ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Spread the love

ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಿಂದ ಸ್ಥಾಪಿಸಲಾಗಿರುವ ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ 2018ನೇ ಸಾಲಿನ ಇಂಜಿನಿಯರಿಂಗ್ ಮತ್ತು ಎಂ.ಬಿ.ಬಿ.ಎಸ್ ಅಧ್ಯಯನ ಆಕಾಂಕ್ಷಿ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿವೇತನಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಳಕಂಡ ಅರ್ಹತೆಗಳಿರುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಬಹುದು.

  1. ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೇರಿರುವ ಕೊಂಕಣಿ ಮಾತೃಭಾಷೆಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಮಾತೃಭಾಷೆ ಧೃಡೀಕರಣ ಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು.
  2. 2018ನೇ ಇಸವಿಯಲ್ಲಿ ಇಂಜಿನಿಯರಿಂಗ್ ಅಥವಾ ಎಂ.ಬಿ.ಬಿ.ಎಸ್ ಕೋರ್ಸಿನ ಮೊದಲ ವರ್ಷಕ್ಕೆ ಪ್ರವೇಶವನ್ನು ಪಡೆದುಕೊಳ್ಳುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
  3. ಎಸ್.ಎಸ್.ಎಲ್.ಸಿಯಲ್ಲಿ ಹಾಗೂ ದ್ವಿತೀಯ ಪಿ.ಯು.ಸಿಯ ಮುಖ್ಯವಿಷಯಗಳಲ್ಲಿ (ಕೋರ್ ಸಬ್ಜೆಕ್ಟ್) 70% ಕ್ಕಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿರಬೇಕು ಮತ್ತು ಸಿ.ಇ.ಟಿ. ಅಥವಾ ಇತರ ಪ್ರವೇಶ ಪರೀಕ್ಷೆಗಳಲ್ಲಿ 20 ಸಾವಿರಕ್ಕಿಂತ ಒಳಗಿನ ಶ್ರೇಣಿಯನ್ನು (ರೇಂಕ್) ಗಳಿಸಿರಬೇಕು.
  4. ಕುಟುಂಬದ ವಾರ್ಷಿಕ ವರಮಾನ ರೂಪಾಯಿ 4.50 ಲಕ್ಷಕ್ಕಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ಎರಡು ಧೃಡೀಕರಣಗಳನ್ನು ಕುಟುಂಬದ ವೈದ್ಯರಿಂದ ಮತ್ತು ಕುಟುಂಬದ ಸ್ಥಿತಿಗತಿಯನ್ನು ಬಲ್ಲ ಚಾರ್ಟರ್ಡ್ ಅಕೌಂಟಂಟ್ ಓರ್ವರಿಂದ ಪಡೆದು ಸಲ್ಲಿಸಬೇಕು.
  5. ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಲ್ಲಿ ಅಭ್ಯರ್ಥಿಯು ತನ್ನ ವಿದ್ಯಾಭ್ಯಾಸವನ್ನು ಹೊಂದಿ ಉದ್ಯೋಗವನ್ನು ಗಳಿಸಿದ ಬಳಿಕ ಇಬ್ಬರು ಅಭ್ಯರ್ಥಿಗಳನ್ನು ಪೆÇೀಷಿಸಲು ನೈತಿಕನಾಗಿ ಬದ್ಧರಾಗಬೇಕು. ಹಾಗೂ 2018ನೇ ವರ್ಷದಲ್ಲಿ ಒಟ್ಟು 20 ದಿನಗಳನ್ನು ಸಮುದಾಯ ಸೇವೆಗೆ ಮೀಸಲಿಡಲು ಬದ್ಧರಾಗಿರಬೇಕು.

