ಶಬರಿಮಲೆಯಲ್ಲಿ ಹಿಂದಿನ ಸಂಪ್ರದಾಯ ಮುಂದುವರಿಯಲಿ: ಡಾ.ವೀರೇಂದ್ರ ಹೆಗ್ಗಡೆ

Spread the love

ಶಬರಿಮಲೆಯಲ್ಲಿ ಹಿಂದಿನ ಸಂಪ್ರದಾಯ ಮುಂದುವರಿಯಲಿ: ಡಾ.ವೀರೇಂದ್ರ ಹೆಗ್ಗಡೆ

ಮಂಗಳೂರು: ಪ್ರಾರ್ಥನಾ ಮಂದಿರಗಳಿಗೆ ಮಹಿಳೆಯರ ಪ್ರವೇಶ ನಿಷೇಧ ನಿಯಮ ವಿದೇಶಗಳಲ್ಲಿಯೂ ಇದೆ. ಧಾರ್ಮಿಕ ಕ್ಷೇತ್ರಗಳ ಸೌಂದರ್ಯ ಹಾಳು ಮಾಡಬಾರದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯ ಪಟ್ಟಿದ್ದಾರೆ.

ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ಶಬರಿಮಲೆಗೆ ಹೋಗುವುದರಲ್ಲಿ 48 ದಿವಸಗಳ ವ್ರತ ಮಾಡುವ ನಿಯಮವಿದೆ. ಮನೋನಿಗ್ರಹ, ಸಂಯಮದ ಪಾಲನೆ ಅಲ್ಲಿ ಮುಖ್ಯವಾಗುತ್ತದೆ. ಮೂಲ ಉದ್ದೇಶ, ಪಾವಿತ್ರ್ಯಕ್ಕೆ ಧಕ್ಕೆ ತರುವುದು ಸರಿಯಲ್ಲ ಎಂದಿದ್ದಾರೆ.

ವ್ರತ ನಿಷ್ಠರು ಮಹಿಳೆಯರು ಮಾಡಿದ ಆಹಾರವನ್ನೂ ಸ್ವೀಕರಿಸುವುದಿಲ್ಲ. ಮಹಿಳೆಯರ ದರ್ಶನದಿಂದ ವ್ರತಧಾರಿಗಳ ಸಂಯಮಕ್ಕೆ ಧಕ್ಕೆ ಬರಬಹುದು. ಮಹಿಳೆಯರಿಗೆ ಭಕ್ತಿಯಿದ್ದರೆ ಕ್ಷೇತ್ರಕ್ಕೆ ಹೋಗಿಯೇ ಆರಾಧನೆ ಮಾಡಬೇಕಿಲ್ಲ. ಮನೆಯಲ್ಲೂ ದೇವರ ಆರಾಧನೆ ಮಾಡಬಹುದು ಎಂದು ಹೇಳಿದ್ದಾರೆ.


Spread the love