ವಾಜಪೇಯಿ ಜನ್ಮದಿನ; ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಹಣ್ಣು, ಅಕ್ಕಿ ವಿತರಣೆ

Spread the love

ವಾಜಪೇಯಿ ಜನ್ಮದಿನ; ಜಿಲ್ಲಾ ಬಿಜೆಪಿ ಯುವ ಮೋರ್ಚಾದಿಂದ ಹಣ್ಣು, ಅಕ್ಕಿ ವಿತರಣೆ

ಉಡುಪಿ: ಈ ದೇಶ ಕಂಡಂತಹ ಶ್ರೇಷ್ಠ ಪ್ರಧಾನಿ, ಅಜಾತ ಶತ್ರು, ಅಪ್ರತಿಮ ವಾಗ್ಮಿ, ಕವಿ ಹೃದಯದ ಮಾಜಿ ಪ್ರಧಾನಿ ಭಾರತರತ್ನ   ಅಟಲ್ ಬಿಹಾರಿ ವಾಜಪೇಯಿಯವರ 94ನೇ ಜನ್ಮ ದಿನದ ಪ್ರಯುಕ್ತ  ಜಿಲ್ಲಾ ಯುವ ಮೋರ್ಚಾ ವತಿಯಿಂದ  ಜಿಲ್ಲಾ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ  ಹಾಗೂ ಅಂಬಲಪಾಡಿ ಬೆಳಕು ವೃದ್ಧಾಶ್ರಮಕ್ಕೆ ಹಣ್ಣು ಹಂಪಲು ವಿತರಿಸಲಾಯಿತು ಮತ್ತು ನೇಜಾರು ಸ್ಪಂದನ ವಿಶೇಷ ಚೇತನ ಮಕ್ಕಳ ಶಾಲೆ ಗೆ ಅಕ್ಕಿ, ದಾನ್ಯ ವಿತರಿಸಲಾಯಿತು.

ಬಿಜೆಪಿ ಜಿಲ್ಲಾದ್ಯಕ್ಷರಾದ ಮಟ್ಟಾರ್ ರತ್ನಾಕರ್ ಹೆಗ್ಡೆ, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಶ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುಯಿಲಾಡಿ ಸುರೇಶ ನಾಯಕ್, ಯಶಪಾಲ್ ಸುವರ್ಣ,  ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ  ಪ್ರತಾಪ್ ಶೆಟ್ಟಿ ಚೇರ್ಕಾಡಿ, ಗಿರೀಶ್ ಅಂಚನ್, ಉಪಾಧ್ಯಕ್ಷ ಹರೀಶ್ ಪೂಜಾರಿ ಪರ್ಕಳ, ಉಡುಪಿ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ನಗರ ಬಿಜೆಪಿ  ಯುವ ಮೋರ್ಚಾ ಕಾರ್ಯದರ್ಶಿ ರೋಷನ್ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.


Spread the love