ವಿಟ್ಲ ಠಾಣಾ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

Spread the love

ವಿಟ್ಲ ಠಾಣಾ ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಸೆರೆ

ಬಂಟ್ವಾಳ: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿಟ್ಲ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ವ್ಯಕ್ತಿಗಳನ್ನು ಬಂಟ್ವಾಳ ಕನ್ಯಾನ ನಿವಾಸಿ ಖಲಂದರ್ (22), ಉತ್ತರಪ್ರದೇಶ ರಾಜ್ಯದ ಅರ್ಮಾನ್ (25) ಎಂದು ಗುರುತಿಸಲಾಗಿದೆ.

ganja-pedlars-arrested-20161230

ಬಂಟ್ವಾಳ ತಾಲ್ಲೂಕಿನಲ್ಲಿ ವ್ಯಾಪಕವಾಗಿ ಗಾಂಜಾ ಮಾರಾಟವಾಗುತ್ತಿದೆ ಎಂಬ ದೂರಿನಂತೆ ಬಂಟ್ವಾಳ ಉಪ ವಿಭಾಗದ ವತಿಯಿಂದ ಈ ಗಾಂಜಾ ಮಾರಾಟವನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಸ್ಪಿಯವರ ಆದೇಶದಂತೆ ಬಂಟ್ವಾಳ ಡಿ ವೈ ಎಸ್ಪಿ ರವೀಶ್ ಸಿ ಆರ್ ರವರ ನೇತೃತ್ವದಲ್ಲಿ ಒಂದು ತಂಡ ರಚಿಸಿದ್ದು, ಡಿಸೆಂಬರ್ 30 ರಂದು ಬಂಟ್ವಾಳ ಉಪ ವಿಭಾಗದ ಡಿ ವೈ ಎಸ್ಪಿ ರವೀಶ್ ಸಿ ಆರ್ ಮತ್ತು ತಂಡದವರಿಗೆ ಬಂದ ಖಚಿತ ವರ್ತಮಾನದಂತೆ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಗಾಂಜಾವನ್ನು ಇಟ್ಟು ಕೊಂಡು ಮಾರಾಟ ಮಾಡುತ್ತಿದ್ದಾರೆಂಬ ವರ್ತಮಾನದಂತೆ ಡಿ ವೈ ಎಸ್ಪಿ ರವೀಶ್, ಸಿ ಪಿ ಐ ಮಂಜಯ್ಯ ಹಾಗೂ ವಿಟ್ಲ ಪಿ ಎಸ್ ಐ ನಾಗರಾಜು ರವರನ್ನು ಒಳಗೊಂಡ ತಂಡವನ್ನೊಂದನ್ನು ರಚಿಸಿ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿಂದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು ಅವರಲ್ಲಿದ್ದ ಬ್ಯಾಗೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 13 ಕೆಜಿ ತೂಕದ ಗಾಂಜಾ ಪೊಟ್ಟಣಗಳು ವಶಪಡಿಸಿಕೊಂಡಿದ್ದಾರೆ.

ganja-pedlars-arrested-20161230-1

ಬಂಧಿತರಿಂದ ಸುಮಾರು 1,50,000 ಮೌಲ್ಯದ ಗಾಂಜಾ ಹಾಗೂ ಸಾಗಾಟಕ್ಕೆ ಬಳಸಿದ ಒಂದು ಸ್ಕೂಟರ್ ನ್ನು ವಶಪಡಿಸಿಕೊಂಡಿದ್ದು ಸುಮಾರು ಒಟ್ಟು ಮೌಲ್ಯ 200000 ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಈ ಪತ್ತೆಯ ಕಾರ್ಯದಲ್ಲಿ ಎಸ್ಪಿಯವರ ಮಾರ್ಗದರ್ಶನದಲ್ಲಿ ಡಿ ವೈ ಎಸ್ ಪಿ ರವೀಶ್, ಸಿ ಆರ್, ಸಿ ಪಿ ಐ ಮಂಜಯ್ಯ, ವಿಟ್ಲ ಪಿ ಎಸ್ ಐ ನಾಗರಾಜು, ಎಎಸ್ಐ ರುಕ್ಮಯ್ಯ, ಎಚ್ ಸಿ ಬಾಲಕೈಷ್ಣ, ಹರಿಶ್ಚಂದ್ರ, ರಾಮಚಂದ್ರ, ಸೀತರಾಮ ಗೌಡ, ಪಿಸಿ ಗಳಾದ ಪ್ರವೀಣ್ ರೈ, ಭವಿತ್ ರೈ, ಸತ್ಯ ಪ್ರಕಾಶ್ ರೈ, ಉದಯ್, ವಿಜಯೇಶ್ವರ್ ಮುಂತಾದ ಸಿಬ್ಬಂಧಿಗಳು ಭಾಗವಹಿಸದ್ದರು, ತಂಡದ ಕಾರ್ಯವನ್ನು ದಕ ಜಿಲ್ಲೆ ಎಸ್ಪಿ ಶ್ರೀ ಭೂಷಣ್ ಭೋರಸೆ ಮುಕ್ತ ಕಂಠದಿಂದ ಹೊಗಳಿದ್ದು ಈ ತಂಡಕ್ಕೆ ಬಹುಮಾನವನ್ನು ಘೋಷಿಸಿದ್ದಾರೆ


Spread the love