ರಾಷ್ಟ್ರಧ್ವಜದ ಅವಮಾನ ತಡೆಗಟ್ಟುವಂತೆ ಮನವಿ

Spread the love

ರಾಷ್ಟ್ರಧ್ವಜದ ಅವಮಾನ ತಡೆಗಟ್ಟುವಂತೆ ಮನವಿ

ಬಂಟ್ವಾಳ: ರಾಷ್ಟ್ರಧ್ವಜದ ಅವಮಾನವನ್ನು ತಡೆಗಟ್ಟುವ ಕುರಿತಾಗಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾನ್ಯ ತಹಶಿಲ್ದಾರರಾದ ಪುರಂದರ ಹೆಗ್ಡೆ ಇವರಿಗೆ ಮನವಿ ನೀಡಲಾಯಿತು.

ಈ ಕೆಳಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮನವಿ ನೀಡಲಾಯಿತು :

ಉಚ್ಚನ್ಯಾಯಾಲಯದ ಆದೇಶದಂತೆ ರಾಷ್ಟ್ರ ಧ್ವಜದ ಅವಮಾನವನ್ನು ತಡೆಯಲು ಪ್ಲಾಸ್ಟಿಕ್ ಧ್ವಜದ ಬಳಕೆಯ ಮೇಲೆ ನಿರ್ಬಂಧವನ್ನು ಹೇರಬೇಕು.

ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಗಳಂದು ಹಿಂದೂ ಜನಜಾಗೃತಿಸಮಿತಿಯು ರಾಷ ಧ್ವಜದ ಅವಮಾನವನ್ನು ತಡೆಗಟ್ಟಲು ಅಭಿಯಾನ ನಡೆಸುತ್ತಿದೆ. ಆ ದಿನಗಳಂದು ಬೆಳಗ್ಗೆ ನಾವು ಸ್ವಾಭಿಮಾನದಿಂದ ಝಂಡಾ ಊಂಚಾ ರಹೇ ಹಮಾರಾವೆಂಬ ಹಾಡನ್ನು ಹಾಡುತ್ತೇವೆ. ಅಂದೇ ಸಂಜೆ ಅದೇ ರಾಷ್ಟ್ರ ಧ್ವಜವು ಹರಿದು ಹೋದ ಸ್ಥಿತಿಯಲ್ಲಿ ಕಸದ ತೊಟ್ಟಿಗಳಲ್ಲಿ ಬಿದ್ದು ಅಥವಾ ಕಾಲ್ತುಳಿತಕ್ಕೆ ಸಿಲುಕಿ ಅವಮಾನಕ್ಕೆ ಈಡಾಗುವುದು ಕಂಡುಬರುತ್ತಿದೆ! ಕೆಲವೆಡೆ ಅದನ್ನು ಆಟೋಟಗಳಲ್ಲಿ ಆಟಿಕೆಯ ವಸ್ತುವಂತೆ ಬಳಸಲಾಗುತ್ತಿದೆ! ಇದು ನಮ್ಮ ರಾಷ್ಟ್ರ ಧ್ವಜಕ್ಕಾಗುವ ಅಪಚಾರ, ಅವಮಾನವೇ ಆಗಿದೆ.

ರಾಷ್ಟ್ರ ಧ್ಜಜದ ಗೌರವವನ್ನು ಕಾಪಾಡುವ ಅಭಿಯಾನವನ್ನು ಕಳೆದ 15 ವರ್ಷಗಳಿಂದ ಸಮಿತಿಯು ನಡೆಸುತ್ತಿದ್ದು, ಮಕ್ಕಳ , ಜನರ ಮನಸ್ಸಿನಲ್ಲಿರಾಷ್ಟ್ರ ಧ್ವಜದ ಬಗ್ಗೆ ಅಭಿಮಾನವನ್ನು ಮೂಡಿಸಲು ಪ್ರಯತ್ನ ಮಾಡುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯು ಈ ದಿಶೆಯಿಂದ ಕಳೆದ 15 ವರ್ಷಗಳಿಂದ ರಾಷ್ಟ್ರ ಧ್ವಜದ ಗೌರವ ಕಾಪಾಡುವ ಅಭಿಯಾನವನ್ನು ಮಾಡುತ್ತಿದೆ. ಈ ದೃಷ್ಠಿಯಿಂದ ಈ ಕೆಳಗಿನ ಅಂಶಗಳನ್ನು ಈ ಮೂಲಕ ಜಾರಿಗೆ ತರಲು ವಿನಂತಿಸುತ್ತೇವೆ.

1. ಸರಕಾರವು ಜಿಲ್ಲಾ ಸ್ಥರದಲ್ಲಿ ರಾಷ್ಟ್ರ ಧ್ವಜದ ಗೌರವ ಕಾಪಾಡಿ ಅಭಿಯಾನವನ್ನು ಮಾಡಲು ಪ್ರತ್ಯೇಕ
ಸಮಿತಿಯನ್ನು ರಚಿಸಬೇಕು.

2.ಪ್ಲಾಸ್ಟಿಕ್ ಧ್ವಜದ ಬಳಕೆ, ಉತ್ಪಾದನೆ, ಮಾರಾಟವನ್ನು ನಿಷೇಧಿಸಲು ಕರಪತ್ರ, ಹೊರ‍್ಡಿಂಗ್ಸ್, ಜಾಹಿರಾತುಗಳ ಮೂಲಕ ಜಾಗೃತಿ ಮೂಡಿಸಲು ಪ್ರಯತ್ನಿಸಬೇಕು.

3.ಯಾವುದೇ ಕಾರಣಕ್ಕೂ ಎಲ್ಲಯೂ ಸಹ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ರಾಷ್ಟ್ರ ಧ್ವಜದ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ಕ್ರಮ ತೆಗೆದುಕೊಳ್ಳಬೇಕು. ಯಾರಾದರೂ ಪ್ಲಾಸ್ಟಿಕ್ ಧ್ವಜ ಮಾರಾಟ ಮಡುತ್ತಿದ್ದಲ್ಲಿ ಅವರ
ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.

ಮನವಿ ನೀಡುವ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಚಂದ್ರ ಮೊಗೇರ, ಶ್ರೀ. ಉಪೇಂದ್ರ ಆಚಾರ್ಯ , ಶ್ರೀ. ಜಯಂತ ಮೆಲ್ಕಾರ್, ಸೌ. ಲೀಲಾವತಿ, ಉದ್ಯಮಿ ಶ್ರೀ. ದಿನೇಶ್ ಎಮ್.ಪಿ ಮೊದಲಾದವರು ಉಪಸ್ಥಿತರಿದ್ದರು


Spread the love