ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ

ಉಡುಪಿ: ಇತ್ತೀಚೆಗೆ ನಿಧನರಾದ ಖಾಸಗಿ ಸುದ್ದಿವಾಹಿನಿಯ ಮಂಗಳೂರಿನ ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಉಡುಪಿ ಪ್ರೆಸ್ಕ್ಲಬ್ ವತಿಯಿಂದ ಬುಧವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪತ್ರಕರ್ತ ಶಶಿಧರ ಮಾಸ್ತಿಬೈಲು ನುಡಿನಮನ ಸಲ್ಲಿಸಿ, ಸದಾ ಲವಲವಿಕೆಯಿಂದ ಇರುತ್ತಿದ್ದ ಪತ್ರಕರ್ತ ನಾಗೇಶ್. ಅವರ ಈ ಅಕಾಲಿಕ ಮರಣವು ಕರ್ತವ್ಯಕ್ಕಾಗಿ ನಡೆದಿರುವ ಬಲಿದಾನ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪ್ರಾರ್ಥಿಸುತ್ತೇವೆ ಎಂದು ಹೇಳಿದರು.

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ https://www.mangalorean.com/ವೀಡಿಯೋ-ಜರ್ನಲಿಸ್ಟ್-ನಾಗೇಶ್/

Mangalorean.com இடுகையிட்ட தேதி: புதன், 24 ஜூலை, 2019

ಪತ್ರಕರ್ತರು ಸಮಾಜಕ್ಕೆ ಸ್ಪಂದಿಸುವುದಿಲ್ಲ ಎನ್ನುವ ಆರೋಪವಿದೆ. ಆದರೆ ಡೆಂಗ್ಯು ಸಮಸ್ಯೆಯಾದಾಗ ಅಲ್ಲಿ ವರದಿಗಾರಿಕೆಗೆ ಹೋದಾಗ ಪತ್ರಕರ್ತರಿಗೂ ಡೆಂಗ್ಯು ಹರಡಿದೆ. ಇದರಲ್ಲಿ ನಾಗೇಶ್ ಅವರನ್ನು ಕಳೆದುಕೊಂಡಿದ್ದೇವೆ. ಈ ಘಟನೆಯಿಂದಾದರೂ ಪತ್ರಕರ್ತರು ತಮ್ಮ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು. ಮನೆಯವರು ಕೂಡ ನಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಒತ್ತಾಯಿಸುತ್ತಾರೆ. ಅದನ್ನು ಗಂಭೀರವಾಗಿ ಪರಿಗಣಿಸಿ, ಆರೋಗ್ಯದತ್ತ ಎಚ್ಚರಿಕೆ ವಹಿಸಬೇಕು ಎಂದರು.

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ https://www.mangalorean.com/ವೀಡಿಯೋ-ಜರ್ನಲಿಸ್ಟ್-ನಾಗೇಶ್/

Mangalorean.com இடுகையிட்ட தேதி: புதன், 24 ஜூலை, 2019

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಕ್ರೀಡಾ ಕಾರ್ಯದರ್ಶಿ ಹರೀಶ್ ಪಾಲೆಚ್ಚಾರ್, ಉಡುಪಿ ಪ್ರೆಸ್ಕ್ಲಬ್ ಸಂಚಾಲಕ ನಾಗರಾಜ್ ರಾವ್ ವರ್ಕಾಡಿ, ಸಹ ಸಂಚಾಲಕ ಅನೀಶ್ ಡಿಸೋಜ ಅವರು ನುಡಿ ನಮನ ಸಲ್ಲಿಸಿದರು.

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ

ವೀಡಿಯೋ ಜರ್ನಲಿಸ್ಟ್ ನಾಗೇಶ್ ಪಡು ಅವರಿಗೆ ಉಡುಪಿ ಪತ್ರಕರ್ತರಿಂದ ಶ್ರದ್ಧಾಂಜಲಿ https://www.mangalorean.com/ವೀಡಿಯೋ-ಜರ್ನಲಿಸ್ಟ್-ನಾಗೇಶ್/

Mangalorean.com இடுகையிட்ட தேதி: புதன், 24 ஜூலை, 2019

ಸಂಘದ ಮಾಜಿ ಅಧ್ಯಕ್ಷ ಜಯಕರ ಸುವರ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ಕೋಶಾಧಿಕಾರಿ ದಿವಾಕರ ಹಿರಿಯಡ್ಕ, ಜೊತೆ ಕಾರ್ಯದರ್ಶಿ ಮೈಕಲ್ ರೋಡ್ರಿಗಸ್ ಮೊದಲಾದವರಿದ್ದರು. ಪತ್ರಕರ್ತರೆಲ್ಲರೂ ಪುಷ್ಪನಮನ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಮೌನ ಪ್ರಾರ್ಥನೆ ಸಲ್ಲಿಸಲಾಯಿತು.