಕಾರ್ಯ ಸ್ತುತ್ಯರ್ಹ. ಇದೀಗ ಯುಜಿಸಿ ಸಹ ಸ್ವಚ್ಛತಾ ಅಭಿಯಾನವನ್ನು ಬಹಳ ಗಂಭೀರವಾಗಿ ಪರಿಗಣಿಸಿ ಈ ದಿಸೆಯಲ್ಲಿ ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ಯೋಜನೆ ರೂಪಿಸಿರುವುದರಿಂದ ಸ್ವಚ್ಛ ಭಾರತ ಅಭಿಯಾನಕ್ಕೆ ಮತ್ತಷ್ಟು ವೇಗ ದೊರಕಿದೆ. ಕಂಡಕಂಡಲ್ಲಿ ಕಸ ಬಿಸಾಡುವುದು, ಉಗಿಯುವುದು ಮತ್ತಿತರ ಬೇಜಾವಾಬ್ದಾರಿತನ ದೂರವಾಗಬೇಕಾದರೆ ಜನರಲ್ಲಿ ಜಾಗೃತಿ ಮೂಡಿಸುವ ಇಂತಹ ಅಭಿಯಾನಗಳು ಅತ್ಯಂತ ಸಹಕಾರಿಯಾಗಬಲ್ಲವು” ಎಂದು ತಿಳಿಸಿದರು

ಮತ್ತೊರ್ವ ಅತಿಥಿ ಡಾ. ಸುಬ್ರಮಣ್ಯ ಶೆಟ್ಟಿ ಶುಭಹಾರೈಸಿ ಮಾತನಾಡಿ “ವಿನೂತನ ಭಾರತವನ್ನು ಕಾಣಬೇಕಾದರೆ ವಿದೇಶಗಳಲ್ಲಿರುವ ಸ್ವಚ್ಛತೆ, ಶಿಸ್ತು, ನಿಯಮಪಾಲನೆಗಳು ಪ್ರತಿ ಭಾರತೀಯನಲ್ಲಿ ಒಡಮೂಡುವಂತಾಗಬೇಕು. ಹೊರದೇಶಕ್ಕೆ ಹೋದಾಗ ನಿಯಮಗಳನ್ನು ಪಾಲಿಸುವ ನಾವು ಭಾರತಕ್ಕೆ ಬಂದಾಗಲೂ ಅವನ್ನು ಅನುಸರಿಸುವಂತಾಗ ಮಾತ್ರ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ” ಎಂದರು

ಸ್ವಚ್ಛತೆ: ಮೊದಲಿಗೆ ಕಾರ್ಯಕರ್ತರನ್ನು ಐದು ತಂಡಗಳಾಗಿ ವಿಂಗಡಿಸಿ eವಾಬ್ದಾರಿಯನ್ನು ಹಂಚಲಾಯಿತು. ಬಳಿಕ ಕದ್ರಿಪಾರ್ಕ್ ಮುಂಭಾಗದಿಂದ ಸ್ವಚ್ಛತೆಯನ್ನು ಆರಂಭಿಸಲಾಯಿತು. ಒಂದು ತಂಡ ಕದ್ರಿಪಾರ್ಕ್ ಒಳಭಾಗದಲ್ಲಿದ್ದ ಪುಟಾಣಿ ರೈಲು ಟ್ರಾಕ್, ವಾಕಿಂಗ್ ಟ್ರಾಕ್ ಹಾಗೂ ರೇಡಿಯೊ ಪೆವಿಲಿಯನ್‍ಗಳನ್ನು ಗುಡಿಸಿ ಶುಚಿಗೊಳಿಸಿದರು. ಮೆಹಬೂಬ್ ಖಾನ್ ಹಾಗೂ ಸ್ವಯಂಸೇವಕರ ಮತ್ತೊಂದು ತಂಡ ಕದ್ರಿ ಪಾರ್ಕ್‍ನಿಂದ ಪದುವಾನತ್ತ ಸಾಗುವ ರಸ್ತೆಯಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡರು. ಡಾ ಧನೇಶಕುಮಾರ್ ಹಾಗೂ ಕಾರ್ಯಕರ್ತರು ಉದ್ಯಾನವನದ ಮುಂಭಾಗದ ಕಾಲುದಾರಿಗಳನ್ನು ಶುಚಿಗೊಳಿಸಿದರು. ಜೆಸಿಬಿ ಯಂತ್ರ ಬಳಸಿಕೊಂಡು ಕಾಲುದಾರಿಯಲ್ಲಿ ಬಿದ್ದುಕೊಂಡಿದ್ದ ದೊಡ್ದ ಕಲ್ಲು ಚಪ್ಪಡಿಗಳನ್ನು ತೆಗೆದು, ಬದಿಗೆ ಹಾಕಿ ಮಣ್ಣು ಸಮತಟ್ಟು ಮಾಡಲಾಯಿತು. ಶುಭೋದಯ ಆಳ್ವ ಮಾರ್ಗದರ್ಶಿಸಿದರು.

