ವಿದ್ಯಾರ್ಥಿಗಳು ಅಂಕಗಳ ದಾಸರಾಗಬೇಡಿರಿ; ಅಶೋಕ್ ಕಾಮತ್

Spread the love

ವಿದ್ಯಾರ್ಥಿಗಳು ಅಂಕಗಳ ದಾಸರಾಗಬೇಡಿರಿ; ಅಶೋಕ್ ಕಾಮತ್

ಉಡುಪಿ: ಇಂದಿನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ವಿಶೇಷ ಶ್ರೇಣಿಯಲ್ಲಿ ಉತ್ತೀರ್ಣರಾಗುತ್ತಾರೆ. ಅಂಕ ಪಟ್ಟಿಯಲ್ಲಿ ಒಳ್ಳೆಯ ಅಂಕಗಳು ಕಾಣಸಿಗುತ್ತವೆ. ಆದರೆ ಈ ಉತ್ತಮ ಅಂಕಗಳು ಪಡೆದ ವಿದ್ಯಾರ್ಥಿಗಳು ಕಾರ್ಯರೂಪದಲ್ಲಿ ಸೋಲುತ್ತಾರೆ. ಹೆತ್ತವರು ಅಂಕಗಳಿಗೆ ಒತ್ತು ನೀಡುತ್ತಾರೆ. ಸಮಾಜದಲ್ಲಿ ಜವಬ್ದಾರಿಯುತ ನಾಗರಿಕನಾಗಲು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬೆಳಸಬೇಕು. ಅವರನ್ನು ಅಂಕಗಳ ದಾಸರನ್ನಾಗಿ ಮಾಡದೇ ಕಲಿತ ವಿದ್ಯೆ ನಿಜಜೀವನದಲ್ಲಿ ಅಳವಡಿಸಲು ಸಹಕಾರಿಯಾಗಬೇಕು ಎಂದು ಉಡುಪಿ ಜಿಲ್ಲಾ ಮಾಜಿ ಶಿಕ್ಷಣಾಧಿಕಾರಿ, ಶಿಕ್ಷಣ ತಜ್ಞ ಮಂಗಳೂರು ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕ ಅಶೋಕ್ ಕಾಮತ್ ಹೇಳಿದರು.

image001don-bosco-school-shirva-20160730 image002don-bosco-school-shirva-20160730 image003don-bosco-school-shirva-20160730

ಶಿರ್ವ ಡೊನ್ ಬೋಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಶಿಕ್ಷಕ-ರಕ್ಷಕ ಸಂವಾದ ಕಾರ್ಯಕ್ರಮದಲ್ಲಿ ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನೆಯ ಸವಾಲುಗಳ ಬಗ್ಗೆ ಪೆÇೀಷಕರಿಗೆ ಮನದಟ್ಟು ಮಾಡುತ್ತಾ ಹೇಳಿದರು.

ಶಿರ್ವ ಚರ್ಚಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜ ನಮ್ಮ ನಮ್ಮ ಕನಸುಗಳನ್ನು ಎಳೆಯರಲ್ಲಿ ಸಾಧಿಸಲು ಹೇಳುವುದು ಸಹಜ ಆದರೆ ಮಕ್ಕಳನ್ನು ನಮ್ಮ ಪ್ರತಿಷ್ಠೆಗೆ ಸ್ಪರ್ಧಾಳುಗಳಾಗಿ ಪರಿಗಣಿಸಬಾರದು ಎಂದು ಹೇಳಿದರು.

image004don-bosco-school-shirva-20160730 image005don-bosco-school-shirva-20160730 image006don-bosco-school-shirva-20160730

ಶಾಲಾ ಸಂಚಾಲಕ ರೆ|ಫಾ|ಸ್ಟ್ಯಾನೀ ತಾವ್ರೋ ಸಭೆಯ ಅಧ್ಯಕ್ಷ ಸ್ಥಾನ ವಹಿಸಿ ಶಾಲಾಭಿವೃದ್ದಿಯಲ್ಲಿ ಹೆತ್ತವರ ಸಹಕಾರಕ್ಕೆ ಶ್ಲಾಘಿಸಿದರು. ಕಳೆದ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಕ್ಕಾಗಿ ಅಭಿನಂದಿಸಿದರು.
ಶಾಲಾ ಪ್ರಾಂಶುಪಾಲ ಫಾ| ಮಹೇಶ್ ಡಿ’ಸೋಜ ಶಾಲಾ ಚಟುವಟಿಕೆಗಳ ಕಿರುನೋಟವನ್ನು ಸಭೆಯ ಮುಂದಿರಿಸಿ ಮಕ್ಕಳ ರಕ್ಷಣೆಯಲ್ಲಿ ಪೆÇೀಷಕರ ಪಾತ್ರದ ಬಗ್ಗೆ ವಿವರ ನೀಡಿದರು.
ಹೆತ್ತವರ ಪರವಾಗಿ ಶಿಕ್ಷಕ-ರಕ್ಷಕ ಸಂಘಕ್ಕೆ ಡಯಾನಾ ಸಲ್ಡಾನ್ನಾ, ರೊಬರ್ಟ್ ಪಿಂಟೋ, ಬಿ. ನರಸಿಂಹ ಭಟ್ ಆಯ್ಕೆಗೊಂಡರು. ಜೇನ್ ಮೆಂಡೋನ್ಸಾ, ಗ್ರೆಟ್ಟಾ ನೊರೊನ್ನಾ, ವಿಶ್ವನಾಥ್ ಉಪಸ್ಥಿತರಿದ್ದರು. ಸಿ|ಲೆತೀಶಿಯಾ ಪಾಯ್ಸ್ ಸ್ವಾಗತಿಸಿದರು. ಆಲ್ವಿನ್ ದಾಂತಿ ನಿರೂಪಿಸಿದರೆ ಜುಲಿಯೆಟ್ ಸೀಕ್ವೆರಾ ವಂದಿಸಿದರು.


Spread the love