ವೃತ್ತಿಯ ಜೊತೆಗೆ ಸಮಾಜಮುಖಿ‌ ಕಾರ್ಯದೊಂದಿಗೆ ಮುನ್ನಡೆಯಿರಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

Spread the love

ವೃತ್ತಿಯ ಜೊತೆಗೆ ಸಮಾಜಮುಖಿ‌ ಕಾರ್ಯದೊಂದಿಗೆ ಮುನ್ನಡೆಯಿರಿ: ಶಾಸಕ ಕಿರಣ್ ಕುಮಾರ್ ಕೊಡ್ಗಿ

ಕುಂದಾಪುರ: ಛಾಯಾಗ್ರಾಹಕರು ತಮ್ಮ ವೃತ್ತಿಜೀವನದ ಜೊತೆಗೆ ಸಮಾಜಮುಖಿಯಾಗಿ ಕೆಲಸ ಮಾಡುವ ಹಂಬಲದೊಂದಿಗೆ ಸಂಘಟನೆ ಕಟ್ಟಿಕೊಂಡಿರುವುದು ಉತ್ತಮ ಬೆಳವಣಿಗೆ. ತಾವೆಲ್ಲರೂ ವೃತ್ತಿಯ ಜೊತೆಗೆ ಇನ್ನೂ ಹೆಚ್ಚಿನ ಸಮಾಜಮುಖಿ ಕಾರ್ಯದೊಂದಿಗೆ ಮುನ್ನಡೆಯಿರಿ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ದಕ್ಷಿಣ ಕನ್ನಡ-ಉಡುಪಿ ಜಿಲ್ಲೆ ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಕುಂದಾಪುರ-ಬೈಂದೂರು ವಲಯದ ಆಶ್ರಯದಲ್ಲಿ ಸಂಘದ ಸದಸ್ಯರಿಗಾಗಿ ಇಲ್ಲಿನ ಅಂಕದಕಟ್ಟೆಯ ಸಹನಾ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಶನಿವಾರ ಆಯೋಜಿಸಲಾದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಮತ್ತು ಟೆನಿಸ್ ಬಾಲ್ ಬಾಕ್ಸ್ ಕ್ರಿಕೆಟ್ ಪಂದ್ಯಾಟ ‘ದಿ. ರಾಬರ್ಟ್ ಡಿ’ಸೋಜಾ ಟ್ರೋಫಿ-2023’ ಉದ್ಘಾಟಿಸಿ ಅವರು ಮಾತನಾಡಿದರು.

ಛಾಯಾಗ್ರಹಣದಲ್ಲಿ ತೊಡಗಿಕೊಂಡ ಎಲ್ಲರನ್ನೂ ಸಂಘಟಿಸಿ ಅವರೆಲ್ಲರನ್ನೂ ಒಂದೆಡೆ ಸೇರಿಸಿ ಆಟೋಟಗಳಲ್ಲಿ ಅವಕಾಶ ಮಾಡಿಕೊಟ್ಟಿರುವುದು ಶ್ಲಾಘನೀಯ ಕಾರ್ಯ. ಈಗಾಗಲೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುವ ಎಸ್.ಕೆ.ಪಿ.ಎ ಸಂಘಟನೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪಡೆಯುವಂತಾಗಲಿ ಎಂದು ಶುಭಹಾರೈಸಿದರು.

ಎಸ್.ಕೆ.ಪಿ.ಎ ಕುಂದಾಪುರ- ಬೈಂದೂರು ವಲಯ ಅಧ್ಯಕ್ಷ ದಿವಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ 17 ವರ್ಷದ ವಯೋಮಿತಿಯ ಸ್ಕೂಲ್ ಕ್ರಿಕೆಟ್ ನಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಕುಮಾರಿ ರಚಿತಾ ಹತ್ವಾರ್ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಎಸ್.ಕೆ.ಪಿ.ಎ ದ.ಕ- ಉಡುಪಿ ಅಧ್ಯಕ್ಷ ಪದ್ಮಪ್ರಸಾದ್ ಜೈನ್, ಸಹನಾ ಗ್ರೂಪ್ಸ್ ನ ಸುರೇಂದ್ರ ಶೆಟ್ಟಿ, ಟೋರ್ಪಡೋಸ್ ಸಂಸ್ಥೆಯ ಮುಖ್ಯಸ್ಥ ಗೌತಮ್ ಶೆಟ್ಟಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ, ಛಾಯಾಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ಜಿ.ಕೆ, ಎಸ್.ಕೆ.ಪಿ.ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ ಬಂಟ್ವಾಳ, ಡೆಲ್ಫಿನ್ ಡಿಸೋಜಾ, ದ.ಕ-ಉಡುಪಿ ಎಸ್.ಕೆ.ಪಿ.ಎ ಸಹಕಾರಿ ಸಂಘದ ಅಧ್ಯಕ್ಷ ವಾಸುದೇವ ರಾವ್, ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷ ಆನಂದ ಎನ್ ಬಂಟ್ವಾಳ, ಜಿಲ್ಲಾ ಕೋಶಾಧಿಕಾರಿ ನವೀನ್ ರೈ, ಜಿಲ್ಲಾ ಕ್ರೀಡಾ ಕಾರ್ಯದರ್ಶಿಗಳಾದ ರಂಜಿತ್, ಭಾರದ್ವಾಜ್, ಸಂಘಟನೆಯ ಪ್ರಮುಖರಾದ ರಾಜ ಮಠದಬೆಟ್ಟು, ಶ್ರೀಧರ ಹೆಗ್ಡೆ, ದಿನೇಶ್ ಗೋಡೆ, ಹರೀಶ್ ಪೂಜಾರಿ, ಚಂದ್ರಕಾಂತ್, ಸುರೇಶ್ ಮೊಳಹಳ್ಳಿ, ನವೀನ್ ಪಿ.ಪಿ, ದಿನೇಶ್ ನಾಗೂರು, ರಾಘವೇಂದ್ರ ರಟ್ಟಾಡಿ, ಹೇಮಚಂದ್ರ, ಕಾರ್ಯದರ್ಶಿ ದಿನೇಶ್ ರಾಯಪ್ಪನಮಠ ಉಪಸ್ಥಿತರಿದ್ದರು.

ಸಂಘದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಪ್ರಸ್ತಾಪಿಸಿ ಸ್ವಾಗತಿಸಿದರು. ಶ್ರೀನಿವಾಸ್ ಶೇಟ್ ಪ್ರಾರ್ಥಿಸಿದರು. ಅಮೃತ್ ಬೀಜಾಡಿ ಸನ್ಮಾನ ಪತ್ರ ವಾಚಿಸಿದರು. ಚಂದ್ರಕಾಂತ್ ಧನ್ಯವಾದವಿತ್ತರು. ಕುಮಾರಿ ಶ್ರದ್ದಾ ನಿರೂಪಿಸಿದರು.


Spread the love