ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಸುಧಾಕರ್ ಸ್ವಸ್ತಿಕ್ ಪುನರಾಯ್ಕೆ

Spread the love

ಲಾರಿ ಮಾಲಕರ ಸಂಘದ ಅಧ್ಯಕ್ಷರಾಗಿ ಸುಧಾಕರ್ ಸ್ವಸ್ತಿಕ್ ಪುನರಾಯ್ಕೆ

ಕುಂದಾಪುರ: ಕುಂದಾಪುರ ತಾಲೂಕು ಲಾರಿ ಮಾಲಕರು ಹಾಗೂ ಟ್ರಾನ್ಸ್ಪೋರ್ಟ್ ಮಾಲಕರ ಸಂಘದ ಅಧ್ಯಕ್ಷರಾಗಿ ಸುಧಾಕರ್ ಸ್ವಸ್ತಿಕ್ ಪುನರಾಯ್ಕೆಗೊಂಡಿದ್ದಾರೆ.

ಭಾನುವಾರ ಕುಂದಾಪುರದ ಲಾರಿ ಮಾಲಕರ ಸಂಘದ ಕಚೇರಿಯಲ್ಲಿ ಜರುಗಿದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸುಧಾಕರ ಸ್ವಸ್ತಿಕ್ ಅವರನ್ನು ಎರಡನೆ ಅವಧಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಾರ್ಯದರ್ಶಿಯಾಗಿ ಅನಿಲ್‌ ಡಿ.ಎಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಈ ವೇಳೆ ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಕಾವೇರಿ ಮತ್ತಿತರರು ಇದ್ದರು.


Spread the love