ವೇದಿಕೆಯ ಮೇಲೆ ಸರಳತೆ ಮೆರೆದ ಶಾಸಕ ವೇದವ್ಯಾಸ್ ಕಾಮತ್

Spread the love

ವೇದಿಕೆಯ ಮೇಲೆ ಸರಳತೆ ಮೆರೆದ ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು: ರಾಜಕೀಯ ವ್ಯಕ್ತಿಗಳೆಂದರೆ ಸಾಕು ಅವರೊಳಗೆ ಜಗತ್ತಿನಲ್ಲಿ ತನಗಿಂತ ಮಿಗಿಲಿಲ್ಲ ಎನ್ನುವ ಭಾವನೆ ಮೂಡಿ ಬಿಡುತ್ತದೆ.ಅಂತಹುದರಲ್ಲಿ ಶಾಸಕನೆಂಬ ದೊಡ್ಡ ಪದವಿಯಲ್ಲಿದ್ದರೂ ಕೂಡ ಸ್ವಲ್ಪವೂ ಅಹಂ ಇಲ್ಲದೆ ಹಿರಿಯರೊಬ್ಬರಿಗೆ ಸುಮಾರು 15 ನಿಮಿಷಗಳ ಕಾಲ ಸ್ವತಃ ತಾನೇ ಮೈಕ್ ಹಿಡಿದುಕೊಂಡು ಕೂತಿರುವುದನ್ನು ಕಂಡ ಅನೇಕ ಜನರ ಮನದೊಳಗೆ “ನಾಯಕತ್ವದ ಹೊಸ ಬೆಳಕು” ಮೂಡಿದ್ದು ಅಲ್ಲಿ ಸ್ಪಷ್ಟವಾಗಿ ಗೋಚರಿಸುತಿತ್ತು.

ನವ ಭಾರತ್ ಸರ್ಕಲ್ ನಲ್ಲಿರುವ ರಮಣ್ ಪೈ ಸಭಾಂಗಣ ವಿಶ್ವ ಕೊಂಕಣಿ ನಾಟಕ ಮಹೋತ್ಸವ ಕಾರ್ಯಕ್ರಮಕ್ಕಾಗಿ ಜನ ಸಾಗರ ಕಿಕ್ಕಿರಿದು ತುಂಬಿತ್ತು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರ ಉಪಸ್ಥಿತಿ ಸಭಾ ಕಾರ್ಯಕ್ರಮಕ್ಕೆ ಮೆರಗು ನೀಡಿತ್ತು.ಅದಲ್ಲದೆ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಡಿ.ವೇದವ್ಯಾಸ್ ಕಾಮತ್ ಅವರೂ ಕೂಡ ಸಭೆಯ ವೇದಿಕೆಯಲ್ಲಿದ್ದರು.

ಸಭೆ ಸಾಮಾನ್ಯವಾಗಿ ನಡೆಯುತ್ತಿರುವಾಗ ವೇದಿಕೆಯ ಮೇಲೆ ಉಪಸ್ಥಿತರಿದ್ದ ಹಿರಿಯರಾದ ಕೆನರಾ ಅಸೋಸಿಯೇಷನ್ ಇದರ ಅಧ್ಯಕ್ಷರೂ ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಎಸ್ ಎಸ್ ಕಾಮತ್ ಅವರು ಮಾತನಾಡಬೇಕಿತ್ತು.ಆದರೆ ಮೈಕ್ ಬಳಿ ತೆರಳಿ ನಿಂತು ಮಾತನಾಡಲಾರದ ಕಾರಣ ಕೂತಿದ್ದ ಎಸ್ ಎಸ್ ಕಾಮತ್ ಅವರ ಕೈಗೆ ಕಾರ್ಯಕ್ರಮದ ವ್ಯವಸ್ಥಾಪಕರು ಮೈಕ್ ನೀಡಿದರು.ಎಸ್ ಎಸ್ ಕಾಮತ್ ಅವರು ಮೈಕ್ ಹಿಡಿದು ಮಾತನಾಡಲು ಪ್ರಾರಂಭಿಸಿದಾಗ ವಯೋ ಸಹಜವಾಗಿ ಅವರ ಧ್ವನಿ ಸಭಾಂಗಣದ ಅಂತಿಮ ಪಂಕ್ತಿಯ ವರೆಗೂ ತಲುಪುತ್ತಿರಲಿಲ್ಲ.ಅವರ ಪಕ್ಕದಲ್ಲೇ ಕೂತಿದ್ದ ಶಾಸಕ ವೇದವ್ಯಾಸ್ ಕಾಮತ್ ಅವರು ಇದನ್ನು ಗಮನಿಸಿ ಎಸ್ ಎಸ್ ಕಾಮತ್ ಅವರ ಮಾತು ಮುಗಿಯುವ ವರೆಗೂ ಅವರ ಮುಂದೆ ಮೈಕ್ ಹಿಡಿದುಕೊಂಡಿದ್ದರು.ಸಭೆಯಲ್ಲಿ ಪ್ರೇಕ್ಷಕನಾಗಿ ಕೂತಿದ್ದ ಎಲ್ಲರಿಗೂ ನಿಜಕ್ಕೂ ಇದೊಂದು ಪ್ರೇರಣೆಯ ಘಟನೆಯಾಗಿತ್ತು
ಒಬ್ಬ ಶಾಸಕನಾಗಿದ್ದರೂ ಕೂಡ ಸಾಮಾನ್ಯರಲ್ಲಿ ಸಾಮಾನ್ಯರಂತೆ ಹಿರಿಯರೊಬ್ಬರ ಮುಂದೆ ಮೈಕ್ ಹಿಡಿದು ಕೂತಿದ್ದ ಶಾಸಕರ ನಡೆ ನಿಜಕ್ಕೂ ಕೂಡ ಸರಳತೆಯನ್ನು ತೋರಿಸಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ


Spread the love