ಶಂಕರನಾರಾಯಣ : ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಏಳು ಮಂದಿಯ ಬಂಧನ

Spread the love

ಶಂಕರನಾರಾಯಣ : ಐಪಿಎಲ್ ಬೆಟ್ಟಿಂಗ್ ಅಡ್ಡೆ ಮೇಲೆ ದಾಳಿ: ಏಳು ಮಂದಿಯ ಬಂಧನ

ಕುಂದಾಪುರ: ಸಾರ್ವಜನಿಕ ಸ್ಥಳದಲ್ಲಿ ಮೊಬೈಲ್ ಆ್ಯಪ್ ಬಳಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 7 ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಸುಬ್ರಹ್ಮಣ್ಯ ಕೊಠಾರಿ (36), ಸಂತೋಷ ಶೆಟ್ಟಿ (26) ಕಿರಣ್ ಪೂಜಾರಿ( 19), ವಿವೇಕ ಶೆಟ್ಟಿ (29), ಅಕ್ಷಯ ಪೂಜಾರಿ(23) , ಜಯ ಶೆಟ್ಟಿ(36) ಮತ್ತು ಅಪ್ಸರ್ (25) ಎಂದು ಗುರುತಿಸಲಾಗಿದೆ

ಗುರುವಾರ ಸಂಜೆ ಸಿದ್ದಾಪುರ ಮಾಕೇಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಗುಂಪುಗೂಡಿಕೊಂಡು ಈ ದಿನ ನಡೆಯುತ್ತಿರುವ ಐಪಿಎಲ್ ಮ್ಯಾಚನ್ ಟೀಮ್ ಗಳಾದ ಹೈದ್ರಾಬಾದ್ ಸನ್ ರೈಸರ ಹಾಗೂ ಕಿಂಗ್ಸ ಇಲೇವನ್ ಪಂಜಾಬ್ ಕ್ರಿಕೆಟ್ ಸ್ಕೋರ್ನ ಮೇಲೆ 0 ಯಿಂದ 9 ಸಂಖ್ಯೆ ಒಳಗೆ ಯಾವುದಾದರು ಸಂಖ್ಯೆಗೆ 200/- ರೂ ಕಟ್ಟಿದರೆ, ಅದಕ್ಕೆ ವಿನ್ನಿಂಗ್ ನಂಬ್ರಕ್ಕೆ 1500/ ರೂ ಕೊಡುವುದಾಗಿ ಹೇಳಿ ಹಣವನ್ನು ಪಣವಾಗಿರಿಸಿ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಶಂಕರನಾರಾಯಣ ಠಾಣಾಧಿಕಾರಿ ಶ್ರೀಧರ್ ನಾಯ್ಕ್ ಅವರಿಗೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಏಳು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರಿಂದ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ಆಟಕ್ಕೆ ಬಳಸಿದ ಮೊಬೈಲ್ ಪೋನ್-1 ನಗದು ಹಣ 3300/- ಕ್ರಿಕೆಟ್ ಸ್ಕೋರನ ಸಂಖ್ಯೆ ಬರೆದ ಚೀಟಿಯನ್ನು ವಶಪಡಿಸಿಕೊಂಡಿರುತ್ತಾರೆ

ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love