ಸಾವಿರಾರು ಬ್ಯಾನರ್ ತೆರವು ಕಾರ್ಯಾಚರಣೆ ನಗರದಲ್ಲಿ ಮತ್ತೆ ಅನಧಿಕೃತ ಬ್ಯಾನರ್ ಹಾವಳಿ ದಿಢೀರ್ ಹೆಚ್ಚಾಗಿದೆ. ಅಲ್ಲಲ್ಲಿ ಕಟ್ಟಿರುವ ಬ್ಯಾನರ್‍ಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುವುದಲ್ಲದೇ ವಾಹನ ಸವಾರರಿಗೂ ಸಂಕಷ್ಟ ತಂದೊಡ್ಡುತ್ತಿರುವ ಹಿನ್ನಲೆಯಲ್ಲಿ ಸ್ವಚ್ಛ ಮಂಗಳೂರು ಕಾರ್ಯಕರ್ತರು ಎರಡು ತಂಡಗಳನ್ನು ರಚಿಸಿಕೊಂಡು ಕಾರ್ಯಾಚರಣೆ ನಡೆಸಿದರು. ಮುಖ್ಯವಾಗಿ ಕಂಕನಾಡಿ, ಜ್ಯೋತಿ, ಬಿಜೈ, ಆಗ್ನೇಸ್, ಬೆಂದೂರವೆಲ್, ಪಂಪವೆಲ್, ನಂತೂರು, ಬಲ್ಮಠ ಹಾಗೂ ಇತರೆಡೆಗಳಲ್ಲಿದ್ದ ಸಾವಿರಾರು ಬ್ಯಾನರ್‍ಗಳನ್ನು ತೆರವುಗೊಳಿಸುವ ಕಾರ್ಯ ಜರುಗಿತು.

ಬಸ್ ತಂಗುದಾಣದ ಸ್ವಚ್ಛತೆ: ಪ್ರಯಾಣಿಕರು ಪ್ರತಿನಿತ್ಯ ಉಪಯೋಗಿಸುವ ಕದ್ರಿ ಪೆÇೀಲಿಸ್ ಠಾಣಾ ಮುಂಭಾಗದ ಬಸ್ ತಂಗುದಾಣವನ್ನು ಈ ಹಿಂದೆ ಸ್ವಚ್ಛ ಮಂಗಳೂರಿನ ಕಾರ್ಯಕರ್ತರು ನವೀಕರಣಗೊಳಿಸಿದ್ದರು. ಅದೇ ತಂಗುದಾಣವನ್ನು ಇಂದು ನೀರಿನಿಂದ ತೊಳೆದು ಸ್ವಚ್ಛಗೊಳಿಸಿದರು. ಅಲ್ಲದೇ ಅದರ ಸುತ್ತಮುತ್ತಲಿನ ಜಾಗೆಯನ್ನೂ ಸ್ವಚ್ಛಗೊಳಿಸಿದರು. ಕಾರ್ಯಕರ್ತರಾದ ಗಣೇಶ್ ಪ್ರಸಾದ್ ಶೆಟ್ಟಿ, ಕೃಷ್ಣಪ್ರಸಾದ್ ಶೆಟ್ಟಿ, ಚೇತನಾ ಗಡಿಯಾರ್ ಮತ್ತಿತರರು ಶ್ರಮದಾನದಲ್ಲಿ ಸಕ್ರಿಯರಾಗಿ ಪಾಲ್ಗೊಂಡರು.

ಸ್ವಚ್ಛತಾ ಜಾಗೃತಿ: ಮಾಪ್ಸ್ ಕಾಲೇಜಿನ ವಿದ್ಯಾರ್ಥಿಗಳು ಮಾಜಿ ಕಾಪೆರ್Çರೇಟರ್ ಸುರೇಶ್ ಶೆಟ್ಟಿ ಜೊತೆಯಾಗಿ ಸ್ವಚ್ಛತಾ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡರು. ಕದ್ರಿ ಉದ್ಯಾನವನದಲ್ಲಿದ್ದ ಸಾರ್ವಜನಿಕರನ್ನು ಭೇಟಿಯಾಗಿ ಕರಪತ್ರ ಹಂಚಿ, ಶುಚಿತ್ವದ ಮಹತ್ವವನ್ನು ಹೇಳಿದರು. ಹತ್ತಿರದ ಅಂಗಡಿಗಳನ್ನೂ ಸಂಪರ್ಕಿಸಿ ಕಸವನ್ನು ಅಲ್ಲಲ್ಲಿ ಬಿಸಾಡದಂತೆ ವಿನಂತಿಸಿದರು.

ಶ್ರೀಲತಾ ಉಳ್ಳಾಲ, ಉದಯ ಕೆ ಪಿ, ಪಿ ಎನ್ ಭಟ್, ಸಂದೀಪ ಕೋಡಿಕಲ್, ಸೌರಜ್ ಮಂಗಳೂರು, ಪ್ರೀತಮ್ ಮುಗಿಲ್, ಜಗನ್ ಕೋಡಿಕಲ್, ವಿಖ್ಯಾತ್ ಸವಿತಾ ಮರ್ನಾಡ, ಕೌಶಿಕ್ ಬೇಕಲ್, ಮಹ್ಮದ್ ಆರೀಫ್ ಮತ್ತಿತರ ಕಾರ್ಯಕರ್ತರು ಅಭಿಯಾನದಲ್ಲಿ ಭಾಗವಹಿಸಿ ಶ್ರಮದಾನಗೈದರು.

 


Spread the love