ವಿಶೇಷ ಸಾಮರ್ಥ್ಯದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಮೋದ್ ಮಧ್ವರಾಜ್

Spread the love

ವಿಶೇಷ ಸಾಮರ್ಥ್ಯದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಪ್ರಮೋದ್ ಮಧ್ವರಾಜ್

ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಉಪ್ಪೂರಿನ ಸ್ಪಂದನ ವಿಶೇಷ ಮಕ್ಕಳ ಜೊತೆ ಸೇರಿ ಬುಧವಾರ ಆಚರಿಸಿವುದರ ಮೂಲಕ ವಿಶೇಷ ಚೇತನ ಮಕ್ಕಳೊಂದಿಗೆ ಸಂತಸವನ್ನು ಹಂಚಿಕೊಂಡರು.

ತಮ್ಮ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಆಯೋಜಿಸಿದ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಂಡ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಕೇಕ್ ಕತ್ತರಿಸಿ, ವಿಶೇಷ ಸಾಮರ್ಥ್ಯದ ಮಕ್ಕಳಿಗೆ ಕೇಕ್ನ ಸವಿಯುಣಿಸುವ ಮೂಲಕ ಸಚಿವರ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಇದೇ ವೇಳೆ ಸ್ಪಂದನ ಶಾಲೆಯ ಮಕ್ಕಳಿಗೆ ಮಧ್ಯಾಹ್ನದ ಊಟ, ಹಣ್ಣು ಹಂಪಲು ನೀಡಿದ್ದಲ್ಲದೆ ತನ್ನ ವತಿಯಿಂದ ವೈಯುಕ್ತಿಕ ಆರ್ಥಿಕ ಸಹಾಯವನ್ನು ಶಾಲೆಯ ಮುಖ್ಯಸ್ಥರಿಗೆ ಪ್ರಮೋದ್ ಮಧ್ವರಾಜ್ ಹಸ್ತಾಂತರಿಸಿದರು.

ಈ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜನಾರ್ದನ ತೋನ್ಸೆ, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಬ್ಲಾಕ್ ಅಧ್ಯಕ್ಷರಾದ ಸತೀಶ್ ಅಮೀನ್ ಪಡುಕೆರೆ, ನಿತ್ಯಾನಂದ ಶೆಟ್ಟಿ, ಕಾಂಗ್ರೆಸ್ ನಾಯಕರಾದ ಮೀನಾಕ್ಷಿ ಮಾಧವ, ವಿಘ್ನೇಶ್ ಕಿಣಿ, ಜನಾರ್ದನ ಭಂಡಾರ್ಕರ್, ಗಣೇಶ್ ನೇರ್ಗಿ, ನಾರಾಯಣ ಕುಂದರ್, ಯತೀಶ್ ಕರ್ಕೇರಾ, ಶೇಖರ್ ಜಿ ಕೋಟ್ಯಾನ್, ನೀರಜ್ ಪಾಟೀಲ್, ಸಂಜಯ್ ಆಚಾರ್ಯ, ಜೋಯೆಲ್ ಸೋನ್ಸ್, ನಬೀಲ್ ಉದ್ಯಾವರ ಹಾಗೂ ಇತರರು ಉಪಸ್ಥಿತರಿದ್ದರು.


Spread the love