ಲಾಕ್ ಡೌನ್ ನಡುವೆಯೇ ಇಸ್ಪೀಟ್ ಜುಗಾರಿ ಆಟ: ಪುಂಜಾಲಕಟ್ಟೆಯಲ್ಲಿ 6 ಮಂದಿ ಬಂಧನ

Spread the love

ಲಾಕ್ ಡೌನ್ ನಡುವೆಯೇ ಇಸ್ಪೀಟ್ ಜುಗಾರಿ ಆಟ: ಪುಂಜಾಲಕಟ್ಟೆಯಲ್ಲಿ 6 ಮಂದಿ ಬಂಧನ

ಮಂಗಳೂರು: ಕೋವಿಡ್-19 ಕೊರೋನಾ ವೈರಸ್ ತಡೆಗಟ್ಟುವ ಹಿನ್ನೆಲೆ ಲಾಕ್ ಡೌನ್ ಆದೇಶವಿದ್ದರೂ ಕೂಡ ಅದನ್ನು ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪಿಟ್ ಜುಗಾರಿಯಲ್ಲಿ ನಿರತರಾಗಿದ್ದ 6 ಮಂದಿಯನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮುಸ್ತಫಾ ಅಲಿಯಾಸ್ ಮುನ್ನಾ (48), ಹೈದರ್ (37), ಅಬ್ದುಲ್ ನವಾಜ್ (40), ಜಾನ್ ಮೊರಾಸ್ (44), ಶಬ್ಬೀರ್ (26), ಮತ್ತು     ಲೋಕೇಶ್ (48). ಎಂದು ಗುರುತಿಸಲಾಗಿದೆ.

ಬಂಧಿತರು ಬಂಟ್ವಾಳ ತಾಲ್ಲೂಕು ತೆಂಕ ಕಜೆಕಾರು ಗ್ರಾಮದ ಪೈರು ಎಂಬಲ್ಲಿ ಆರೋಪಿಗಳು ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮೇಲಾಧಿಕಾರಿಗಳ ಆದೇಶದಂತೆ ನ್ಯಾಯಾಲಯದ ಆದೇಶ ಪಡೆದು ಇತರ ಅಧಿಕಾರಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿ ಜುಗಾರಿ ಆಡುತ್ತಿದ್ದ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಆಟಕ್ಕೆ ಉಪಯೋಗಿಸೀದ ಸೊತ್ತುಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ಸ್ವಾಧೀನಪಡಿಸಿದ ಎಲ್ಲಾ ಸೊತ್ತುಗಳ ಅಂದಾಜು ಮೌಲ್ಯ 2,15,100 ರೂ ಆಗಬಹುದು.

ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love