ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ಲಾಡ್ಜಿಗೆ ಪೋಲಿಸರ ಧಾಳಿ

Spread the love

ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ಲಾಡ್ಜಿಗೆ ಪೋಲಿಸರ ಧಾಳಿ

ಮಂಗಳೂರು: ಸೆನ್ ಹಾಗೂ ಸೈಬರ್ ಕ್ರೈಂ ಪೋಲಿಸರ ಜಂಟಿ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಒಂದಕ್ಕೆ ಧಾಳಿ ನಡೆಸಿದ್ದಾರೆ.

ಭಾನುವಾರ ಸ್ಟೇಟ್ ಬ್ಯಾಂಕ್ ಬಳಿಯ ಲಾಡ್ಜ್ ವೊಂದರಲ್ಲಿ ವೇಶ್ಯಾವಾಟಿಕೆ ಸಂಬಂಧಿತ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯನ್ನು ಆಧರಿಸಿ ಎಕೊನಾಮಿಕ್ ಮತ್ತು ನಾರ್ಕೋಟಿಕ್ ಕ್ರೈಂ ವಿಭಾಗ ಪೋಲಿಸರು ಮತ್ತು ಸೈಬರ್ ಕ್ರೈಂ ಪೋಲಿಸರು ಧಾಳಿ ನಡೆಸಿದ್ದು, ಧಾಳಿಯ ವೇಳೆ ಯಾವುದೇ ರೀತಿಯ ಅಂತಹ ಚಟುವಟಿಕೆ ನಡೆದ ಬಗ್ಗೆ ದಾಖಲೆಗಳು ದೊರೆತಿಲ್ಲ ಎನ್ನಲಾಗಿದೆ.

ಧಾಳಿಯನ್ನು ನೋಡಲು ನೂರಾರು ಜನರು ಸೇರಿದ ಪರಿಣಾಮ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.


Spread the love