ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್ ಮಾಸ್ಟರ್ ನಿಧನ

Spread the love

ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್ ಮಾಸ್ಟರ್ ನಿಧನ

ಕಾಸರಗೋಡು: ಶತಾಯುಷಿ ಸ್ವಾತಂತ್ರ್ಯ ಹೋರಾಟಗಾರ ಕೆ.ಪಿ.ಮದನ್ ಮಾಸ್ಟರ್ ಅವರು ಪೆರ್ಲದ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಹಾತ್ಮಾ ಗಾಂಧಿಯವರ ಜೊತೆ ಸ್ವಾತಂತ್ರ್ಯ ಹೋರಾಟದಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ್ದರು.

ಭೂ ಸುಧಾರಣೆ ಕಾನೂನಿನ ಅನುಷ್ಠಾನಕ್ಕೆ ಅರ್ಹನಿಶಿ ಸ್ವಯಂಪ್ರೇರಿತರಾಗಿ ಕೆಲಸ ಮಾಡಿದ್ದ ಮಾಸ್ಟರ್ ಅವರು ಅನೇಕ ಮಂದಿಗೆ ಜಮೀನು ಸಿಗಲು ನೆರವಾಗಿದ್ದರು. ಕನ್ನಡಪರ ಹೋರಾಟಗಾರರಾಗಿಯೂ ಖ್ಯಾತಿ ಹೊಂದಿದ್ದರು.

ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದ ಮದನ್ ಮಾಸ್ಟರ್ ಅವರು ಶಿಕ್ಷಕರಾಗಿ ಖ್ಯಾತಿ ಹೊಂದಿದ್ದು, ರಾಜಿ ಪಂಚಾಯಿತಿಗಳ ಮೂಲಕವೂ ಜನಪ್ರಿಯರಾಗಿದ್ದರು. ಜೇನು ಸಾಕಾಣಿಕೆಯನ್ನೂ ಜನಪ್ರಿಯಗೊಳಿಸಿದ್ದರು.
ಇತ್ತೀಚೆಗೆ ಸ್ವಲ್ಪ ಅಸ್ವಸ್ಥರಾಗಿದ್ದರು.


Spread the love