ಮೇಲ್ಕಂಡ ಅರ್ಹತೆಗಳಿರುವ ಅತೀ ಅರ್ಹ ಅಭ್ಯರ್ಥಿಗಳನ್ನು ಒಂದು ಸ್ವತಂತ್ರ ಪರಿಶೀಲನಾ ವ್ಯವಸ್ಥೆಯ ಮೂಲಕ ಆಯ್ಕೆ ಮಾಡಲಾಗುವುದು. ಹಾಗೆ ಆಯ್ಕೆಯಾದ ಪ್ರತೀ ಇಂಜಿನಿಯರಿಂಗ್ ಮತ್ತು ಎಂಬಿಬಿಎಸ್ ಆಕಾಂಕ್ಷಿ ವಿದ್ಯಾರ್ಥಿಗಳು ಅನುಕ್ರಮವಾಗಿ ರೂ. 30,000 ಮತ್ತು ರೂ. 40,000 ವಿದ್ಯಾರ್ಥಿ ವೇತನವನ್ನು 2018ರಲ್ಲಿ ಪಡೆಯುವರು.

ಮೇಲ್ಕಂಡ ಅರ್ಹತೆಗಳಿರುವ ಅಭ್ಯರ್ಥಿಗಳು ಇಂಟರನೆಟ್ ಮುಖಾಂತರ ವಿಶ್ವ ಕೊಂಕಣಿ ಕೇಂದ್ರದ ವೆಬ್ ಸೈಟ್ “ವಿಶ್ವಕೊಂಕಣಿ ಡಾಟ್ ಓಆರ್‍ಜಿ” (ತಿತಿತಿ.vishತಿಚಿಞoಟಿಞಚಿಟಿi.oಡಿg) ನಲ್ಲಿ ಸ್ಥಾಪಿಸಲಾಗಿರುವ ಆನ್ ಲೈನ್ ಅರ್ಜಿವಿಧಾನದಿಂದ ಅರ್ಜಿ ಸಲ್ಲಿಸಬಹುದು. ಆನ್ ಲೈನ್ ಅರ್ಜಿ ಸೌಲಭ್ಯವು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದ ಜುಲೈ 10, 2018ರ ವರೇಗೆ ಮಾತ್ರ ಸಕ್ರಿಯವಾಗಿರುತ್ತದೆ. ಪತ್ರ ಮುಖೇನ ಅಥವಾ ಇನ್ನಾವುದೇ ವಿಧಾನಗಳಿಂದ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಹಾಗೆ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಲಾಗುವುದಿಲ್ಲ. ಅರ್ಜಿ ಸಲ್ಲಿಸುವ ವಿಧಾನ ಮತ್ತು ಇನ್ನಿತರ ನಿಯಮ ನಿಬಂಧನೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ವಿಶ್ವ ಕೊಂಕಣಿ ವೆಬ್ ಸೈಟ್‍ನಲ್ಲಿ ಪಡೆದುಕೊಳ್ಳಬಹುದು.

ವಿಶ್ವ ಕೊಂಕಣಿ ವಿದ್ಯಾರ್ಥಿವೇತನ ನಿಧಿಯು ಇಂಜಿನಿಯರಿಂಗ ಮತ್ತು ಮೆಡಿಕಲ್‍ನಂತಹ ಉನ್ನತ ಶಿಕ್ಷಣಗಳ ಆಕಾಂಕ್ಷಿಯಾಗಿರುವ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಕೊಂಕಣಿ ಭಾಷಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಕಲ್ಪಿಸುತ್ತದೆ. ಈ ನಿಧಿಯು ಚಿಂತಕ ಮತ್ತು ದಾನಿ ಟಿ.ವಿ. ಮೋಹನದಾಸ ಪೈಯವರ ಮಾರ್ಗದರ್ಶನದಲ್ಲಿ 2010ನೇ ಇಸವಿಯಲ್ಲಿ ಸ್ಥಾಪಿತವಾಗಿದ್ದು, ಇದರ ಮೂಲಕ ಇದುವರೆಗೆ ಸುಮಾರು ರೂಪಾಯಿ 18.00 ಕೋಟಿ ಮೊತ್ತದ 17,000ಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳನ್ನು ನೀಡಲಾಗಿದೆ. ಪ್ರತಿ ವರ್ಷ ವಿವಿಧ ಶೈಕ್ಷಣಿಕ ತರಗತಿಗಳಲ್ಲಿನ ಸುಮಾರು 2000 ವಿದ್ಯಾರ್ಥಿಗಳು ಒಟ್ಟು ರೂಪಾಯಿ 3.00 ಕೋಟಿ ಮೌಲ್ಯದ ವಿದ್ಯಾರ್ಥಿವೇತನವನ್ನು ಗಳಿಸುವರು.

