ವಿಭಿನ್ನ ಸಾಮಥ್ರ್ಯದ ಮಕ್ಕಳ ಸೇವೆ ಮಾಡುವುದು ಎಲ್ಲಾ ಕೆಲಸಕ್ಕಿಂತಲೂ ಶ್ರೇಷ್ಟವಾದುದ್ದು ; ಬಿಷಪ್ ಜೆರಾಲ್ಡ್ ಲೋಬೊ

Spread the love

ವಿಭಿನ್ನ ಸಾಮಥ್ರ್ಯದ ಮಕ್ಕಳ ಸೇವೆ ಮಾಡುವುದು ಎಲ್ಲಾ ಕೆಲಸಕ್ಕಿಂತಲೂ ಶ್ರೇಷ್ಟವಾದುದ್ದು ; ಬಿಷಪ್ ಜೆರಾಲ್ಡ್ ಲೋಬೊ

ಉಡುಪಿ: ಸಮಾಜದಲ್ಲಿರುವ ವಿಭಿನ್ನ ಸಾಮಥ್ರ್ಯದ ಮಕ್ಕಳ ಸೇವೆ ಮಾಡುವುದು ಎಲ್ಲಾ ಕೆಲಸಕ್ಕಿಂತಲೂ ಶ್ರೇಷ್ಟವಾದುದ್ದು ಮತ್ತು ಇದಕ್ಕೆ ದೇವರ ಅನುಗ್ರಹ ಸದಾ ಇರಲಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ. ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಗುರುವಾರ ಪಾಂಬೂರು ಮಾನಸ ವಿಶೇಷ ಮಕ್ಕಳ ಶಾಲೆಯಲ್ಲಿ ನೂತನ ಆಟಿಸಂ ಕೇಂದ್ರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ದೇಶದಲ್ಲಿ ಹಲವಾರು ವಿಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆಗಳು ಕ್ರೈಸ್ತ ಸಮುದಾಯದಿಂದ ನಡೆಸಲ್ಪಡುತ್ತಿದ್ದು ಹೆಚ್ಚಿನ ಶಾಲೆಗಳು ಧಾರ್ಮಿಕ ವ್ಯಕ್ತಿಗಳಿಂದ ನಡೆಸಲ್ಪಟ್ಟರೆ ಮಾನಸ ಶಾಲೆ ಮಾತ್ರ ಶ್ರೀ ಸಾಮಾನ್ಯರಿಂದ ನಡೆಸಲ್ಪಡುತ್ತಿದ್ದು ಕಳೆದ 20 ವರ್ಷಗಳಲ್ಲಿ ಶಾಲೆ ಮಾಡಿ ಸಾಧನೆ ಅಭೂತಪೂರ್ವವಾದುದು. ಮಾನಸ ಸಂಸ್ಥೆಯ ಮೂಲಕ ಈ ವರೆಗೆ 600 ಕ್ಕೂ ಅಧಿಕ ಮಕ್ಕಳು ತಮ್ಮ ಬಾಳಿನಲ್ಲಿ ಹೊಸ ಭರವಸೆಯನ್ನು ಕಂಡಿದ್ದಾರೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ವಿಭಿನ್ನ ಸಾಮಥ್ರ್ಯದ ಮಕ್ಕಳಿಗೆ ವೈಯುಕ್ತಿಕ ಕಾಳಜಿಯ ಜೊತೆಯಲ್ಲಿ ಸಮಾಜದ ಕಾಳಜಿ ಮತ್ತು ಪ್ರೀತಿ ದೊರೆತಾಗ ಅವರೂ ಕೂಡ ಸಾಧನೆ ಶಿಖರ ಏರುವುದರಲ್ಲಿ ಸಂಶಯವಿಲ್ಲ. ನೂತನವಾಗಿ ನಿರ್ಮಾಣಗೊಳ್ಳಲಿರುವ ಆಟಿಸಂ ಸೆಂಟರ್ ಮೂಲಕ ಇಂತಹ ಮಕ್ಕಳಿಗೆ ಇನ್ನಷ್ಟು ತರಬೇತಿ ಸಿಗುವುದರೊಂದಿಗೆ ಅವರ ಬಾಳಿನಲ್ಲಿ ಹೊಸ ಚೈತನ್ನ ಪಡೆಯಲು ಸಾಧ್ಯವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ಕೆಥೊಲಿಕ್ ಸಭಾ ಮಂಗಳೂರು ಧರ್ಮಪ್ರಾಂತ್ಯದ ಅಧ್ಯಕ್ಷ ಅನಿಲ್ ಲೋಬೊ, ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಕಾರ್ಯದರ್ಶಿ ಜಸಿಂತಾ ಕುಲಾಸೊ, ಕೋಶಾಧಿಕಾರಿ ಆಲ್ವಿನ್ ಕ್ವಾಡ್ರಸ್, ಆಧ್ಯಾತ್ಮಿಕ ನಿರ್ದೇಶಕರಾದ ವಂ ಫರ್ಡಿನಾಂಡ್ ಗೊನ್ಸಾಲ್ವಿಸ್, ವಂ ಹೆರಾಲ್ಡ್ ಪಿರೇರಾ, ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್, ಪ್ರಾಂಶುಪಾಲರಾದ ಸಿಸ್ಟರ್ ಅನ್ಸಿಲ್ಲಾ ಫೆರ್ನಾಂಡಿಸ್, ಸ್ವಾಕ್ ಸಂಸ್ಥೆಯ ಪ್ರತಿನಿಧಿ ಗ್ರೆಟ್ಟಾ ಡಿಸೋಜಾ, ಮಾಜಿ ಪದಾಧಿಕಾರಿಗಳಾದ ಡಾ|ಎಡ್ವರ್ಡ್ ಲೋಬೊ, ಡಾ|ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.

ಮಾನಸ ಸಂಸ್ಥೆಯ ಕೋಶಾಧಿಕಾರಿ ಎಲ್‍ರೊಯ್ ಕಿರಣ್ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ ಸಂಸ್ಥೆಯ ಬೆಳವಣಿಗೆ ಹಾಗೂ ನೂತನ ಆಟಿಸಂ ಕೇಂದ್ರದ ಮಾಹಿತಿ ನೀಡಿದರು. ಮಾನಸ ಸಂಸ್ಥೆಯ ಅಧ್ಯಕ್ಷರಾದ ಹೆನ್ರಿ ಮಿನೇಜಸ್ ಸ್ವಾಗತಿಸಿ, ಕಾರ್ಯದರ್ಶಿ ಅನಿಲ್ ಲೋಬೊ ವಂದಿಸಿದರು. ರೀನಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.


Spread the love