ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡುವುದು ಅಗತ್ಯ – ಡಾ.ಎಸ್.ಬಸವರಾಜು

Spread the love

ರಾಸಾಯನಿಕ ಮುಕ್ತ ಕೃಷಿಗೆ ಒತ್ತು ನೀಡುವುದು ಅಗತ್ಯ – ಡಾ.ಎಸ್.ಬಸವರಾಜು

ಮೈಸೂರು: ರಾಸಾಯನಿಕ ಬಳಸದೇ ವ್ಯವಸಾಯ ಮಾಡಬೇಕು. ರಾಸಾಯನಿಕ ಬಳಕೆಯಿಂದ ಜೀವ ವೈವಿಧ್ಯ ನಶಿಸುತ್ತಿದೆ. ಸಾವಯವ ಕೃಷಿಗೆ ಮರಳುವುದು ಅಗತ್ಯ ಎಂದು ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಬಸವರಾಜು ಹೇಳಿದರು.

ಒಡಿಪಿ ಸಂಸ್ಥೆ, ಗ್ರಾಮ ವಿಕಾಸ ಸ್ವ ಸಹಾಯ ಸಂಘಗಳ ಮಹಾ ಒಕ್ಕೂಟ, ಕ್ರಾಸ್ ಸಂಸ್ಥೆ, ಭೂಸಿರಿ ಡೆವಲಪ್‌ಮೆಂಟ್ ಫೌಂಡೇಷನ್ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಕುಟುಂಬಕ್ಕೊಂದು ಮರ ನೆಟ್ಟರೆ ಸಾಲದು, ಕುಟುಂಬದ ಪ್ರತಿ ಸದಸ್ಯರು ಗಿಡ ನೆಟ್ಟು ಊರಿಗೊಂದು ಕಾಡನ್ನು ಬೆಳೆಸಬೇಕೆಂದು ಕರೆ ನೀಡಿದರು.

ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಡಾ.ಬರ್ನಾಡ್ ಮೊರಾಸ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಭೂಮಿ ದೇವರ ಸೃಷ್ಟಿ. ಅದನ್ನು ಸಂರಕ್ಷಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಎಲ್ಲೆಡೆ ಸ್ವಚ್ಛತೆ ಕಾಪಾಡಬೇಕು ಎಂದು ನುಡಿದರು. ಒಡಿಪಿ ಸಂಸ್ಥೆ ನಿರ್ದೇಶಕ ಸ್ವಾಮಿ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ಪ್ರಾಸ್ತಾವಿಕವಾಗಿ ಮಾತನಾಡಿ, ನೀರು, ವಿದ್ಯುತ್, ವಾಹನ ಬಳಕೆಯನ್ನು ಹಿತಮಿತವಾಗಿ ಬಳಸಬೇಕು. ಪ್ಲಾಸ್ಟಿಕ್ ಬಳಕೆ ತ್ಯಜಿಸಿದರೆ ಪರಿಸರ ಸಮತೋಲನಕ್ಕೆ ಬರುತ್ತದೆ ಎಂದು ಹೇಳಿದರು.

ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದ ಉಪ ನಿರ್ದೇಶಕ ಡಾ.ಯೋಗೇಶ್ ಮಾತನಾಡಿ, ಮನುಷ್ಯ ಸತ್ತರೆ ಭೂಮಿಗೆ ಸೇರುತ್ತಾನೆ. ಆದರೆ, ಭೂಮಿ ಸತ್ತರೆ ಎಲ್ಲಿಗೆ ಎಂಬ ಪ್ರಶ್ನೆ ಕೇಳಿದರು. ಭೂಮಿಯ ಫಲವತ್ತತೆಯನ್ನು ಉಳಿಸಿ ಸಂರಕ್ಷಿಸಬೇಕು. ರೈತರು ಮಾಗಿ ಉಳುಮೆಯ ಮಾಡಬೇಕು. ತಮ್ಮ ತಮ್ಮ ಜಮೀನುಗಳಲ್ಲಿ ಬಧುಗಳನ್ನು ನಿರ್ಮಿಸಿಕೊಳ್ಳಬೇಕು. ಸಾವಯವ ಗೊಬ್ಬರವನ್ನು ಬಳಸಬೇಕು ಆಗ ಮಾತ್ರ ಭೂಮಿ ಸಾಯದಂತೆ ಮಾಡಬಹುದು ಎಂದು ನುಡಿದರು.

ಮೈಸೂರು ವಿವಿ ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಬಸವರಾಜು ನಮ್ಮ ಭೂಮಿ ನಮ್ಮ ಭವಿಷ್ಯ ಕುರಿತು ಮಾತನಾಡಿ, ಪರಿಸರದಲ್ಲಿ ಪ್ರಮುಖವಾಗಿ ನೀರು, ಗಾಳಿ, ಭೂಮಿ, ಆಕಾಶ ಮತ್ತು ಬೆಂಕಿ ಈ ಪಂಚಭೂತಗಳನ್ನು ಮನುಷ್ಯ ಅವಲಂಬಿಸಿದ್ದು ಇವುಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸುತ್ತಾ ಭೂಮಿಗೆ ರಾಸಾಯನಿಕಗಳನ್ನು ಬಳಸದೇ ವ್ಯವಸಾಯ ಮಾಡಬೇಕೆಂದು ತಿಳಿಸಿದರು.

ಸರ್ಕಾರ ಸಹ ಬಾಲ್ಯದಿಂದಲೇ ಮಕ್ಕಳಲ್ಲಿ ಭೂಮಿ ಮತ್ತು ಪರಿಸರ ವಿಷಯದ ಬಗ್ಗೆ ಹೆಚ್ಚಿನ ಜ್ಞಾನ ಮತ್ತು ಮಹತ್ವ ತಿಳಿಸಲು ಪಠ್ಯ ಪುಸ್ತಕದಲ್ಲೂ ಸಹ ಸೇರಿಸಲಾಗಿದೆ. ರಾಸಾಯನಿಕ ಬಳಕೆಯಿಂದ ಜೀವ ವೈವಿಧ್ಯಗಳು ನಶಿಸಿ ಹೋಗುತ್ತವೆ. ಸಾವಯವ ಕೃಷಿಗೆ ನಾವೆಲ್ಲರು ಹಿಂದಿರುಗಬೇಕೆಂದು ಆಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಭೂಮಿ ಫಲವತ್ತತೆ ಉಳಿಸಿಕೊಳ್ಳುತ್ತದೆ. ಪ್ರತಿಯೊಬ್ಬರು ಕುಟುಂಬಕ್ಕೊಂದು ಮರ ನೆಟ್ಟರೆ ಸಾಲದು, ಕುಟುಂಬದ ಪ್ರತೀ ಸದಸ್ಯರು ಗಿಡ ನೆಟ್ಟು ಊರಿಗೊಂದು ಕಾಡನ್ನು ಬೆಳೆಸಬೇಕೆಂದು ಕರೆ ನೀಡಿದರು.

ನಾಗನಹಳ್ಳಿ ಕೃಷಿ ತರಬೇತಿ ಕೇಂದ್ರದ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್, ಸಹಾಯಕ ಕೃಷಿ ನಿರ್ದೇಶಕ ಜಯರಾಮು, ಎಂ.ಸಿ.ನಿತ್ಯಾನಂದ ಇದ್ದರು. ಅಶೋಕ್ ವಂದಿಸಿದರು. ಜಾನ್ ರೋಡ್ರಿಗಸ್ ನಿರೂಪಿಸಿದರು. ೧೦೦೦ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.


Spread the love
Subscribe
Notify of

0 Comments
Inline Feedbacks
View all comments