ರೇಣುಕಾಚಾರ್ಯ ಮತ್ತು ನನ್ನ ನಡುವೆ ಯಾವುದೇ ಗಲಾಟೆ ನಡೆದಿಲ್ಲ ; ಸಚಿವ ಖಾದರ್ ಸ್ಪಷ್ಟನೆ

Spread the love

ರೇಣುಕಾಚಾರ್ಯ ಮತ್ತು ನನ್ನ ನಡುವೆ ಯಾವುದೇ ಗಲಾಟೆ ನಡೆದಿಲ್ಲ ; ಸಚಿವ ಖಾದರ್ ಸ್ಪಷ್ಟನೆ

ಬೆಂಗಳೂರು: ದೃಶ್ಯ ಮಾಧ್ಯಮಗಳಲ್ಲಿ ಯು.ಟಿ.ಖಾದರ್ ಹಾಗೂ ರೇಣುಕಾಚಾರ್ಯರ ಮದ್ಯೆ ಜಟಾಪಚಿ ನಡೆದುದಾಗಿ ಸುದ್ದಿ ಬರುತ್ತಿದ್ದು,ಈ ಬಗ್ಗೆ ಸಚಿವ ಯು.ಟಿ.ಖಾದರ್ ವಿಧಾನ ಸೌಧದ ಮುಂದೆ   ಸ್ಪಷ್ಟಣೆ ನೀಡಿದ್ದಾರೆ.

ವಿಧಾನ ಸೌಧದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ತಿಳಿಯಲು ನಾನು  ವಿಧಾನ ಸೌಧ ಪ್ರವೇಶಿಸುವ ಸಂದರ್ಭದಲ್ಲಿ ವಿಧಾನ ಸೌದಧ ಮೆಟ್ಟಿಲುಗಳಲ್ಲಿ ರೇಣುಕಾಚಾರ್ಯ ಹಾಗೂ ಇತರರು ಸೇರಿ ಅಡ್ಡ ಹಾಕಿ ಸಚಿವರು ಹಾಗೂ ನಮ್ಮ ಪಕ್ಷದ ಮುಖಂಡರಿಗೆ ಧಿಕ್ಕಾರ ಕೂಗುತ್ತಿದ್ದ ಸಂದರ್ಭದಲ್ಲಿ ನನ್ನ ಹಾಗೂ ರೇಣುಕಾಚಾರ್ಯ ಮದ್ಯೆ ಮಾತಿಗೆ ಮಾತು ನಡೆದಿದಿಯೇ ಹೊರತು ಯಾವುದೇ ರೀತಿಯ ಜಟಾಪಟಿ ಅಥವಾ ಗಲಾಟೆ ನಡೆದಿಲ್ಲ  ಎಂಬುದಾಗಿ ಸಚಿವ ಯು.ಟಿ.ಖಾದರ್ ಸ್ಪಷ್ಟೀಕರಣ ನೀಡಿದ್ದಾರೆ.


Spread the love