ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪೆರ್ಣಂಕಿಲ ಗ್ರಾಪಂ ನೌಕರ

Spread the love

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪೆರ್ಣಂಕಿಲ ಗ್ರಾಪಂ ನೌಕರ

ಉಡುಪಿ: ಲಂಚ ಸ್ವೀಕರಿಸುತ್ತಿದ್ದ ವೇಳೆ ಗ್ರಾಮ ಪಂಚಾಯತ್ ನೌಕರನೋರ್ವ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಘಟನೆ ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮ ದಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯ ಪೆರ್ಣಂಕಿಲ ಗ್ರಾಮದ ನಿವಾಸಿಯೊಬ್ಬರು ಪೆರ್ಣ೦ಕಿಲ ಗ್ರಾಮದ ಸರ್ವೆ ನಂ 171/1 ರಲ್ಲಿ 1.15 ಎಕ್ರೆ ಸ್ಥಳ ಜಮೀನನ್ನು ಸಕ್ರಮ ಮಾಡಿಕೊಡುವುದಕ್ಕಾಗಿ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಗೆ ಸಂಬಂಧಪಟ್ಟಂತ ಪೆರ್ಣಂಕಿಲ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಶ್ರೀ ಹರೀಶ್ ಎನ್.ಪಿ ರವರು ಪಿರ್ಯಾದುದಾರರಿಗೆ ಜಮೀನು ಸಕ್ರಮ ಮಾಡಿಕೊಡುವುದಕ್ಕಾಗಿ ರೂ 10,000/- ಲಂಚದ ಬೇಡಿಕೆಯಿಟ್ಟಿರುವ ಬಗ್ಗೆ ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆ ಅ.ಕ್ರ 04/2022 ಕಲಂ 7(ಎ) ಭ್ರಷ್ಟಾಚಾರ ಪ್ರತಿಬಂಧ ಕಾಯ್ದೆ 1988, ತಿದ್ದುಪಡಿ ಕಾಯ್ದೆ 2018 ರಂತೆ ಪ್ರಕರಣ ದಾಖಲಾಗಿರುತ್ತದೆ.

ಈ ದಿನ ದಿನಾಂಕ:20-12-2022 ರಂದು ಲಕ್ಷ್ಮೀ ಗಣೇಶ್ ಕೆ. ಪೊಲೀಸ್ ಅಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಮಂಗಳೂರು ರವರ ಮಾರ್ಗದರ್ಶನದಲ್ಲಿ ಉಡುಪಿ ಲೋಕಾಯುಕ್ತ ಠಾಣಾ ಪ್ರಚಾರ ಪೊಲೀಸ್ ಉಪಾಧೀಕ್ಷಕರರಾದ ಶ್ರೀ ಜಯರಾಮ.ಡಿ ಗೌಡ ರವರ ನೇತೃತ್ವದಲ್ಲಿ ಮತ್ತು ಶ್ರೀಮತಿ ಕಲಾವತಿಕೆ, ಪೊಲೀಸ್ ಉಪಾಧೀಕ್ಷಕರ ಸಹಭಾಗಿತ್ವದಲ್ಲಿ ಹಾಗೂ ಸಿಬ್ಬಂದಿಗಳ ಜೊತೆ ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡಿದ್ದು, ಆರೋಪಿತ ಸರ್ಕಾರಿ ನೌಕರರಾದ ಹರೀಶ ಎನ್.ಪಿ, ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಉಡುಪಿ ಜಿಲ್ಲೆ ರವರು ಪಿರಾದುದಾರರಿಂದ ರೂ. 10,000/- ಲಂಚದ ಹಣವನ್ನು ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಸ್ಥಳದಲ್ಲಿಯೇ (ರೆಡ್ ಹ್ಯಾಂಡ್ ) ಸಿಕ್ಕಿಬಿದ್ದಿರುತ್ತಾರೆ. ಸದರಿ ಆರೋಪಿತರನ್ನು ದಸ್ತಗಿರಿ ಮಾಡಿ, ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.


Spread the love