ರಿಪಬ್ಲಿಕ್ ಡೇ ಪೆರೇಡ್ನಲ್ಲಿ ಭಾಗವಹಿಸಲು ಮೇಘನ ಆಯ್ಕೆ

Spread the love

ರಿಪಬ್ಲಿಕ್ ಡೇ ಪೆರೇಡ್ನಲ್ಲಿ ಭಾಗವಹಿಸಲು ಮೇಘನ ಆಯ್ಕೆ

ಮಂಗಳೂರು: ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿನಿ CPL ಮೇಘನರವರು 2019ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯುವ ರಿಪಬ್ಲಿಕ್ ಡೇ ಪೆರೇಡ್ನಲ್ಲಿ ಭಾಗವಹಿಸಲು ಆಯ್ಕೆಯಾಗಿರುತ್ತಾರೆ.

ಈ ಪೆರೇಡ್ನಲ್ಲಿ ಭಾಗವಹಿಸಲು ನಡೆಸಲಾದ 7 ದಿನಗಳ ಕ್ಯಾಂಪ್ನಲ್ಲಿ ಅವರು ಮಂಗಳೂರು ಎನ್.ಸಿ.ಸಿ. ಗ್ರೂಪ್ನ್ನು ಪ್ರತಿನಿಧಿಸಿದ್ದರು.ಇದರಲ್ಲಿ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ನಡೆಸಲಾದ 2 ಕ್ಯಾಂಪ್ಗಳಲ್ಲಿ 18 ಕರ್ನಾಟಕ ಬೆಟಾಲಿಯುನ್ನ್ನು ಪ್ರತಿನಿಧಿಸಿದ್ದರು ಮತ್ತು ನವಂಬರ್ 2018ರಲ್ಲಿ ಬೆಂಗಳೂರಿನಲ್ಲಿ ನಡೆದ ಏರ್ಫೋರ್ಸ್ ಬೇಸ್ನಲ್ಲಿ ನಡೆದ 3 ಕ್ಯಾಂಪ್ಗಳಲ್ಲಿ ಭಾಗವಹಿಸಿದ್ದರು. ಪ್ರಸ್ತುತ ಅವರು ನವದೆಹಲಿಯಲ್ಲಿ ನಡೆಯುವ ರಿಪಬ್ಲಿಕ್ ಡೇ ಪೆರೇಡ್ನಲ್ಲಿ ಕರ್ನಾಟಕ ಮತ್ತು ಗೋವಾ ಡೈರೆಕ್ಟೋರೇಟನ್ನು ಪ್ರತಿನಿಧಿಸುತ್ತಿದ್ದಾರೆ.


Spread the love