ವಾರಾಹಿ ನೀರಾವರಿ ಯೋಜನೆ 2018ಕ್ಕೆ ಪೂರ್ಣ: ಜಲಸಂಪನ್ಮೂಲ ಮಂತ್ರಿ: ಎಂ.ಬಿ.ಪಾಟೀಲ

Spread the love

ವಾರಾಹಿ ನೀರಾವರಿ ಯೋಜನೆ 2018ಕ್ಕೆ ಪೂರ್ಣ: ಜಲಸಂಪನ್ಮೂಲ ಮಂತ್ರಿ: ಎಂ.ಬಿ.ಪಾಟೀಲ

ಬೆಳಗಾವಿ : ವಾರಾಹಿ ನೀರಾವರಿ ಯೋಜನೆಯ ಎಡದಂಡೆ ಕಾಮಗಾರಿಯನ್ನು 2017-18ಕ್ಕೆ ಪೂರ್ಣಗೊಳಿಸಲು ಯೋಜಿಸಲಾಗಿದೆ. 15702 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ 10,987 ಹೆಕ್ಟೇರ್ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ. ಬಿ. ಪಾಟೀಲ ಅವರು ಹೇಳಿದರು.

session-belagavi

ವಿಧಾನ ಪರಿಷತ್ತಿನಲ್ಲಿ ಶಾಸಕ ಕೆ.ಪ್ರತಾಪ ಚಂದ್ರಶೆಟ್ಟಿ ಅವರ ಪರವಾಗಿ ಐವಾನ್ ಡಿಸೋಜಾ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ಮಾಹಿತಿ ನೀಡಿದರು. ಈ ಸರ್ಕಾರದ ಅಸ್ತಿತ್ವಕ್ಕೆ ಬಂದ ನಂತರ ವಾರಾಹಿ ನೀರಾವರಿ ಯೋಜನೆಗೆ ವಿವಿಧ ಲೆಕ್ಕ ಶೀರ್ಷಿಕೆಯಡಿಯಲ್ಲಿ 251.48 ಕೋಟಿ ರೂಪಾಯಿಗಳನ್ನು ನೀಡಲಾಗಿದೆ. ಇದರಲ್ಲಿ 228.35 ಕೋಟಿ ರೂಪಾಯಿಗಳು ವೆಚ್ಚವಾಗಿದೆ.

ವಾರಾಹಿ ನೀರಾವರಿ ಯೋಜನೆಯ ಡೈವರ್ಶನ್ ವಿಯರ್, ಬಲದಂಡೆ ಸಾಮಾನ್ಯ ಕಾಲುವೆ ಸರಪಳಿ 18.725 ಕಿ.ಮೀ ಹಾಗೂ ಎಡದಂಡೆ ಕಾಲುವೆ ಸರಪಳಿ 30 ಕಿ.ಮೀ ವರೆಗೆ ಮತ್ತು ಅದರ ವಿತರಣಾ ನಾಲೆಗಳನ್ನು ಸಂಪರ್ಕಿಸುವ ಮೇಲಗಾಲುವೆ ಕಾಮಗಾರಿ ಪೂರ್ಣಗೊಂಡಿದೆ. 10-01-2016 ರಿಂದ ಬೇಸಿಗೆ ಹಂಗಾಮಿಗೆ ಸುಮಾರು 3372ಹೆ. ಭೂಮಿಗೆ ನೀರು ಹರಿಸಲಾಗಿದೆ ಈ ಯೋಜನೆಗೆ ಈಗಾಗಲೇ 689.92 ಕೋಟಿ ರೂ.ಗಳು ವೆಚ್ಚವಾಗಿದೆ.

ವಾರಾಹಿ ಬಲದಂಡೆ ಕಾಲುವೆ ಮತ್ತು ಲಿಫ್ಟ್ ಕಾಲುವೆಗಳ ಸರ್ವೆ ಸಮೀಕ್ಷೆ ಹಾಗೂ ಅಂದಾಜು ತಯಾರಿಸಲು ಕ್ರಮ ಜರುಗಿಸಲಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.


Spread the love