ಲಯನ್ ಎ ಭೋಜ ಕರ್ಕೇರ (78) ನಾಗೂರಿ ನಿಧನ

Spread the love

ಲಯನ್ ಎ ಭೋಜ ಕರ್ಕೇರ (78) ವ ಇವರು 16-01-2016  ರಂದು ಅಲ್ಪಕಾಲದ ಅಸ್ವಾಸ್ಥ್ಯದಿಂದ ನಾಗೂರಿಯ ತಮ್ಮ ಸ್ವಗೃಹದಲ್ಲಿ ನಿಧನರಾದರು.

a

ಇವರು ಲಯನ್ಸ್ ಕ್ಲಬ್ ಮಂಗಳಾದೇವಿಯ ಮಾಜಿ ಅಧ್ಯಕ್ಷರಾಗಿ, ಕಂಕನಾಡಿ ಬ್ರಹ್ಮ ಬೈದರ್ಕಳ ಕ್ಷೇತ್ರದ ಮೇನೇಜರ್ ಆಗಿ, ಆದರ್ಶ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿಯಾಗಿ, ಶ್ರೀ ಗೋಕರ್ಣನಾಥೇಶ್ವರ ಕೋ ಒಪರೇಟಿವ್ ಬ್ಯಾಂಕಿನ ನಿರ್ದೇಶಕರಾಗಿ, ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಮೊಕ್ತೇಸರರಾಗಿ, ಕಂಕನಾಡಿ ಯುವಕ ವೃಂದದ ಪದಾಧಿಕಾರಿಯಾಗಿ, ಅಳಪೆ ಬ್ಲಾಕ್ ಕಾಂಗ್ರೆಸ್ಸ್ ಇದರ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.

ಶ್ರೀಯುತರು ತಮ್ಮ ಕಣ್ಣುಗಳನ್ನು ಲಯನ್ಸ್ ಸಂಸ್ಥೆಯ ಮುಖಾಂತರ ಫಾದರ್ ಮುಲ್ಲರ್ ಕಣ್ಣಿನ ಬ್ಯಾಂಕಿಗೆ ದಾನ ಮಾಡಿದ್ದಾರೆ.  ಇವರು ತಮ್ಮ ಪತ್ನಿ ಹಾಗೂ ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.


Spread the love