ಈ ನಿಧಿಯು ಒಂದು ಪ್ರವಾಹದಂತಹ ಸಂಪನ್ಮೂಲವನ್ನು ನಿರ್ಮಾಣ ಮಾಡುವ ಹೊಸ ರೀತಿಯ ಯೋಜನೆಯಾಗಿದ್ದು ಒಂದು ವರ್ಷದಲ್ಲಿ ಸಂಗ್ರಹವಾದ ಹಣವನ್ನು ಹೂಡಿಕೆಯಾಗಿರಿಸದೇ ಆ ವರ್ಷವೇ ¥sóÀಲಾನುಭವಿಗಳಿಗೆ ವಿತರಿಸಲಾಗುತ್ತದೆ. ಎಲ್ಲಾ ದೇಣಿಗೆಗಳಿಗೆ 80 (ಜಿ) ಪ್ರಕಾರ ಆದಾಯ ತೆರಿಗೆ ವಿನಾಯಿತಿ ಇದೆ.

ಇನ್ಫೊಸಿಸ್‍ನ ಜ್ಯೇಷ್ಠ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿರುವ ಮತ್ತು ವಿಶ್ವ ಕೊಂಕಣಿ ಕೇಂದ್ರದ ಟ್ರಸ್ಟಿಯಾಗಿರುವ ಶ್ರೀ ರಾಮದಾಸ ಕಾಮತ್ ಯು. ರವರು ಈ ನಿಧಿಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ಕಾರ್ಯದರ್ಶಿಯಾಗಿ ಹಾಂಗ್ಯೋ ಐಸ್ಕ್ರೀಮ್ ಪ್ರೈ. ಲಿ.ನ ಆಡಳಿತ ನಿರ್ದೇಶಕ ಶ್ರೀ ಪ್ರದೀಪ್ ಜಿ. ಪೈ ಯವರು ಸೇವೆ ಸಲ್ಲಿಸುತ್ತಿದ್ದಾರೆ. ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕರೂ ಅಧ್ಯಕ್ಷರೂ ಆಗಿರುವ ಬಸ್ತಿ ವಾಮನ ಶೆಣೈ, ಮಾತೃಸಂಸ್ಥೆ ಕೊಂಕಣಿ ಭಾಸ್ ಆನಿ ಸಂಸ್ಕೃತಿ ಪ್ರತಿಷ್ಟಾನದ ಅಧ್ಯಕ್ಷ, ಡಾ. ಪಿ. ದಯಾನಂದ ಪೈ ಹಾಗೂ ಪ್ರತಿಷ್ಠಾನದ ಗೌರವಾಧ್ಯಕ್ಷ ಆರ್. ವಿ.ದೇಶಪಾಂಡೆ ಇವರುಗಳ ಮಾರ್ಗದರ್ಶನದಲ್ಲಿ ಸಮಿತಿಯು ಕಾರ್ಯನಿರ್ವಹಿಸುತ್ತಿದೆ.

ವಿಶ್ವ ಕೊಂಕಣಿ ವಿದ್ಯಾರ್ಥಿ ವೇತನ ನಿಧಿಯ ಅಧ್ಯಕ್ಷ ರಾಮದಾಸ ಕಾಮತ್ ಯು. ರವರು ಈ ಪತ್ರಿಕಾ ಪ್ರಕಟಣೆಯನ್ನು ನೀಡಿರುತ್ತಾರೆ.


Spread the love