ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

Spread the love

ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು

ಕೆ.ಆರ್.ಪೇಟೆ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ತಾಲೂಕಿನ ಕತ್ತರಘಟ್ಟ ಗ್ರಾಮದಲ್ಲಿ ನಡೆದಿದೆ.

ಕತ್ತರಘಟ್ಟ ಗ್ರಾಮದ ನಿವಾಸಿ ಶಿವಕುಮಾರ್(32) ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ದುರ್ದೈವಿ. ಘಟನೆಗೆ ಚೆಸ್ಕಾಂ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈತ ಎಂದಿನಂತೆ ಮನೆ ಹತ್ತಿರವಿದ್ದ ಮರದಿಂದ ಮೇಕೆಗಳಿಗೆ ಸೊಪ್ಪು ತರಲು ಹೋಗಿದ್ದಾಗ ಗ್ರಾಮಕ್ಕೆ ನೀರು ಒದಗಿಸುವ ಕೊಳವೆ ಬಾವಿಗೆ ಅವೈಜ್ಞಾನಿಕವಾಗಿ ಸಂಪರ್ಕ ಮಾಡಿದ್ದ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು ಅದರ ಮೇಲೆ ಕಾಲಿಟ್ಟ ತಕ್ಷಣವೇ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದಾನೆ

ಮೃತ ಶಿವಕುಮಾರ್ ಒಂದು ತಿಂಗಳ ಹಿಂದಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ದಿನವೂ ಸಹ ತನ್ನ ಚಿಕ್ಕಮ್ಮಳ ಮಗನ ಮದುವೆ ಹೋಗಲು ಹೊರಟಿದ್ದ ಇರು ಮನೆಯಲ್ಲಿದ್ದ ಮೇಕೆಗಳಿಗೆ ಸೊಪ್ಪು ಕಟ್ಟಿ ಹೋಗೋಣವೆಂದು ಸೊಪ್ಪು ತರಲು ಹೋದ ವೇಳೆ ದುರ್ಘಟನೆ ನಡೆದಿದೆ. ದುರ್ಘಟನೆಗೆ ಹರಿಹರಪುರ ಪಂಚಾಯತಿ ಅಧಿಕಾರಿಗಳು ಮತ್ತು ಚೆಸ್ಕಾಂ ಅಧಿಕಾರಿಗಳೇ ಬೇಜವಬ್ದಾರಿಯೇ ಕಾರಣ ಎಂದು ದೂರಿದ್ದಾರೆ.

ಈ ಸಂಬಂಧ ಹರಿಹರಪುರ ಪಂಚಾಯಿತಿ ಮತ್ತು ಚೆಸ್ಕಾಂ ಅಧಿಕಾರಗಳ ವಿರುದ್ಧ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love