ಶರತ್ ಶವಯಾತ್ರೆಯಲ್ಲಿ ಸಂಘ ಪರಿವಾರದಿಂದ ದಾಂಧಲೆ ಪಾಪ್ಯುಲರ್ ಫ್ರಂಟ್ ಖಂಡನೆ

Spread the love

ಶರತ್ ಶವಯಾತ್ರೆಯಲ್ಲಿ ಸಂಘಪರಿವಾರದಿಂದ ದಾಂಧಲೆ ಪಾಪ್ಯುಲರ್ ಫ್ರಂಟ್ ಖಂಡನೆ

ಮಂಗಳೂರು: ದುಷ್ಕರ್ಮಿಗಳಿಂದ ಹತ್ಯೆಯಾದ ಶರತ್‌ ಶವಯಾತ್ರೆಯಲ್ಲಿ ಸಂಘಪರಿವಾರದ ಗೂಂಡಾಗಳು ಬಿಸಿರೋಡಿನಲ್ಲಿ ಅಂಗಡಿ ಮುಂಗಟ್ಟುಗಳಿಗೆ‌ ಹಾಗೂ ಮುಸ್ಲಿಮರ ಕಾರುಗಳಿಗೆ ಕಲ್ಲು ತೂರಾಟ ನಡೆಸಿದ್ದು ಹಲವಾರು ಅಂಗಡಿಗಳಿಗೆ ವಾಹನಗಳಿಗೆ ಹಾನಿಯಾಗಿದೆ. ಅದಲ್ಲದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತು ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರನ್ನು ವಿಚಾರಿಸಿ ಮುಸ್ಲಿಮನೆಂದು ಖಚಿತ ಪಡಿಸಿ ಮಾರಕಾಯುಧಗಳಿಂದ ಹಲ್ಲೆಗಳನ್ನು ನಡೆಸಿದ್ದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಇದನ್ನು ತೀವ್ರವಾಗಿ ಖಂಡಿಸುತ್ತಿದ್ದು, ಜಿಲ್ಲಾಡಳಿತದ ವೈಫಲ್ಯವೇ ಇದಕ್ಕೆ ನೇರ ಕಾರಣ ಎಂದು ಆರೋಪಿಸಿದೆ.

ಬಿಸಿ ರೋಡ್‌ನಲ್ಲಿ ಜಮಾವಣೆಗೊಂಡಿದ್ದ ಹಲವರು ಮೃತ ಶರತ್ ಅಂತಿಮ ದರ್ಶನ ಮಾಡಬೇಕೆಂದು ಪಟ್ಟು ಹಿಡಿದು, ಸಂಘಪರಿವಾರ ಮತ್ತು ಪೋಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿಯ ಲಾಭ ಪಡೆದ ಸಂಘಪರಿವಾರದ ಕಿಡಿಗೇಡಿಗಳು ಮುಸ್ಲಿಮರು ಕಲ್ಲುತೂರಾಟ ಮಾಡಿದ್ದಾರೆಂಬ ನಿರಾಧಾರ ನೆಪವನ್ನೊಡ್ಡಿ ಕಲ್ಲು ತೂರಾಟ ನಡೆಸಿ, ಅಮಾಯಕರ ಮೇಲೆ ಹಲ್ಲೆ ದಾಂಧಲೆ ನಡೆಸಿದ್ದಾರೆ. ಪೊಲೀಸರು ಕೂಡಾ ಕೈಕಂಬ, ಬಿಸಿರೋಡಿನಲ್ಲಿ ಅಂಗಡಿಯಲ್ಲಿದ್ದ ಕೆಲಸಮಾಡುವವರನ್ನು, ಬಸ್ಸಿಗೆ ಕಾಯುತ್ತಿದ್ದ ಅಮಾಯಕರನ್ನು ಬಂಧಿಸಿದ್ದು ದಾಂಧಲೆ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಲು ವಿಫಲರಾಗಿದ್ದಾರೆ.

ಈಗಾಗಲೇ ಸಂಘಪರಿವಾರದ ಕಿಡಿಗೇಡಿಗಳು ಶವಯಾತ್ರೆಯ ನಡುವೆ ಕಲ್ಲು ಸಂಗ್ರಹಮಾಡುವ ವೀಡಿಯೋಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಘಟನೆಯ ಸತ್ಯಾ ಸತ್ಯತೆ ಬಗ್ಗೆ ಪೊಲೀಸ್ ಇಲಾಖೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಮತ್ತು ಅಮಾಯಕರನ್ನು ಬಿಡುಗಡೆಗೊಳಿಸಿ ನ್ಯಾಯಪಾಲನೆ ಮಾಡಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದ.ಕ ಜಿಲ್ಲಾಧ್ಯಕ್ಷ ನವಾಝ್ ಉಳ್ಳಾಲರವರು ಆಗ್ರಹಿಸಿದ್ದಾರೆ.


Spread the love

1 Comment

  1. kallu hodeyuvudu muslim darmadalli mathra acharisuthare adu avara hakku adakke RSSannu thruva agathya ella bere dhrmadavaru hoovu bisaduthare kallu alla PFI ondu kedigadi sangatane adara suddige yava mahathva illa

Comments are closed.