ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ದುಷ್ಕರ್ಮಿಗಳು

ಪುತ್ತೂರು: ವಿದ್ಯಾರ್ಥಿನಿಯೋರ್ವಳನ್ನು ಪುಸಲಾಯಿಸಿ ಕರೆದುಕೊಂಡು ಹೋದ ನಾಲ್ವರು ವಿದ್ಯಾರ್ಥಿಗಳು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಕಿಡಿಗೇಡಿಗಳು ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ವಿಕೃತಿ ಮೆರೆದಿದ್ದಾರೆ.

ಈ ಬಗ್ಗೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದ್ದು, ಮೂವರು ದುಷ್ಕರ್ಮಿಗಳು ವಿದ್ಯಾರ್ಥಿನಿಯ ಅತ್ಯಾಚಾರಗೈದಿದ್ದು, ಇನ್ನೋರ್ವ ಚಿತ್ರೀಕರಣ ನಡೆಸಿದ್ದಾನೆ. ಈ ಕಿಡಿಗೇಡಿಗಳು ಪೆರ್ನೆ ಮತ್ತು ಉಪ್ಪಿನಂಗಡಿಯವರೆಂದು ತಿಳಿದು ಬಂದಿದೆ.

 ಘಟನೆ ಸಂಬಂಧ ಪೊಲೀಸರು ಐದು ಮಂದಿ ಆರೋಪಿಗಳಾದ ಪುತ್ತೂರು ಬಜತ್ತೂರು ನಿವಾಸಿ ಗುರುನಂದನ್ (19), ಪೆರ್ನೆ ಗ್ರಾಮದ ಪ್ರಜ್ವಲ್ ಬಿನ್ ನಾಗೇಶ್ ನಾಯ್ಕ (19), ಕಿಶನ್ ಬಿನ್ ಸದಾಶಿವ (19), ಸುನಿಲ್(19) ಮತ್ತು ಪ್ರಖ್ಯಾತ್ (19) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ಪುತ್ತೂರಿಗೆ ಆಗಮಿಸಿ ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಉಲ್ಲೇಖಿತ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಬಾರದು ಅಥವಾ ಉಲ್ಲೇಖಿತ ವೀಡಿಯೊಗಳನ್ನು ಅವರ ಫೋನ್ / ಕಂಪ್ಯೂಟರ್‌ಗಳಲ್ಲಿ ಉಳಿಸಬಾರದು ಎಂದು ನಾವು ಸಾರ್ವಜನಿಕರ ಸದಸ್ಯರನ್ನು ಕೋರುತ್ತೇವೆ, ಹಾಗೆ ಮಾಡುವುದು ಐಪಿಸಿಯ 354 ಸಿ ಮತ್ತು 66 ಇ, ಐಟಿ ಕಾಯ್ದೆಯ 66 ಎ ಮತ್ತು ವ್ಯಕ್ತಿಗಳು (ಗುಂಪು ನಿರ್ವಾಹಕರು ಸೇರಿದಂತೆ) ಅಡಿಯಲ್ಲಿ ಅಪರಾಧವಾಗಿದೆ ಹೇಳಿದ ವಿಭಾಗಗಳ ಅಡಿಯಲ್ಲಿ ಆರೋಪಿಯನ್ನಾಗಿ ಮಾಡಲಾಗುವುದು. ಎಂದವರು ಹೇಳಿದ್ದಾರೆ.