ವಂ| ಡೊ| ಚಾಲ್ರ್ಸ್ ವಾಸ್, ಎಸ್.ವಿ.ಡಿ.ರವರ “ಪ್ರೀತಿಯನಾದ” -ಪ್ರೇಮ್-ರಾಗಿಣಿ 

Spread the love

ವಂ| ಡೊ| ಚಾಲ್ರ್ಸ್ ವಾಸ್, ಎಸ್.ವಿ.ಡಿ.ರವರ “ಪ್ರೀತಿಯನಾದ” -ಪ್ರೇಮ್-ರಾಗಿಣಿ 

ಮಂಗಳೂರು: “ಪ್ರೀತಿಯ ನಾದ” (ಪ್ರೇಮ್‍ರಾಗಿಣಿ) ಬೈಬಲ್ ಮೇಲೆ ಆಧಾರಿತ ಸಂಗೀತ ನೃತ್ಯ ಕಾರ್ಯಕ್ರಮವು, “ಸಂಗೀತಕನಸುಗಾರ”; “ನೃತ್ಯ ಮಿಶನರಿ”; “ಭಜನ್‍ ಕ್ರೈಸ್ತ ಧರ್ಮಗುರು” ಎಂದು ಪ್ರಖ್ಯಾತರಾದ ವಂ| ಡೊ| ಚಾಲ್ರ್ಸ್ ವಾಸ್‍ ಇವರ ನಿರ್ದೇಶನದಲ್ಲಿ ಮೇರಮಜಲು ಪವಿತ್ರಕುಟಂಬ ದೇವಾಲಯದ ಆವರಣದಲ್ಲಿ ಇದೇ ಮಾರ್ಚ್ 16ರಂದು ಜರಗಿತು.

ಮುಂಬೈಯ “ಸಂಗೀತಆಭಿನಯಅಕಾದೆಮಿಯ” ಸುಮಾರು 50ಕ್ಕಿಂತ ಅಧಿಕಕಲಾವಿದರಿಂದ “ಪ್ರೇಮ್‍ರಾಗಿಣಿ”ಯ ಭಕ್ತಿರಸದಿಂದಕೂಡಿದ ಸಂಗೀತ ನೃತ್ಯಕಾರ್ಯಕ್ರಮವು ಹಾಜರಿದ್ದ ಸಾವಿರಕ್ಕಿಂತಲೂಅಧಿಕ ಪ್ರೇಕ್ಷಕವೃಂದರವರನ್ನು ಮಂತ್ರಮುಗ್ದರಾಗಿಸಿತು.

ವಂ| ಡೊ| ಚಾಲ್ರ್ಸ್ ವಾಸ್‍ರವರ ಹುಟ್ಟೂರಾದ ಮೇರಮಜಲಿನಲ್ಲಿಅವರ ಮೊದಲ ಕಾರ್ಯಕ್ರಮಇದಾಗಿರುತ್ತದೆ.ಪ್ರಪಂಚದ ಮೂಲೆ ಮೂಲೆಯಲ್ಲಿ 500ಕ್ಕೂ ಅಧಿಕಕಾರ್ಯಕ್ರಮವನ್ನುಅವರು ನೀಡಿರುತ್ತಾರೆ.50ಕ್ಕೂ ಅಧಿಕ ಸಂಗೀತಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿ ಹಲವು ಬಿರುದುಗಳನ್ನು ಪಡೆದಿದ್ದಾರೆ. 1983ರಲ್ಲಿ ಅಖಿಲ ಭಾರತೀಯಗಂಧರ್ವ ಮಹಾವಿದ್ಯಾಲಯದಿಂದಡೊಕ್ಟರೇಟ್ ಪದವಿ; 2006ರಲ್ಲಿ “ಅಲಂಕಾರ್ ಶಿರೊಮನಿ” ಪುರಾಸ್ಕರ, 2008 ಇಸವಿಯಲ್ಲಿ “ಕಲಾಕರ್ ಪುರಸ್ಕಾರ್”; ಹೀಗೆ ಹಲವಾರು ಪ್ರಶಸ್ತಿ ವಿಜೇತರಾದ ಸ್ಥಳೀಯ ಪ್ರತಿಭೆ ವಂ| ಡೊ| ಚಾಲ್ರ್ಸ್ ವಾಸ್‍ರವರನ್ನು ಈ ಸಮಯದಲ್ಲಿ ಮಂಗಳೂರು ಡಯಸಿಸ್‍ನ ವಿಗಾರ್‍ಜನರಲ್‍ಅತೀ ವಂ| ಮೊ| ಮೆಕ್ಷಿಮ್ ನೊರೊನ್ಹಾರವರು ಸನ್ಮಾನಿಸಿದರು.

 ಇಗರ್ಜಿಯ ಧರ್ಮಗುರು ವಂ| ಒಲ್ವಿನ್‍ಡಿ’ಕುನ್ಹಾರವರು ಸ್ವಾಗತಿಸಿ ಪಾಸ್ಟರಲ್‍ ಕೌನ್ಸಿಲ ಇದರ ಕಾರ್ಯದರ್ಶಿ  ಒಸ್ವಾಲ್ಡ್ ಡಿ’ ಸೋಜಾ ವಂದಿಸಿದರು.ಉಪಾಧ್ಯಕ್ಷ   ಪ್ಯಾಟ್ರಿಕ್ ಪಿಂಟೊರವರು ಸನ್ಮಾನ ಪತ್ರ ವಾಚಿಸಿದರು.ಈ ಕಾರ್ಯಕ್ರಮವು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೊಸ್ಕರ ಹಮ್ಮಿಗೊಳ್ಳಲಾಗಿತ್ತು.


Spread the love