ಲಾಕ್ ಡೌನ್; ನಗರಸಭಾ ಸದಸ್ಯ ರಮೇಶ್ ಕಾಂಚನ್ ರಿಂದ ಬಡವರಿಗೆ 150 ತರಕಾರಿ ಕಿಟ್ ವಿತರಣೆ

Spread the love

ಲಾಕ್ ಡೌನ್; ನಗರಸಭಾ ಸದಸ್ಯ ರಮೇಶ್ ಕಾಂಚನ್ ರಿಂದ ಬಡವರಿಗೆ 150 ತರಕಾರಿ ಕಿಟ್ ವಿತರಣೆ

ಉಡುಪಿ: ಕೊರೊನಾ ಲಾಕ್ ಡೌನ್ನಿಂದಾಗಿ ಸಂಕಷ್ಟದಲ್ಲಿವರಿಗೆ 31ನೇ ಬೈಲೂರು ವಾರ್ಡಿನ ನಗರಸಭಾ ಸದಸ್ಯರಾದ ರಮೇಶ್ ಕಾಂಚನ್ರವರ ವಿಶೇಷ ಮುತುವರ್ಜಿಯಿಂದ ಸುಮಾರು 150 ತರಕಾರಿ ಕಿಟ್ಗಳನ್ನು ಭಾಗ್ಯಮಂದಿರ ಹಾಗೂ ವಾರ್ಡಿನ ಸ್ಥಳೀಯರಿಗೆ ವಿತರಿಸಲಾಯಿತು.

ಕಿಟ್ ಗಳಲ್ಲಿ ನೀರುಳ್ಳಿ, ಹಸಿಮೆಣಸು, ಟೊಮೆಟೋ, ಎಲೆಕೋಸು, ಆಲೂಗಡ್ಡೆ ಸೇರಿದಂತೆ ಹಲವಾರು ರೀತಿಯ ತರಕಾರಿಗಳನ್ನು ಒಳಗೊಂಡಿತ್ತು.

ಈಗಾಗಲೇ ಅಗತ್ಯವಿರುವ ಕುಟಂಬಗಳಿಗೆ ರೇಷನ್ ಕಿಟ್, ಔಷದಿಗಳನ್ನು ವಿವಿಧ ಕುಟುಂಬಗಳಿಗೆ ರಮೇಶ್ ಕಾಂಚನ್ ತಮ್ಮ ಸ್ವಂತ ಹಣ ಹಾಗೂ ದಾನಿಗಳ ಸಹಕಾರದಿಂದ ವಿತರಣೆ ಮಾಡಿದ್ದಾರೆ.

ಚಿಟ್ಪಾಡಿ ಶ್ರೀನಿವಾಸ ದೇವಸ್ಥಾನದ ಮೊಕೆಸ್ಥರಾದ ಡಾ.ಸಿ ಗೋಪಾಲಕೃಷ್ಣ ಬಲ್ಲಾಳ್, ಉದ್ಯಮಿ ದಿನೇಶ್ ಪುತ್ರನ್ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ, ಭಾಗ್ಯಮಂದಿರ ಚಿಟ್ಪಾಡಿ ಇದರ ಸಮಿತಿಯ ಗೌರವಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.


Spread the love