ರೂ. 5 ಕೋಟಿ ವೆಚ್ಚದ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ದಿ ಕಾಮಗಾರಿಗಳಿಗೆ ರಘುಪತಿ ಭಟ್ ಚಾಲನೆ

Spread the love

ರೂ. 5 ಕೋಟಿ ವೆಚ್ಚದ ಅಲ್ಪಸಂಖ್ಯಾತ ಕಾಲೋನಿ ಅಭಿವೃದ್ದಿ ಕಾಮಗಾರಿಗಳಿಗೆ ರಘುಪತಿ ಭಟ್ ಚಾಲನೆ

ಉಡುಪಿ: ಸೋಮವಾರದಂದು ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಕೆ ರಘುಪತಿ ಭಟ್ ಇವರು ಉಡುಪಿ ವಿಧಾನಸಭಾ ಕ್ಷೇತ್ರದ ಬ್ರಹ್ಮಾವರ ತಾಲ್ಲೂಕು ವ್ಯಾಪ್ತಿಯಲ್ಲಿನ ವಾರಾಹಿ ಅಚ್ಚುಕಟ್ಟು ಪ್ರದೇಶ ನಿಧಿಯಡಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಬಿಡುಗಡೆ ಗೊಂಡ ರೂ. 2.00 ಕೋಟಿ ಅನುದಾನ ಮತ್ತು ಸರಕಾರಿ ಆದೇಶ ಸಂಖ್ಯೆ MWD 634 MDS 2018 ದಿನಾಂಕ 04-12-2018 ರಂತೆ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿ ಅನುದಾನದಡಿ ಬಿಡುಗಡೆಗೊಂಡ ರೂ. 5.00 ಕೋಟಿ ಅನುದಾನದಲ್ಲಿನ ಈ ಕೆಳಗಿನ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ರಾದ ಶೀಲಾ ಕೆ ಶೆಟ್ಟಿ, ಉಡುಪಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್ ಆರೂರು, ಜಿಲ್ಲಾ ಪಂಚಾಯತ್ ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಸುಧೀರ್ ಕುಮಾರ್ ಶೆಟ್ಟಿ, ಗೋಪಿ ಕೆ ನಾಯಕ್, ಡಾ. ಸುನೀತಾ ಶೆಟ್ಟಿ, ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಮತ್ತು ಬಿಜೆಪಿಯ ಸ್ಥಾನೀಯ ಸಮಿತಿಯ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.

ಚಾಲನೆ ನೀಡದ ಕಾಮಗಾರಿಗಳ ವಿವರ

 • ಹೇರಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪ. ಪಂಗಡದ ಈಶ್ವರನಗರಕ್ಕೆ ಹೋಗುವ ರಸ್ತೆ ಕಾಮಗಾರಿ ರೂ. 20.00 ಲಕ್ಷ
 • ಚಾಂತಾರು ಗ್ರಾಮದ ಅಗ್ರಹಾರದಿಂದ ಪ್ರಗತಿ ನಗರದ ಪ್ರೆಸಿಲ್ಲಾ ಡಿ ಸೋಜ ರವರ ಮನೆ ಎದುರಿನ ರಸ್ತೆ ಕಾಮಗಾರಿ ರೂ. 20.00 ಲಕ್ಷ
 • ಹೇರೂರು ಗ್ರಾಮದ ಹೊಳೆಬದಿ ತಿಮೋತಿ ರೊಡ್ರಿಗಸ್ ಮನೆಗೆ ಹೋಗುವ ರಸ್ತೆ ಕಾಮಗಾರಿ ರೂ. 20.00 ಲಕ್ಷ
 • ಆರೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ದಾಸಬೆಟ್ಟು ಹ್ಯಾರಿ ಡಾಯಸ್ ಮನೆಯ ವರೆಗಿನ ರಸ್ತೆ ಕಾಮಗಾರಿ ರೂ. 25.00 ಲಕ್ಷ
 • ಆರೂರು ಗ್ರಾಮದ ಗದ್ದುಗೆಗೆ ಹೋಗುವ ರಸ್ತೆ ಕಾಮಗಾರಿ ರೂ. 20.00 ಲಕ್ಷ
 • ಆರೂರು ಗ್ರಾಮದ ಜೆ. ಪಿ ನಗರ ಎಸ್. ಸಿ. ಕಾಲನಿ ರಸ್ತೆ ಕಾಮಗಾರಿ ರೂ. 10.00 ಲಕ್ಷ
 • ನೀಲಾವರ ಪಂಚಾಯತ್ ವ್ಯಾಪ್ತಿಯ ಕಳುವಿನ ಬೆಟ್ಟು ಹೆನ್ರಿ ಡಿ ಸೋಜ ರವರ ಯನೆಯಿಂದ ಫೆಲಿಕ್ಸ್ ಡಿ ಸೋಜ ರವರ ಮನೆ ವರೆಗಿನ ರಸ್ತೆ ಕಾಮಗಾರಿ ರೂ. 40.00 ಲಕ್ಷ
 • ಹೊಸೂರು ಗ್ರಾಮದ ಕರ್ಜೆ ಬ್ರಾಹ್ಮಣರ ಬೆಟ್ಟು ಎಸ್. ಟಿ ಯವರ ಮನೆಗೆ ಹೋಗವ ರಸ್ತೆ ಕಾಮಗಾರಿ ರೂ. 15.00 ಲಕ್ಷ
 • ಚೇರ್ಕಾಡಿ ಪಂಚಾಯತ್ ವ್ಯಾಪ್ತಿಯ ಹಿಂಕ್ಲಾಡಿ ಮಡಿ ರಸ್ತೆ ಕಾಮಗಾರಿ ರೂ. 100.00 ಲಕ್ಷ
 • ಕೆಂಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಳ್ತೂರು ಗ್ರಾಮದ ಕೆಳಚಾಪಳ ಜೆಡ್ಡು ರಸ್ತೆ ಕಾಮಗಾರಿ ರೂ 20.00 ಲಕ್ಷ
 • ಕುದಿ ಗ್ರಾಮದ ಕೋಟಂಬೈಲು ಅಣ್ಣು ನಾಯ್ಕರ ಮನೆಯಿಂದ ಗಣಪ ನಾಯ್ಕರ ಮನೆ ತನಕದ ರಸ್ತೆ ಕಾಮಗಾರಿ ರೂ. 20.00 ಲಕ್ಷ
 • ಹಾವಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ಮಾಡಿಯ ಸುಬ್ರಹ್ಮಣ್ಯ ಮತ್ತು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬಳಿ ಮಡಿ ಸಾಲು ಹೊಳೆ ದಂಡೆಗೆ ತಡೆ ಗೋಡೆ ನಿರ್ಮಾಣ ಕಾಮಗಾರಿ ರೂ. 50.00 ಲಕ್ಷ
 • ಜಾತಬೆಟ್ಟು ಶಾಲೆಯಿಂದ ಪಿಳ್ಕಳ ಗರಡಿ ಮುಖಾಂತರ ಉಗ್ಗೆಲ್ ಬೆಟ್ಟು ಗರಡಿ ಸಂಪರ್ಕ ರಸ್ತೆ ಕಾಮಗಾರಿ
  ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನಡುಬೆಟ್ಟು ರೊನಿ ಅವರ ಮನೆಯಿಂದ ಮ್ಯಾಕ್ಸಿ ಡಿ ಸೋಜ ರವರ ಮನೆವರೆಗಿನ ರಸ್ತೆ ಕಾಮಗಾರಿ ರೂ. 40.00 ಲಕ್ಷ

Spread the love