ಲೇಡಿಹಿಲ್ ಪರಿಸರದಲ್ಲಿ ರಾಮಕೃಷ್ಣ ಮಿಷನ್ನಿನಿಂದ ಮುಂದುವರೆದ 16ನೇ ಸ್ವಚ್ಚತಾ ಅಭಿಯಾನ

Spread the love

ಮಂಗಳೂರು: ರಾಮಕೃಷ್ಣ ಮಿಷನ್ ಮೇ 17ನೇ ತಾರೀಕು ಭಾನುವಾರ ಮಂಗಳೂರಿನ ಲೇಡಿಹಿಲ್ ಪರಿಸರದಲ್ಲಿ 16ನೇ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಆಶ್ರಮದ ವತಿಯಿಂದ ಸುಮಾರು 60 ಜನ ಸ್ವಯಂಸೇವಕರು ಇದರಲ್ಲಿ ಭಾಗಿಯಾಗಿದ್ದರು.

road

ಇದರ ಮುಂದುವರೆದ ಅಂಗವಾಗಿ ಇಂದು ಲೇಡಿಹಿಲ್ ಬಸ್ ನಿಲ್ದಾಣವನ್ನು ಜೋಡಿಸುವ ಪಾದಚಾರಿ ರಸ್ತೆಯನ್ನು ಇಂಟರ್‍ಲಾಕ್ ಟೈಲ್ಸ್ ಗಳನ್ನು ಬಳಸಿ ದುರಸ್ತಿಗೊಳಿಸಲಾಯಿತು. ಸುಮಾರು ಸಾವಿರಾರು ಜನರು ಪ್ರತಿನಿತ್ಯ ಬಳಸುವ ಈ ಪಾದಚಾರಿ ಮಾರ್ಗ ಹಲವು ವರ್ಷಗಳಿಂದ ದುರಸ್ತಿಯನ್ನು ಕಾಣದೆ ಪಾದಚಾರಿಗಳಿಗೆ ಅನಾನುಕೂಲವಾಗುತ್ತಿತ್ತು. ಇದನ್ನರಿತ ರಾಮಕೃಷ್ಣ ಮಿಷನ್ ತನ್ನ ಸ್ವಯಂಸೇವಕರ ಮೂಲಕ ಈ ಮಾರ್ಗವನ್ನು ದುರಸ್ತಿಗೊಳಿಸಿ ಪಾದಚಾರಿಗಳಿಗೆ ಅನುಕೂಲಮಾಡಿಕೊಟ್ಟಿದೆ.


Spread the love