ವಿ.ಎಚ್.ಪಿ ಉಡುಪಿ ಜಿಲ್ಲಾ ಸಮಿತಿ ಬರ್ಖಾಸ್ತು – ಶರಣ್ ಪಂಪ್ ವೆಲ್

ವಿ.ಎಚ್.ಪಿ ಉಡುಪಿ ಜಿಲ್ಲಾ ಸಮಿತಿ ಬರ್ಖಾಸ್ತು – ಶರಣ್ ಪಂಪ್ ವೆಲ್

 ಉಡುಪಿ: ಉಡುಪಿ ಜಿಲ್ಲೆಯ ವಿಶ್ವಹಿಂದೂ ಪರಿಷತ್ತನ್ನು ಇನ್ನಷ್ಟು ಸಕ್ರೀಯಗೊಳಿಸುವ ದೃಷ್ಟಿಯಿಂದ ಜಿಲ್ಲಾ ಸಮಿತಿಯನ್ನು ತಾತ್ಕಾಲಿಕವಾಗಿ ವಿಸರ್ಜಿಲಾಗಿದೆ ಎಂದು ವಿಭಾಗ ಕಾರ್ಯದರ್ಶಿ  ಶರಣ್ ಪಂಪ್ವೆಲ್ ತಿಳಿಸಿದ್ದಾರೆ.

 ಮುಂದಿನ ಹೊಸ ಸಮಿತಿಯ ಘೋಷಣೆಯಾಗುವವರೆಗೆ ಜಿಲ್ಲಾ ಸಮಿತಿಯಲ್ಲಿ ವಿಶ್ವಹಿಂದೂ ಪರಿಷದ್, ಬಜರಂಗದಳ,ಮಾತೃಶಕ್ತಿ, ದುರ್ಗಾವಾಹಿನಿಯ ಯಾರಿಗೂ ಯಾವುದೇ ಜವಾಬ್ದಾರಿ ಇರುವುದಿಲ್ಲ

 ವಿಶ್ವಹಿಂದೂ ಪರಿಷದ್, ಬಜರಂಗದಳ,ಮಾತೃಶಕ್ತಿ, ದುರ್ಗಾವಾಹಿನಿಯ ತಾಲೂಕು, ವಲಯ, ಗ್ರಾಮ ಮತ್ತು ಘಟಕ ಮಟ್ಟದ ಸಮಿತಿಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿರುತ್ತದೆ.

ಉಡುಪಿಯಲ್ಲಿ  19 ಫೆಬ್ರವರಿ 2020 ರಂದು ಸಂಘಕಾರ್ಯಲಯದಲ್ಲಿ, ವಿಶ್ವಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷರಾದ ಪ್ರೊ ಎಂ ಬಿ ಪುರಾಣಿಕ್ ರವರ ಉಪಸ್ಥಿತಿಯಲ್ಲಿ ಈ ನಿರ್ಣಯವನ್ನು ಕೈಗೊಳಲಾಗಿದ್ದು, ಶೀಘ್ರವೇ ಹೊಸ ಜಿಲ್ಲಾ ಸಮಿತಿಯನ್ನು ಘೋಷಣೆ ಮಾಡಲಾಗುವುದು ಎಂದು ವಿಭಾಗ ಕಾರ್ಯದರ್ಶಿ  ಶರಣ್ ಪಂಪ್ ವೆಲ್  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.