ವಿಚಾರವಾದಿ ನರೇಂದ್ರ ನಾಯಕ್‌ ಮೇಲೆ ಹತ್ಯೆ ಯತ್ನ

Spread the love

ವಿಚಾರವಾದಿ ನರೇಂದ್ರ ನಾಯಕ್‌ ಮೇಲೆ ಹತ್ಯೆ ಯತ್ನ

ಮಂಗಳೂರು: ಮಂಗಳೂರಿನಲ್ಲಿ ವಿಚಾರವಾದಿ ನರೇಂದ್ರ ನಾಯಕ್‌ ಅವರ ಮೇಲೆ ಹತ್ಯೆ ಯತ್ನ ನಡೆದಿದೆ ಎನ್ನಲಾಗಿದೆ.

ಬುಧವಾರ ಬೆಳಿಗ್ಗೆ ಗನ್‌ಮನ್‌ ಜತೆಯಲ್ಲಿ ಇಲ್ಲದ ವೇಳೆ ಇಬ್ಬರು ಅಪರಿಚಿತರು ತಮ್ಮ ಮೇಲೆ ದಾಳಿಗೆ ಯತ್ನಿಸಿದ್ದಾರೆ ಎಂದು ನರೇಂದ್ರ ನಾಯಕ್‌ ಹೇಳಿದ್ದಾರೆ.

‘ನಾನು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಬುಲೆಟ್‌ ಬೈಕ್‌ನಲ್ಲಿ ಬಂದ ಇಬ್ಬರು ಕಾರಿನ ಟಯರ್‌ ಪಂಕ್ಚರ್‌ ಆಗಿದೆ ಎಂದು ಹೇಳಿದರು. ಆದರೆ, ನನ್ನ ಕಾರು ಪಂಕ್ಚರ್‌ ಆಗಿಲ್ಲ ಎಂಬುದು ಅರಿವಿಗೆ ಬಂದಿತ್ತು. ನನ್ನ ಮೇಲೆ ದಾಳಿ ನಡೆಸಲು ಅವರು ಸಂಚು ರೂಪಿಸಿರಬಹುದು ಎಂಬ ಅನುಮಾನ ಮೂಡಿತು. ಹೀಗಾಗಿ ನಾನು ಕಾರು ನಿಲ್ಲಿಸಲಿಲ್ಲ’ ಎಂದು ನರೇಂದ್ರ ನಾಯಕ್‌ ತಿಳಿಸಿದ್ದಾರೆ.

‘ವಿನಾಯಕ ಬಾಳಿಗಾ ಅವರನ್ನೂ ಹೀಗೆಯೇ ವಿಳಾಸ ಕೇಳುವ ನೆಪದಲ್ಲಿ ನಿಲ್ಲಿಸಿ ಹತ್ಯೆ ನಡೆಸಿದ್ದರು. ಈ ಅಪರಿಚಿತರು ನನ್ನ ಮೇಲೂ ಅದೇ ರೀತಿ ದಾಳಿ ನಡೆಸಬಹುದು ಎಂಬ ಅಪಾಯದ ಮುನ್ಸೂಚನೆ ಅರಿತು ನಾನು ಕಾರನ್ನು ನಿಲ್ಲಿಸದೆ ಅಲ್ಲಿಂದ ವೇಗವಾಗಿ ಹೊರಟೆ. ನನ್ನ ಮೇಲೆ ದಾಳಿ ನಡೆಸಲು ಶಿವ ಎಂಬಾತನ ತಂಡ ಸಂಚು ರೂಪಿಸಿದೆ. ಈ ಬಗ್ಗೆ ಮಂಗಳೂರು ಪೊಲೀಸ್‌ ಕಮಿಷನರ್‌ ಅವರಿಗೆ ದೂರು ನೀಡಿದ್ದೇನೆ’ ಎಂದು ಅವರು ಹೇಳಿದ್ದಾರೆ.


Spread the love