ವಿದ್ಯುತ್ ಕಂಬದಿಂದ ಬಿದ್ದು ಮೆಸ್ಕಾಂ ಕಾರ್ಮಿಕ ಸಾವು

Spread the love

ವಿದ್ಯುತ್ ಕಂಬದಿಂದ ಬಿದ್ದು ಮೆಸ್ಕಾಂ ಕಾರ್ಮಿಕ ಸಾವು

ಪುತ್ತೂರು: ವಿದ್ಯುತ್ ಕಂಬಕ್ಕೆ ಹತ್ತಿ ದುರಸ್ತಿ ಮಾಡುತ್ತಿದ್ದ ವೇಳೆಯಲ್ಲಿ ಕಂಬದ ಮೇಲಿನಿಂದ ಹಾದು ಹೋಗಿದ್ದ ಎಚ್ ಟಿ ಲೈನ್ ವಿದ್ಯುತ್ ತಂತಿ ಸ್ಪರ್ಷವಾಗಿ ಮೆಸ್ಕಾಂ ಕಾರ್ಮಿಕರೊಬ್ಬರು ಸ್ಥಳದಲ್ಲಿ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಸರ್ವೆ ಗ್ರಾಮದ ಸೊರಕೆ ಪರಂಟೋಲು ಎಂಬಲ್ಲಿ ಗುರುವಾರ ನಡೆದಿದೆ.

ಮೃತರನ್ನು ಬಾಗಲಕೋಟೆ ನಿವಾಸಿ ಶ್ರೀಶೈಲ (28) ಎಂದು ಗುರುತಿಸಲಾಗಿದೆ.

ಗುರುವಾರ ಮಧ್ಯಾಹ್ನ ವಿದ್ಯುತ್ ಕಂಬದ ಮೇಲೆ ದುರುಸ್ತಿ ಮಾಡುತ್ತಿದ್ದ ವೇಳೆಯಲ್ಲಿ ಕಂಬದ ಪಕ್ಕದಲ್ಲಿ ಹಾದುಹೋಗಿದ್ದ ಎಚ್ ಟಿ ಲೈನ್ ತಂತಿ ಸ್ಪರ್ಷಿಸಿ ವಿದ್ಯುತ್ ಶಾಕ್ ಹೊಡೆದು ಸಾವನಪ್ಪಿದ್ದಾರೆ. ಮೃತರು ಕಳೆದ ಒಂದು ವರ್ಷಗಳಿಂದ ಪುತ್ತೂರು ಮೆಸ್ಕಾಂ ವಿಭಾಗದಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.


Spread the love